Sports
ಕಾಂಗರೂಗಳ ಕಾಲು ಮುರಿದ ಭಾರತ.
ಅಮೇರಿಕಾ: 2024ನೇ ಸಾಲಿನ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಅನೇಕ ರೋಚಕತೆಗಳಿಗೆ ಸಾಕ್ಷಿಯಾಗಿದೆ. ಭಾರತ ವಿರುದ್ಧ ಆಸ್ಟ್ರೇಲಿಯಾ ಕ್ರಿಕೆಟ್ ಪ್ರೇಮಿಗಳಿಗೆ ಅತ್ಯದ್ಭುತವಾದ ಮನರಂಜನೆ ನೀಡಿದ್ದು ಮಾತ್ರ ಸತ್ಯ. ನಿನ್ನೆ ನಡೆದ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಸೆಮಿ ಫೈನಲ್ಸ್ ಗೆ ದಾಪುಗಾಲು ಹಾಕಿದೆ.
ಭಾರತ ವಿರುದ್ಧ ಆಸ್ಟ್ರೇಲಿಯಾ ಪಂದ್ಯದಲ್ಲಿ, ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಮಾಡಲು ನಿರ್ಣಯಿಸಿತು. ಮೊದಲು ಬ್ಯಾಟಿಂಗ್ ಮಾಡಲು ಬಂದ ಭಾರತ ತಂಡ 5 ವಿಕೆಟ್ಗಳ ನಷ್ಟಕ್ಕೆ, 205 ರನ್ನುಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಈ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ 24 ರನ್ಗುಗಳ ಭರ್ಜರಿ ವಿಜಯವನ್ನು ಕಂಡಿತು. ಈ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಭಾರತ ತಂಡದ ನಾಯಕರಾದ ರೋಹಿತ್ ಶರ್ಮ ಅವರು 41 ಬೌಲ್ ಗಳಲ್ಲಿ 92 ರನ್ನುಗಳನ್ನು ಸಿಡಿಸುವ ಮೂಲಕ ಈ ಪ್ರಶಸ್ತಿಗೆ ಭಾಜನರಾದರು.