BengaluruCinemaEntertainment
ದಾಸನಿಗೆ ಬೇಕಂತೆ ಮನೆ ಊಟ ಹಾಗೂ ಬೆಡ್ಡ್; ಮನವಿ ಮುಂದೂಡಿದ ಹೈಕೋರ್ಟ್.

ಬೆಂಗಳೂರು: ರೇಣುಕು ಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರುವ ನಟ ದರ್ಶನ್ ತೂಗುದೀಪ್, ತಮಗೆ ಮನೆ ಊಟ, ಜೈಲಿನಲ್ಲಿ ವೈಯಕ್ತಿಕ ಬಟ್ಟೆ, ಬೆಡ್, ಕಟ್ಲರಿ ಮತ್ತು ಪುಸ್ತಕಗಳು ಬೇಕೆಂದು ರಾಜ್ಯದ ಉಚ್ಛ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಆದರೆ ನ್ಯಾಯಾಲಯ ಇವರ ಮನವಿಯನ್ನು ಮುಂದೂಡಿದೆ.
ದರ್ಶನ್ ಅವರ ನ್ಯಾಯಾಂಗ ಬಂಧನವನ್ನು ಜುಲೈ 18ರವರೆಗೆ ವಿಸ್ತರಿಸಲಾಗಿದೆ. ಜೈಲಿನ ಆಹಾರ ಹಾಗೂ ವಾತಾವರಣ ದರ್ಶನ್ ಅವರ ಆರೋಗ್ಯದಲ್ಲಿ ಏರುಪೇರನ್ನು ತಂದಿದೆ ಎನ್ನಲಾಗಿದೆ. ಇವರಲ್ಲಿ ತೂಕ ನಷ್ಟ ಹಾಗೂ ಅತಿಸಾರ ಲಕ್ಷಣಗಳು ಕಂಡು ಬಂದಿದೆ. ಇದಕ್ಕೆ ಕಾರಣ ಫುಡ್ ಪಾಯ್ಸನ್ ಎಂದು ಜೈಲಿನ ವೈದ್ಯರು ತಿಳಿಸಿದ್ದಾರೆ. ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಆರೋಪದ ಅಡಿಯಲ್ಲಿ ಬಂಧನಕ್ಕೆ ಒಳಗಾಗಿ ಇದೀಗ ತಿಂಗಳು ತುಂಬುತ್ತ ಬಂದಿದೆ.