“ಕಲ್ಲು ಹೊಡೆದರೆ ಹಣ್ಣು ನೀಡಲು ಹಿಂದೂಗಳು ಮಾವಿನಮರವಲ್ಲ”- ಪ್ರತಾಪ್ ಸಿಂಹ ಅವರ ಈ ಹೇಳಿಕೆ ಯಾಕೆ?!

ಮಂಡ್ಯ: ನಾಗಮಂಗಲ ತಾಲ್ಲೂಕಿನ ಗಣೇಶೋತ್ಸವ ಆಚರಣೆಯ ಸಂದರ್ಭದಲ್ಲಿ ಸಂಭವಿಸಿದ ಕೋಮು ಗಲಭೆ ಈಗ ರಾಜ್ಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಅತ್ಯಂತ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದೀಗ ಅವರ ಹೇಳಿಕೆ ಬೆಂಕಿಯ ಕಿಡಿಯಂತೆ ಹೊತ್ತಿ ಉರಿಯುತ್ತಿದೆ.
ಸಿಂಹ ಅವರ ವೈರಲ್ ಹೇಳಿಕೆ:
“ಗಣೇಶ ಮೆರವಣಿಗೆ ಮೇಲೆ ಮುಸಲ್ಮಾನರು ಪೆಟ್ರೋಲ್ ಬಾಂಬ್ ಹಾಕಿದರೆ ನಾವು ಅವರಿಗೆ ಹೂಗುಚ್ಛ ಕೊಡೋಕಾಗುತ್ತಾ? ಮುಸಲ್ಮಾನರು ಕಲ್ಲು ಬಿಸಾಡಿದರೆ ಹಣ್ಣು ಕೆಳಗೆ ಹಾಕಲು ನಾವೇನು ಮಾವಿನ ಮರವಾ?” ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಇದೀಗ ಈ ಹೇಳಿಕೆ ರಾಜ್ಯದಲ್ಲಿ ಇನ್ನಷ್ಟು ವೈರಲ್ ಆಗುತ್ತಿದೆ.
ಒಂದಾಯಿತೇ ಹಿಂದೂ ಸಮಾಜ?
ಹಿಂದೂ ಧರ್ಮದ ಪ್ರಮುಖ ಹಬ್ಬವಾದ ಗಣೇಶೋತ್ಸವ ಎಂದರೆ, ಅಲ್ಲಿ ಯಾವುದೇ ಜಾತಿ ಮತ್ತು ಪಂಗಡದ ಗಡಿ ಬರುವುದಿಲ್ಲ. ನಾಗಮಂಗಲದಲ್ಲಿ ನಡೆದ ಈ ಹೇಯ ಕೃತ್ಯ ಈಗ ರಾಜ್ಯದ ಹಿಂದೂ ಧರ್ಮದ ಪ್ರತಿಯೊಬ್ಬರನ್ನೂ ಜಾಗೃತಗೊಳಿಸಿದೆ.
ಈದ್ ಮಿಲಾದ್ ಆಚರಣೆಗೆ ಹೈ ಅಲರ್ಟ್:
ಇದೇ ಸೋಮವಾರ, 16ಕ್ಕೆ ಈದ್ ಮಿಲಾದ್ ಹಬ್ಬವನ್ನು ರಾಜ್ಯದ ಮುಸಲ್ಮಾನರು ಆಚರಣೆ ಮಾಡಲಿದ್ದಾರೆ. ಈ ವೇಳೆ ರಾಜ್ಯದ ಪೋಲಿಸ್ ಇಲಾಖೆ ಹೈ ಅಲರ್ಟ್ ಅಲ್ಲಿ ಇರಲಿದೆ. ಗಣೇಶೋತ್ಸವದ ದಿನದಂದು ನಡೆದ ದುರ್ಘಟನೆಗೆ ಪ್ರತಿಯಾಗಿ ಹಿಂದೂ ಸಂಘಟನೆಗಳು ಪ್ರತಿಕಾರ ತೆಗೆದುಕೊಳ್ಳಬಹುದು ಎಂಬ ಭಯ ಈಗ ಉದ್ಭವಿಸಿದೆ.
“ಕಲ್ಲು ಹೊಡೆದರೆ ಹಣ್ಣು ನೀಡಲು ಹಿಂದೂಗಳು ಮಾವಿನಮರವಲ್ಲ” ಎಂದರೆ, ಈ ಮಾತಿನ ತಾತ್ಪರ್ಯ ಬೇರೆಯೇ ಇರಬಹುದು ಎನ್ನುವುದು ಜನರ ಅಭಿಪ್ರಾಯ. ಮುಂಬರುವ ಪ್ರತಿಕ್ರಿಯೆಗೆ ಈ ಮಾತು ಮೂಲವಾಗಬಹುದೇ?