Bengaluru

ಅನಧಿಕೃತ ಫ್ಲೆಕ್ಸ್, ಬ್ಯಾನರ್‌ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟ ಸೂಚನೆ

ಅರಮನೆ ಮೈದಾನದ ಸಮೀಪ ಅನಧಿಕೃತ ಬ್ಯಾನರ್‌ಗಳ ವಿರುದ್ಧ ದಂಡದ ಎಚ್ಚರಿಕೆ (Illegal Flex Ban in Bangalore)

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳ (Illegal Flex Ban in Bangalore) ಅಬ್ಬರ ಕಡಿಮೆ ಮಾಡಲು ಡಿಸಿಎಂ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ (DK Shivakumar) ಅವರು ಕಠಿಣ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಕಮಿಷನರ್‌ಗಳಿಗೆ (BBMP Commissioner) ಸ್ಪಷ್ಟ ಸೂಚನೆ ನೀಡಿದ್ದಾರೆ.

Illegal Flex Ban in Bangalore

ಪದಗ್ರಹಣ ಕಾರ್ಯಕ್ರಮ ಹಿನ್ನೆಲೆಯಲ್ಲಿ ಡಿಸಿಎಂ ಕಠಿಣ ಎಚ್ಚರಿಕೆ

ಮಾರ್ಚ್ 17ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಪ್ರದೇಶ ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ (Youth Congress Oath Ceremony) ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಹಿನ್ನೆಲೆ ನಗರದೆಲ್ಲೆಡೆ ರಾಜಕೀಯ ಶಕ್ತಿ ಪ್ರದರ್ಶನದ ಭಾಗವಾಗಿ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳನ್ನು ಸುರಿಯಲಾಗಿದೆ. ಈ ಸಂದರ್ಭದಲ್ಲಿ ಡಿಸಿಎಂ ಅವರು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್‌ (BBMP Commissioner Tushar Girinath) ಅವರಿಗೆ ಕಠಿಣ ಸೂಚನೆ ನೀಡಿ, ಅನಧಿಕೃತ ಬ್ಯಾನರ್‌ಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆದೇಶಿಸಿದ್ದಾರೆ.

ಸಂಯುಕ್ತ ಕಾರ್ಯಾಚರಣೆಗೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ

ಒಂದೊಮ್ಮೆ ಈ ಆದೇಶ ಪಾಲನೆಯಾಗದಿದ್ದರೆ, ಸಂಬಂಧಪಟ್ಟ ರಾಜಕೀಯ ನಾಯಕರಾಗಲಿ, ಕಾರ್ಯಕರ್ತರಾಗಲಿ ಅವರ ವಿರುದ್ಧ ದಂಡ ಮತ್ತು ಕಾನೂನು ಕ್ರಮ ಜರುಗಿಸಬೇಕು ಎಂದು ಡಿಸಿಎಂ ಕಟ್ಟುನಿಟ್ಟಾಗಿ ಹೇಳಿದ್ದಾರೆ. ಈ ಆದೇಶವನ್ನು ಪಾಲಿಸದ ಯಾವುದೇ ಪಕ್ಷದ ನಾಯಕರಾದರೂ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ನಗರ ಸೌಂದರ್ಯಕ್ಕೆ ಹಾನಿ: ಡಿಸಿಎಂ ಅಸಮಾಧಾನ

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ನಗರದ ಸೌಂದರ್ಯ ಉಳಿಸಬೇಕಾದ ಅಗತ್ಯವನ್ನು ಹೈಲೈಟ್ ಮಾಡುತ್ತ, ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್‌ಗಳು ನಗರ ದೃಶ್ಯವನ್ನು ಹಾಳು ಮಾಡಬಾರದು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಈ ಬಗ್ಗೆ ಸರ್ಕಾರ ಹಲವು ಬಾರಿ ಆದೇಶ ಹೊರಡಿಸಿದೆ, ಆದರೆ ಅದನ್ನು ನಿರ್ಲಕ್ಷಿಸಲಾಗುತ್ತಿದೆ. ಈಗ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಕೂಡ ಯಾವುದೇ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳಿಗೆ ಸ್ಥಳವಿಲ್ಲ” ಎಂದು ಅವರು ಖಡಕ್ ಹೇಳಿಕೆ ನೀಡಿದ್ದಾರೆ.

ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆ

ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಬ್ಯಾನರ್, ಹೋರ್ಡಿಂಗ್, ಪೋಸ್ಟರ್ ಅಂಟಿಸುವವರಿಗೆ ಕಾನೂನು ಪ್ರಕಾರ ದಂಡ ಮತ್ತು ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ. ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಬಿಬಿಎಂಪಿ ಅಧಿಕಾರಿಗಳ ಜತೆಗೂಡಿ ತಕ್ಷಣ ಕಾರ್ಯಾಚರಣೆ ನಡೆಸಲಿದ್ದಾರೆ.

