ಒಂದು ಅಕ್ಷೌಹಿಣಿ ಎಂದರೆ ಎಷ್ಟು ಯೋಧರು?: ಮಹಾಭಾರತದಲ್ಲಿ ಹಾಗಾದರೆ ಎಷ್ಟು ಸೈನಿಕರು ಭಾಗವಹಿಸಿದ್ದರು..?!

ಮಹಾಭಾರತದ ಯುದ್ಧವನ್ನು ಕೇವಲ ಒಂದು ಕಥೆಯಾಗಿ ನೋಡಲು ಸಾಧ್ಯವಿಲ್ಲ. ಅದು ಜಗತ್ತಿನ ಅತ್ಯಂತ ವಿಶಾಲ ಯುದ್ಧ ರಚನೆಯ ಮಾದರಿಯನ್ನು ಪರಿಚಯಿಸುತ್ತದೆ. ಯುದ್ಧಭೂಮಿಯಲ್ಲಿ ಅಕ್ಷೌಹಿಣಿ ಎನ್ನುವ ಸೇನೆಗಳ ರಚನೆ ತನ್ನ ವೈಶಿಷ್ಟ್ಯತೆಗಾಗಿ ಪ್ರಸಿದ್ಧವಾಗಿದೆ.
ಅಕ್ಷೌಹಿಣಿ ಎಂದರೇನು?
ಅಕ್ಷೌಹಿಣಿ ಎಂದು ಕರೆಯಲ್ಪಡುವ ಸೇನೆಯು 21,870 ರಥಗಳು, 21,870 ಆನೆಗಳು, 65,610 ಕುದುರೆಗಳು, ಮತ್ತು 1,09,350 ಕಾಲ್ಧಳ ಯೋಧರನ್ನು ಹೊಂದಿತ್ತು. ಒಟ್ಟು 2,18,700 ಯೋಧರು ಈ ಸೇನೆಯಲ್ಲಿದ್ದರು.
ಮಹಾಭಾರತದ ಯುದ್ಧದಲ್ಲಿ ಸೇನೆಗಳ ಪ್ರಮಾಣ:
ಕುರುಕ್ಷೇತ್ರದ ಯುದ್ಧದಲ್ಲಿ ಪಾಂಡವರಿಗೆ 7 ಅಕ್ಷೌಹಿಣಿ (15,30,900 ಯೋಧರು) ಮತ್ತು ಕೌರವರಿಗೆ 11 ಅಕ್ಷೌಹಿಣಿ (24,05,700 ಯೋಧರು) ಸೇನೆ ಇತ್ತು. ಈ ಯುದ್ಧವನ್ನು ವಿಶ್ವದ ಅತ್ಯಂತ ದೊಡ್ಡ ಸೇನಾ ಸಂಘಟನೆ ಮೂಲಕ ನಡೆದದ್ದು ಎಂದು ಹೇಳಬಹುದು.
ಸೇನಾ ರಚನೆ:
- ಪಟ್ಟಿ: 1 ಆನೆ + 1 ರಥ + 3 ಕುದುರೆ + 5 ಪದಾತಿಗಳು = 10 ಯೋಧರು
- ಸೆನಾಮುಖ: 3 ಪಟ್ಟಿಗಳ ಸಮೂಹ = 30 ಯೋಧರು
- ಗುಲ್ಮ: 3 ಸೆನಾಮುಖಗಳು = 90 ಯೋಧರು
- ಗಣ: 3 ಗುಲ್ಮಗಳು = 270 ಯೋಧರು
- ವಾಹಿನಿ: 3 ಗಣಗಳು = 810 ಯೋಧರು
- ಪೃಥನಾ: 3 ವಾಹನಿಗಳು = 2,430 ಯೋಧರು
- ಚಾಮು: 3 ಪೃಥನಾಗಳು = 7,290 ಯೋಧರು
- ಅನಿಕಿನಿ: 3 ಚಾಮುಗಳು = 21,870 ಯೋಧರು
- ಅಕ್ಷೌಹಿಣಿ: 10 ಅನಿಕಿನಿಗಳು = 2,18,700 ಯೋಧರು
ಮಹಾಭಾರತದ ದರ್ಶನ:
ಅಕ್ಷೌಹಿಣಿಯ ಸೇನೆಗಳು ಕೇವಲ ರಥಗಳು ಮತ್ತು ಯೋಧರ ಗುಂಪಾಗಿರಲಿಲ್ಲ. ಇದು ಬಲದ ಪ್ರತೀಕವಾಗಿತ್ತು. ತಂತ್ರ, ಶಕ್ತಿ ಮತ್ತು ಸೈನಿಕ ನಿಷ್ಠೆಯ ವೈಭವವನ್ನು ಈ ರಚನೆ ತೋರಿಸುತ್ತವೆ.
ಈ ಪ್ರಾಚೀನ ಸೇನಾ ರಚನೆ ಇಂದಿಗೂ ನಮ್ಮ ಸೈನ್ಯಕ್ಕೆ ಮಾದರಿಯಾಗಿದೆ. ಹೀಗಾಗಿ, ಮಹಾಭಾರತದ ಯುದ್ಧ ನಮ್ಮ ಇತಿಹಾಸ, ತಂತ್ರಜ್ಞಾನ ಮತ್ತು ಶಕ್ತಿಯ ದೃಷ್ಟಿಕೋನವನ್ನು ತಿಳಿಸುವ ಅಮೂಲ್ಯ ಆಧಾರವಾಗಿದೆ.