Bengaluru
ಮುಂದಿನ 5 ದಿನಗಳು ಅತಿ ಭಾರೀ ಮಳೆ ಸಾಧ್ಯತೆ; ಹವಾಮಾನ ಇಲಾಖೆ.
ಉತ್ತರ ಕನ್ನಡ: ರಾಜ್ಯದಲ್ಲಿ ವರುಣ ತನ್ನ ಆರ್ಭಟಕ್ಕೆ ತಡೆ ನೀಡುವ ಯಾವುದೇ ಲಕ್ಷಣಗಳು ಗೋಚರವಾಗುತ್ತಿಲ್ಲ. ಕಳೆದ ಹಲವು ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ, ಸಾಧಾರಣ ಮಳೆಯಿಂದ ಹಿಡಿದು ಭಾರಿ ಮಳೆ ಸಂಭವಿಸಿದೆ. ರಾಜ್ಯದ ಮಳೆ ಪ್ರಮಾಣವನ್ನು ಗಮನಿಸಿ, ಭಾರತೀಯ ಹವಾಮಾನ ಇಲಾಖೆ ರಾಜ್ಯಕ್ಕೆ ಮುನ್ಸೂಚನೆಯನ್ನು ನೀಡಿದೆ.
ಈ ಬಾರಿ ಕರ್ನಾಟಕದ ಕರಾವಳಿ ಭಾಗವಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳು ಅತಿ ಭಾರೀ ಮಳೆಗೆ ತುತ್ತಾಗಲಿವೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಜುಲೈ 8,10,11 ಮತ್ತು 12 ರಂದು ಕರಾವಳಿ ಜಿಲ್ಲೆಗಳು ಅತಿ ಭಾರೀ ಮಳೆಯನ್ನು ಹೊಂದಲಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
ಈ ಮೂರು ಜಿಲ್ಲೆಗಳನ್ನು ಭಾರತೀಯ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ನಲ್ಲಿ ಇಟ್ಟಿದೆ. ಜುಲೈ 9 ರಂದು ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಕೂಡ ಹೇಳಿದೆ.