CinemaEntertainment
‘ಹಮಾರೆ ಬಾರಾಹ್’ ಚಿತ್ರಕ್ಕೆ ಹೈಕೋರ್ಟ್ ಅಸ್ತು.
ಮುಂಬೈ: ದೇಶದಾದ್ಯಂತ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ಹಿಂದಿ ಚಲನಚಿತ್ರ ‘ಹಮಾರೆ ಬಾರಾಹ್’ ಬಿಡುಗಡೆಗೆ ಮುಂಬೈ ಹೈಕೋರ್ಟ್ ಒಪ್ಪಿಗೆ ಸೂಚಿಸಿದೆ. ಈ ಚಿತ್ರವನ್ನು ಕರ್ನಾಟಕ ರಾಜ್ಯ ಸರ್ಕಾರ ಬ್ಯಾನ್ ಮಾಡಿತ್ತು. ಈ ಚಿತ್ರವನ್ನು ಜೂನ್ 21ಕ್ಕೆ ತೆರೆಯ ಮೇಲೆ ತರಲಾಗುವುದು ಎಂದು ಚಿತ್ರದ ನಿರ್ದೇಶಕ ಕಮಲ್ ಚಂದ್ರ ಹೇಳಿದ್ದಾರೆ.
ಹೈಕೋರ್ಟ್ ನಿರ್ಣಯದ ನಂತರ ಪ್ರತಿಕ್ರಿಯಿಸಿದ ಕಮಲ್ ಚಂದ್ರ ಅವರು, “ನಾವು ಹೈಕೋರ್ಟ್ಗೆ ಧನ್ಯವಾದ ಹೇಳುತ್ತೇವೆ… ಚಿತ್ರವು ಶುಕ್ರವಾರ, ಜೂನ್ 21 ರಂದು ಬಿಡುಗಡೆಯಾಗಲಿದೆ. ಇದು ಭಾರತದಾದ್ಯಂತ ಮತ್ತು ಕೆಲವು ಸಾಗರೋತ್ತರ ದೇಶಗಳಲ್ಲಿ ಬಿಡುಗಡೆಯಾಗಲಿದೆ…” ಎಂದಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರ ಈ ಚಿತ್ರವನ್ನು ಬಿಡುಗಡೆ ಮಾಡಿದರೆ ರಾಜ್ಯದಲ್ಲಿ ಕೋಮುಗಲಭೆ ಉಂಟಾಗುವ ಸಾಧ್ಯತೆಗಳಿವೆ ಎಂದು ಕಾರಣ ನೀಡಿತ್ತು.