ಅನಧಿಕೃತ ಬ್ಯಾನರ್ (Illegal Flex Ban in Bangalore) ತಕ್ಷಣ ತೆರವುಗೊಳಿಸಿ: ಬಿಬಿಎಂಪಿ ಸೂಚನೆ

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಮುಖ ವೃತ್ತಗಳು, ರಸ್ತೆ, ಪಾರ್ಕ್, ಸಾರ್ವಜನಿಕ ಸ್ಥಳಗಳಲ್ಲಿ ಈಗಾಗಲೇ ಬ್ಯಾನರ್ ತೆರವು ಕಾರ್ಯಾಚರಣೆ ಪ್ರಾರಂಭವಾಗಿದೆ. ಸಾರ್ವಜನಿಕರು ಕೂಡ ಈ ಬಗೆಗಿನ ದೂರುಗಳನ್ನು ಬಿಬಿಎಂಪಿ ಸಹಾಯವಾಣಿ ಸಂಖ್ಯೆಗೆ ದೂರು ದಾಖಲಿಸಬಹುದು ಎಂದು ಆಯುಕ್ತರು ತಿಳಿಸಿದ್ದಾರೆ.

ಬೆಂಗಳೂರು ಆಗಲಿದೆ ಬ್ಯಾನರ್ ಪ್ರೀ?! (Illegal Flex Ban in Bangalore)

ಬೆಂಗಳೂರು ನಗರದ ಸ್ವಚ್ಛತೆ ಮತ್ತು ಶ್ರೇಷ್ಟತೆಯನ್ನು ಕಾಪಾಡಲು ಅನಧಿಕೃತ ಬ್ಯಾನರ್‌ಗಳ ವಿರುದ್ಧ ಸರ್ಕಾರದ ಕಠಿಣ ಕ್ರಮ ಸೂಕ್ತ. ರಾಜಕೀಯ ಪಕ್ಷಗಳು ಕೂಡ ಸಾರ್ವಜನಿಕ ಪ್ರಾಧಿಕಾರಗಳ ಆದೇಶಗಳನ್ನು ಗೌರವಿಸಿ, ಅನಧಿಕೃತ ಫ್ಲೆಕ್ಸ್ ಹೋರ್ಡಿಂಗ್‌ನ ಬಳಕೆ ನಿಲ್ಲಿಸುವುದು ಆವಶ್ಯಕ.

Que Prachara

🚀 ನಿಮ್ಮ ಬ್ರ್ಯಾಂಡ್ ಗೆ ಡಿಜಿಟಲ್ ಬೂಸ್ಟ್ ನೀಡಿ! Que Prachara ಜೊತೆ ನಿಮ್ಮ ವ್ಯವಹಾರವನ್ನು ಮತ್ತಷ್ಟು ಬೆಳೆಸಿಕೊಳ್ಳಿ. ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ! 👉 Que Prachara

Gaurish Akki Studio

🎥 ಅಪ್ರತಿಮ ಕಥೆಗಳ ಮಂತ್ರ! ವೈಶಿಷ್ಟ್ಯಪೂರ್ಣ ಸಂದರ್ಶನಗಳು, ಆಕರ್ಷಕ ಡಾಕ್ಯುಮೆಂಟರಿಗಳು, ಮತ್ತು ಆಳವಾದ ಚರ್ಚೆಗಳಿಗೆ Gaurish Akki Studio ಗೆ ಭೇಟಿ ನೀಡಿ. ಸಬ್ ಸ್ಕ್ರೈಬ್ ಮಾಡಿ! 👉 Gaurish Akki Studio

Alma Media School

📢 ನಿಮ್ಮ ಮಾಧ್ಯಮ ಆಸಕ್ತಿಯನ್ನು ವೃತ್ತಿಯಾಗಿ ಮಾರ್ಪಡಿಸಿ! ಪ್ರಾಯೋಗಿಕ ಪತ್ರಿಕೋದ್ಯಮ ಮತ್ತು ಮಾಧ್ಯಮ ತರಬೇತಿಗಾಗಿ Alma Media School ಗೆ ಸೇರಿ. ಇಂದುಲೇ ನೋಂದಾಯಿಸಿ! 👉 Alma Media School

Akey News

📰 ನಿಖರ ಮತ್ತು ನಿಷ್ಪಕ್ಷಪಾತ ಸುದ್ದಿಗಳು! ವಿಶ್ವಾಸಾರ್ಹ ಹಾಗೂ ಆಳವಾದ ಸುದ್ದಿಗಾಗಿ Akey News ನೋಡಿ. ಇನ್ನೂ ಹೆಚ್ಚು ಓದಿ! 👉 Akey News

Show More

Related Articles

Leave a Reply

Your email address will not be published. Required fields are marked *

Back to top button