ನವದೆಹಲಿ: ಅಂತರಾಷ್ಟ್ರೀಯ ಹಣಕಾಸು ನಿಧಿಯ (IMF) ಉಪ ಕಾರ್ಯನಿರ್ವಹಣಾ ನಿರ್ದೇಶಕಿ ಗೀತಾ ಗೋಪಿನಾಥ್ ಅವರು ಭಾರತದ ಆರ್ಥಿಕ ಬೆಳವಣಿಗೆಯನ್ನು ಪ್ರಶಂಸಿಸಿದ್ದಾರೆ. ಮಾದ್ಯಮದ ಜೊತೆ ಮಾತನಾಡಿದ ಗೀತಾ ಗೋಪಿನಾಥ್ ಅವರು, “ಭಾರತದ ಆರ್ಥಿಕತೆ 7% ಬೆಳವಣಿಗೆ ಆಕಾಂಕ್ಷಿತವಾಗಿದೆ ಮತ್ತು ಮಧ್ಯಾವಧಿಯಲ್ಲಿ 6.5-7% ಬೆಳವಣಿಗೆಯನ್ನು ಸಾಧಿಸಲಿದೆ. ಇದು ಜಾಗತಿಕ ಬೆಳವಣಿಗೆಗೆ 17% ಕೊಡುಗೆ ನೀಡುತ್ತಿದೆ,” ಎಂದಿದ್ದಾರೆ.
ಅವರ ಪ್ರಕಾರ, ಹೆಚ್ಚಿನ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು, ಸರಕಾರವು ಶಕ್ತಿಶಾಲಿ ಸುಧಾರಣಾ ಕಾರ್ಯಸೂಚಿಯನ್ನು ರೂಪಿಸಬೇಕು.
ಉದ್ಯೋಗ ವೃದ್ಧಿ ಮತ್ತು ವ್ಯವಹಾರ ಸುಲಭಗೊಳಿಸುವಿಕೆಯನ್ನು ಒತ್ತಿಹೇಳಿರುವ ಗೀತಾ ಗೋಪಿನಾಥ್ ಅವರು, ಹೂಡಿಕೆಗಳನ್ನು ಆಕರ್ಷಿಸಿ, ದೇಶದ ಆರ್ಥಿಕತೆಯನ್ನು ಉತ್ತೇಜಿಸಲು ಸರ್ಕಾರವು ಕ್ರಮಗಳನ್ನು ಕೈಗೊಳ್ಳಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.