Politics
ಎಚ್‌ಡಿಡಿಗೆ ಈ ದಿನ ಬಹಳ ವಿಶೇಷ.

ಬೆಂಗಳೂರು: ಜೆಡಿಎಸ್ ಪಕ್ಷದ ಹಿರಿಯ ಮುಖಂಡರು, ಮಾಜಿ ಪ್ರಧಾನಿ ಮಂತ್ರಿಗಳಾದ ಎಚ್.ಡಿ. ದೇವೇಗೌಡ ಅವರಿಗೆ, ಜೂನ್ 1 ಬಹಳ ವಿಶೇಷ ದಿನವಾಗಿದೆ. ಕರ್ನಾಟಕದ ಇತಿಹಾಸದಲ್ಲಿ ದೇವೇಗೌಡರು ಈ ದಿನವನ್ನು ಸುವರ್ಣಾಕ್ಷರಗಳಲ್ಲಿ ಬರೆದಿದ್ದರು.
ಯಾಕೆ ಹಾಗಾದರೆ ಜೂನ್ 1 ವಿಶೇಷ?
ಇದೇ ದಿನದಂದು ಎಚ್.ಡಿ. ದೇವೇಗೌಡ ಅವರು ನಮ್ಮ ದೇಶದ 11ನೇ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಿದ್ದರು. ಇವರು ಕರ್ನಾಟಕ ಮೂಲದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಇದು ನಮ್ಮ ರಾಜ್ಯವೇ ಹೆಮ್ಮೆ ಪಡುವ ವಿಷಯ.
ಇವರ ಆಡಳಿತ ಕಾಲದಲ್ಲಿ ದೆಹಲಿ ಮೆಟ್ರೋ ಅಭಿವೃದ್ಧಿ ಕಾಮಗಾರಿಯು ಶರವೇಗದಲ್ಲಿ ಮುಂದುವರೆಯಿತು. ಅವರ ಜನಪರ ಹಾಗೂ ರೈತಪರ ಯೋಜನೆಗಳು ಈಗಲೂ ದೇಶದಲ್ಲಿ ಮನೆಮಾತಾಗಿದೆ.