Finance

2025ರ ರಜಾ ದಿನಗಳು: ಭಾರತೀಯ ಷೇರು ಮಾರುಕಟ್ಟೆಯ ರಜಾದಿನಗಳ ಪಟ್ಟಿ ಇಲ್ಲಿದೆ ನೋಡಿ..!

ಮುಂಬೈ: 2025ರ ಜನವರಿ 1ರಂದು, ಹೊಸ ವರ್ಷದ ಮೊದಲ ದಿನ, ಭಾರತೀಯ ಷೇರು ಮಾರುಕಟ್ಟೆ ಚಟುವಟಿಕೆಗಳು ಸರ್ವೇ ಸಾಧಾರಣ ರೀತಿಯಲ್ಲಿ ನಡೆಯುತ್ತವೆ. ಮುಂಜಾನೆ 9 ರಿಂದ 9:15 ರವರೆಗೆ ಪ್ರಾರಂಭವಾಗಲಿದ್ದು, 9:15 ರಿಂದ ಸಂಜೆ 3:30ರವರೆಗೆ ವ್ಯಾಪಾರ ಸಮಯವಿರುತ್ತದೆ.

2025ರ ಷೇರು ಮಾರುಕಟ್ಟೆ ರಜೆಗಳ ಪಟ್ಟಿ:
ಬಾಂಬೆ ಷೇರು ವಿನಿಮಯ (BSE) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE) ಬಿಡುಗಡೆ ಮಾಡಿದ 2025ರ ರಜೆ ಕ್ಯಾಲೆಂಡರ್ ಪ್ರಕಾರ, ಈ ವರ್ಷ ಒಟ್ಟು 14 ರಜೆಗಳಿರುತ್ತವೆ.

ಮುಖ್ಯ ರಜೆಗಳು:

  • ಮಹಾಶಿವರಾತ್ರಿ – ಫೆಬ್ರವರಿ 26, 2025 – ಬುಧವಾರ
  • ಹೋಳಿ – ಮಾರ್ಚ್ 14, 2025 – ಶುಕ್ರವಾರ
  • ರಮಝಾನ್ (ಇದ್-ಉಲ್-ಫಿತರ್) – ಮಾರ್ಚ್ 31, 2025 – ಸೋಮವಾರ
  • ಶ್ರೀ ಮಹಾವೀರ ಜಯಂತಿ – ಏಪ್ರಿಲ್ 10, 2025 – ಗುರುವಾರ
  • ಅಂಬೇಡ್ಕರ್ ಜಯಂತಿ – ಏಪ್ರಿಲ್ 14, 2025 – ಸೋಮವಾರ
  • ಗುಡ್ ಫ್ರೈಡೆ – ಏಪ್ರಿಲ್ 18, 2025 – ಶುಕ್ರವಾರ
  • ಮಹಾರಾಷ್ಟ್ರ ದಿನ – ಮೇ 1, 2025 – ಗುರುವಾರ
  • ಸ್ವಾತಂತ್ರ್ಯ ದಿನ – ಆಗಸ್ಟ್ 15, 2025 – ಶುಕ್ರವಾರ
  • ಗಣೇಶ ಚತುರ್ಥಿ – ಆಗಸ್ಟ್ 27, 2025 – ಬುಧವಾರ
  • ಗಾಂಧಿ ಜಯಂತಿ/ದಸರಾ – ಅಕ್ಟೋಬರ್ 2, 2025 – ಗುರುವಾರ
  • ದೀಪಾವಳಿ ಲಕ್ಷ್ಮೀ ಪೂಜೆ – ಅಕ್ಟೋಬರ್ 21, 2025 – ಮಂಗಳವಾರ
  • ದೀಪಾವಳಿ ಬಲಿ ಪಾಡ್ಯಮಿ – ಅಕ್ಟೋಬರ್ 22, 2025 – ಬುಧವಾರ
  • ಗುರು ನಾನಕ್ ಜಯಂತಿ – ನವೆಂಬರ್ 5, 2025 – ಬುಧವಾರ
  • ಕ್ರಿಸ್ಮಸ್ – ಡಿಸೆಂಬರ್ 25, 2025 – ಗುರುವಾರ

ಷೇರು ಮಾರುಕಟ್ಟೆ ದಿನಚರಿ ಮತ್ತು ವಿಶೇಷತೆಗಳು:

ಷೇರು ಮಾರುಕಟ್ಟೆ ಶನಿವಾರ ಮತ್ತು ಭಾನುವಾರಗಳು ಬಂದ್ ಆಗಿರುತ್ತದೆ.

ಸರಕು ವಿನಿಮಯ ಮಾರುಕಟ್ಟೆ (MCX) ಹೊಸ ವರ್ಷದ ದಿನ ಬೆಳಗಿನ ಸೆಶನ್ ಮಾತ್ರ ಕಾರ್ಯನಿರ್ವಹಿಸಲಿದೆ. ಸಂಜೆ ಸೆಶನ್ ಸಂಜೆ 5ಕ್ಕೆ ಮುಕ್ತಾಯಗೊಳ್ಳುತ್ತದೆ.

ವ್ಯಾಪಾರಿಗಳಿಗೆ ಮತ್ತು ಹೂಡಿಕೆದಾರರಿಗೆ ಎಚ್ಚರಿಕೆ!
2025 ರ ಷೇರು ಮಾರುಕಟ್ಟೆ ರಜೆಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಹೂಡಿಕೆ ಯೋಜನೆಗಳನ್ನು ತಯಾರಿಸಿಕೊಳ್ಳಿ. ಈ ರಜೆಗಳ ದಿನಗಳಲ್ಲಿ ಮಾರುಕಟ್ಟೆ ಬಂದ್ ಇರುವ ಕಾರಣ, ತಕ್ಷಣದ ನಿರ್ಧಾರಗಳು ತೆಗೆದುಕೊಳ್ಳಲು ಸಾಧ್ಯವಾಗದು. ವಿಶೇಷವಾಗಿ ದೀಪಾವಳಿ ಸಮಯದಲ್ಲಿ ಇನ್ವೆಸ್ಟರ್‌ಗಳಿಗೆ ಲಾಭದಾಯಕ ಅವಕಾಶಗಳು ಲಭ್ಯವಿರಬಹುದೆಂಬ ನಿರೀಕ್ಷೆ ಇದೆ.

Show More

Related Articles

Leave a Reply

Your email address will not be published. Required fields are marked *

Back to top button