Bengaluru
ಬೆಂಗಳೂರಿನಲ್ಲಿ ಮಳೆಯೋ ಮಳೆ
ಬೆಂಗಳೂರು: ಜೂನ್ 2 ರಂದು ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜೂನ್‌ನಲ್ಲಿ ಒಂದೇ ದಿನಕ್ಕೆ ಅತಿ ಹೆಚ್ಚು ಮಳೆ ಸುರಿದಂತಾಗಿದೆ. ಜೂನ್ 2 ರಂದು ಬೆಂಗಳೂರು ನಗರದಲ್ಲಿ ಬರೋಬ್ಬರಿ 111.1 ಮಿಮೀ ಮಳೆ ದಾಖಲಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರು ಪ್ರಕಾರ: “ಬೆಂಗಳೂರು ಮಳೆಯು ಜೂನ್‌ನಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಮಳೆಯೊಂದಿಗೆ 133 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ಜೂನ್ 2, 2024 ರಂದು ಬೆಂಗಳೂರು ನಗರವು ಅಭೂತಪೂರ್ವ 111.1 ಮಿಮೀ ಮಳೆಯನ್ನು ಕಂಡಿದೆ.
ನೀರಿಗೂ ಹಾಹಾಕಾರ ಪಡುತ್ತಿದ್ದ ಬೆಂಗಳೂರಿನಲ್ಲಿ ಮಳೆಯ ಅಬ್ಬರ ತುಸಿ ಬಿಸಿಯಿಂದ ತಣ್ಣಗಿನ ಅನುಭವ ಉಂಟುಮಾಡಿದೆ. ಮೂರು ತಿಂಗಳ ಬೆಂಗಳೂರು ಜನರ ಪರದಾಟ ಮಳೆಗಾಲದಿಂದಾರೂ ಕಡಿಮೆ ಆಗಲಿ ಎಂಬುದು ಎಲ್ಲರ ಆಸೆ.