Sports
ಭಾರತ ಕ್ರಿಕೆಟ್ ತಂಡದ ಅಭೂತಪೂರ್ವ ಸಾಧನೆ.
ನವದೆಹಲಿ: 2023ನೇ ಸಾಲಿನ ಐಸಿಸಿ ಪ್ರಶಸ್ತಿ. ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಸಾಲು ಸಾಲು ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
- ಐಸಿಸಿ ಪುರುಷರ ಟಿ20 ವರ್ಷದ ಕ್ರಿಕೆಟರ್ ಹಾಗೂ ಟಿ20 ವರ್ಷದ ತಂಡ ಕ್ಯಾಪನ್ನು ಸೂರ್ಯ ಕುಮಾರ್ ಯಾದವ್ ಪಡೆದಿದ್ದಾರೆ.
- ಐಸಿಸಿ ವರ್ಷದ ಟೆಸ್ಟ್ ತಂಡ ಕ್ಯಾಪನ್ನು ರವೀಂದ್ರ ಜಡೇಜಾ ಪಡೆದಿದ್ದಾರೆ.
- ಐಸಿಸಿ ವರ್ಷದ ಒಡಿಐ ತಂಡ ಕ್ಯಾಪನ್ನು ರೋಹಿತ್ ಶರ್ಮಾ, ಶುಭಮನ್ ಗಿಲ್, ಕುಲದೀಪ್ ಯಾದವ್, ಹಾಗೂ ಮಹಮದ್ ಸಿರಾಜ್ ಪಡೆದಿದ್ದಾರೆ.
- ಐಸಿಸಿ ವರ್ಷದ ಟಿ20 ತಂಡದ ಕ್ಯಾಪನ್ನು ಅರ್ಶದೀಪ್ ಸಿಂಗ್ ಪಡೆದಿದ್ದಾರೆ.
ಭಾರತ ಕ್ರಿಕೆಟ್ ತಂಡದ ಈ ಅಭೂತಪೂರ್ವ ಸಾಧನೆಗೆ ಕ್ರಿಕೆಟ್ ದಿಗ್ಗಜರು, ಅಭಿಮಾನಿಗಳು ಅಭಿನಂದನೆಗಳ ಮಹಾಪೂರವನ್ನೇ ಸುರಿಸಿದ್ದಾರೆ.