ಹೈದರಾಬಾದ್: ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್ ನಾಯಕ ಮೊಹಮ್ಮದ್ ಅಜ್ಹರುದ್ದೀನ್ ಅವರು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (HCA) ನಲ್ಲಿ ಹಣದ ದುರುಪಯೋಗ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. HCA ಅಧ್ಯಕ್ಷರಾಗಿದ್ದ ಸಮಯದಲ್ಲಿ ಹಣದ ಅವ್ಯವಹಾರ ನಡೆದಿರುವುದಾಗಿ ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ, ಅಜ್ಹರುದ್ದೀನ್ ಅವರನ್ನು ED ಈ ಗುರುವಾರ ಹಾಜರಾಗುವಂತೆ ಕೇಳಿದೆ.
ಇದು ಮೊಟ್ಟಮೊದಲ ಸಮನ್ಸ್ ಆಗಿದ್ದು, ಪ್ರಕರಣದ ಇನ್ನಷ್ಟು ವಿವರಗಳು ಬಹಿರಂಗಗೊಳ್ಳಬೇಕಿವೆ.