CinemaEntertainment
ಮಾಲಾಶ್ರೀ ಮಗಳ ರ‍್ಯಾಂಪ್ ವಾಕ್ ಹೇಗಿತ್ತು?

ಬೆಂಗಳೂರು: ನಗರದ ಜೆಡಬ್ಲೂ ಮ್ಯಾರಿಯೊಟ್ ನಲ್ಲಿ ಆಯೋಜಿಸಲಾಗಿದ್ದ ಪ್ರತಿಷ್ಠಿತ ಪ್ಯಾಶನ್ ಶೋ ಕಾರ್ಯಕ್ರಮದಲ್ಲಿ, ಕಾಟೇರ ಚಿತ್ರದ ನಾಯಕ ನಟಿ ಆರಾಧನಾ ರಾಮು ಅವರು, ಗೌರಿ ಚಿತ್ರದ ನಾಯಕ ನಟ ಸಮರ್ಜಿತ್ ಲಂಕೇಶ್ ಅವರೊಂದಿಗೆ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ನೆರೆದಂತಹ ಪ್ಯಾಶನ್ ಪ್ರಿಯರಿಗೆ, ಅಪ್ಪಟ ದೇಶೀಯ ವಸ್ತ್ರಾಲಂಕಾರ ತೊಟ್ಟಿದ್ದ ಆರಾಧನಾ ರಾಮು ಅವರು ಆಕರ್ಷಕಣೆಯ ಕೇಂದ್ರವಾಗಿದ್ದು ಮಾತ್ರ ಸತ್ಯ.
ಈ ಉಡುಪನ್ನು ಖ್ಯಾತ ವಸ್ತ್ರ ವಿನ್ಯಾಸಕಿ ಆದಂತಹ ಜಯಂತಿ ಬಲ್ಲಾಳ್ ಅವರು ವಿನ್ಯಾಸ ಮಾಡಿದ್ದರು. ಆರಾಧನಾ ಹಾಗೂ ಸಮರ್ಜಿತ್ ಅವರು ತಮ್ಮ ರ್ಯಾಂಪ್ ವಾಕ್ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳಿಗೆ ನೆಟ್ಟಿಗರು ಮೆಚ್ಚುಗೆಯ ಶಬ್ದಗಳನ್ನು ಸುರಿಸಿದ್ದಾರೆ.