ಹುಬ್ಬಳ್ಳಿ ಶೂಟ್‌ಔಟ್: ಗುಜರಾತ್ ಮೂಲದ ಇಬ್ಬರು ದರೋಡೆಕೋರರ ಕಾಲಿಗೆ ಗುಂಡು! ಮೂವರು ಪರಾರಿ!

ಹುಬ್ಬಳ್ಳಿ: ನಗರದ ಹೊರವಲಯದಲ್ಲಿ ಇಂದು (ಫೆ. 4) ಬೆಳಗ್ಗೆ ಗುಂಡಿನ ಸದ್ದು ಕೇಳಿಬಂದಿದೆ! ಬೆಂಡಿಗೇರಿ ಠಾಣೆ ಪೊಲೀಸರು ಗುಜರಾತ್ ಮೂಲದ ಇಬ್ಬರು ಅಪರಾಧಿಗಳನ್ನು ಬಂಧಿಸಲು ಶೂಟ್‌ಔಟ್ ನಡೆಸಿದ್ದಾರೆ.
ಗಂಭೀರ ದರೋಡೆ ಪ್ರಕರಣ – ಪೊಲೀಸ್ ಶೂಟ್‌ಔಟ್!
ಗುಜರಾತ್ ಮೂಲದ ದಿಲೀಪ್ ಬಾಯಿ ಮತ್ತು ನಿಲೇಶ್ ಬಾಯಿ ಎಂಬ ಇಬ್ಬರು ಭೀಕರ ದರೋಡೆಕೋರರು ಮಂದಿರ, ಮನೆ, ಬೈಕ್ ಸವಾರರನ್ನು ಟಾರ್ಗೆಟ್ ಮಾಡಿಕೊಂಡು ಸುಲಿಗೆ ಮಾಡುತ್ತಿದ್ದರು. ಅವರ ವಿರುದ್ಧ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಬೆಂಡಿಗೇರಿ ಪೊಲೀಸರು ಬೆಳಗ್ಗೆಯೇ ಕಾರ್ಯಾಚರಣೆ ನಡೆಸಿ ಅವರ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ಪರಾರಿಯಾದ ಮೂವರು ಅಪರಾಧಿಗಳು – ಪೊಲೀಸ್ ಹುಡುಕಾಟ ತೀವ್ರ!
ಈ ದರೋಡೆಕೋರರ ತಂಡ ಒಟ್ಟು ಐದು ಮಂದಿ ಇದ್ದು, ಇನ್ನೂ ಮೂವರು ಪರಾರಿಯಾಗಿದ್ದಾರೆ. ಹುಬ್ಬಳ್ಳಿ ಪೊಲೀಸರ ತಂಡ ಈಗ ಪರಾರಿಯಾದ ಆರೋಪಿಗಳನ್ನು ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದೆ.
ಬೆಳ್ಳಂಬೆಳಗ್ಗೆ ನಡು ರಸ್ತೆಯಲ್ಲಿ ಕೃತ್ಯ!
ಸೋಮವಾರ ತಡರಾತ್ರಿ ಈ ತಂಡ ಕುಂದಗೋಳ ಮೂಲದ ವ್ಯಕ್ತಿಯನ್ನು ತಡೆದು, ಅವರ ಬೈಕ್, ಮೊಬೈಲ್ ಮತ್ತು ಹಣ ಕಿತ್ತುಕೊಂಡು ಹಲ್ಲೆ ನಡೆಸಿತ್ತು.ಇದಾದ ಕೆಲವೇ ಕ್ಷಣಗಳಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಸುಲಿಗೆ ಮಾಡಿ, ಮಂಟೂರು ರಸ್ತೆಯಲ್ಲಿಯೂ ದರೋಡೆಗೆ ಯತ್ನಿಸಿತ್ತು.
ನಗರದ 17 ಕಡೆ ನಾಕಾಬಂದಿ!
ಪೊಲೀಸರು ಈಗ ಅವಳಿ ನಗರದಲ್ಲಿ 17 ಕಡೆ ನಾಕಾಬಂದಿ ನಡೆಸಿ ಅಪರಾಧಿಗಳನ್ನು ಹಿಡಿಯಲು ಬಲೆ ಬೀಸಿದ್ದಾರೆ.