CinemaEntertainment
“ನಾನು ದೇವರಲ್ಲ”- ರಿಷಬ್ ಶೆಟ್ಟಿ.

ಬೆಂಗಳೂರು: ಕನ್ನಡ ಚಿತ್ರರಂಗದ ‘ಡಿವೈನ್ ಸ್ಟಾರ್’ ಎಂದೇ ಖ್ಯಾತಿ ಪಡೆದಿರುವ, ನಟಿ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ ಅವರು ಕಾಂತಾರ ಎರಡನೇ ಭಾಗದ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶೆಟ್ಟಿ ಅವರು “ನಾನು ದೇವರಲ್ಲ” ಎಂದು ಹೇಳಿದರು.
ಕಾಂತಾರ ಚಿತ್ರದ ಅದ್ಭುತ ನಟನೆಯಿಂದ ಜನರು ರಿಷಬ್ ಶೆಟ್ಟಿ ಅವರನ್ನು ದೈವದ ಸ್ವರೂಪದಂತೆ ಕಾಣಲು ಪ್ರಾರಂಭಿಸಿದ್ದಾರೆ. ಕರಾವಳಿಯ ಒಂದು ಸರಳ ಕಥೆಯನ್ನು ದೇಶದ ಮೂಲೆ ಮೂಲೆಗೂ ತಲುಪಿಸಿದ ಕೀರ್ತಿ ರಿಷಬ್ ಅವರದ್ದು. “ಅಭಿಮಾನಿಗಳು ನನ್ನನ್ನು ಕಂಡಾಗ ಕಾಲಿಗೆ ಎರಗಿ ನಮಸ್ಕರಿಸುತ್ತಾರೆ. ಆಗ ನನಗೆ ಹೇಳಲು ಶಬ್ದಗಳೇ ಇರುವುದಿಲ್ಲ. ನಾನು ಕೇವಲ ಕಲಾವಿದ ಹೊರತು ದೇವರಲ್ಲ.” ಎಂದು ರಿಷಬ್ ಶೆಟ್ಟಿ ಹೇಳಿದರು.
ಕಾಂತಾರ ಎರಡನೇ ಭಾಗದ ವಿಎಫ್‌ಎಕ್ಸ್ ಅದ್ಬುತವಾಗಿರಲಿದೆ. ಇದು ಕಲಾ ರಸಿಕರ ಕಣ್ಣಿಗೆ ಹಬ್ಬದಂತೆ ಭಾವಿಸಲಾಗಿದೆ ಎಂದು ತಿಳಿಸಿದರು.