Alma Corner

4 ದಶಕಗಳ ಬಳಿಕ ಕುವೈತ್‌ಗೆ ಮೋದಿ..ರಕ್ಷಣೆ ಕ್ಷೇತ್ರದಲ್ಲಿ ಉಭಯ ದೇಶಗಳು ಮಹತ್ವದ ಒಪ್ಪಂದ…!

ಭಾನುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಕುವೈತ್‌ನ ಅಮೀರ್‌ ಶೇಕ್‌ ಅಲ್‌-ಅಹಮದ್‌ ಅಲ್-ಜಬರ್‌‌ ಅಲ್‌-ಸಬಾಹ, ತಮ್ಮ ಮೊದಲನೇ ದ್ವಿಪಕ್ಷೀಯ ಸಭೆ ನಡೆಸಿದರು. ಈ ಭೇಟಿಯಿಂದ ಉಭಯ ದೇಶಗಳು ತಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿವೆ.
ಕುವೈತ್‌ ನ ಬಯಾನ್‌ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ, ಮೋದಿ ಮತ್ತು ಶೇಖ್‌ ಮಿಶೆಲ್‌ ಅಲ್‌-ಅಹಮದ್‌ ಅಲ್‌-ಜಬರ್‌ ಅಲ್‌-ಸಬಾಹ ಅವರು ವಿಶೇಷವಾಗಿ ಮಾಹಿತಿ ತಂತ್ರಜ್ಞಾನ, ಔಷಧ, ಫಿನ್‌ಟೆಕ್‌, ಮೂಲಸೌಕರ್ಯ ಮತ್ತು ಭದ್ರತೆ ಕ್ಷೇತ್ರಗಳಲ್ಲಿ ಬಾಂಧವ್ಯವನ್ನು ಹೆಚ್ಚಿಸುತ್ತಾರೆಂದು ಸೂಚಿಸಿದರು.
ಕುವೈತ್‌ನಲ್ಲಿರುವ 10 ಲಕ್ಷಕ್ಕೂ ಅಧಿಕ ಭಾರತೀಯರ ಕ್ಷೇಮ ಮತ್ತು ಸುರಕ್ಷತೆಗೆ ಒತ್ತು ನೀಡಿರುವ ಕುವೈತ್‌ ನ ಅಮೀರ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದಗಳನ್ನು ತಿಳಿಸಿದರು.
ಅಲ್ಲದೆ, ಕೊಲ್ಲಿ ರಾಷ್ಟ್ರದ (gulf country) ಅಭಿವೃದ್ಧಿಯಲ್ಲಿ ಭಾರತೀಯ ಸಮುದಾಯ ನೀಡಿರುವ ಕೊಡುಗೆಗೂ ಮೆಚ್ಚುಗೆ ವ್ಯಕ್ತಪಡಿಸಿದರು.


ʼಅಮೀರ್‌ ಅವರೊಂದಿಗಿನ ಭೇಟಿ ಹಾಗೂ ಮಾತುಕತೆ ಉತ್ತಮವಾಗಿತ್ತು, ನಾವು ಔಷಧ, ಐ.ಟಿ, ಫಿನನಟೆಕ್‌, ಮೂಲಸೌಕರ್ಯ ಮತ್ತು ಭದ್ರತೆಯಂತಹ ಪ್ರಮುಖ ವಲಯಗಳಲ್ಲಿ ಸಹಕಾರ ಹೆಚ್ಚಿಸುವುದನ್ನು ಕುರಿತು ಮಾತಾನಾಡಿದ್ದೇವೆ. ನಮ್ಮ ರಾಷ್ಟ್ರಗಳ ನಡುವಿನ ನಿಕಟ ಭಾಂಧವ್ಯಕ್ಕೆ ಅನುಗುಣವಾಗಿ, ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಸ ಹಂತಕ್ಕೆ ಕೊಂಡೆಯ್ದಿದ್ದೇವೆ” ಎಂದು ಪ್ರಧಾನಿ ಮೋದಿ ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಅಮೀರ್‌ ಶೇಖ್‌ ಅವರ ಆಹ್ವಾನದ ಮೇರಿಗೆ ಮೋದಿ ಅವರು ಶನಿವಾರ ಕುವೈತ್‌ಗೆ ಎರಡು ದಿನಗಳ ಭೇಟಿ ನೀಡಿದರು. ಅವರಿಗೆ ಬಯಾನ್‌ ಅರಮನೆಯಲ್ಲಿ ಕುವೈತ್‌ ಪ್ರಧಾನಿ ಅಹಮದ್‌ ಅಲ್‌-ಅಬ್ದುಲ್ಲಾ ಅಲ್‌-ಅಹಮದ್‌ ಅಲ್‌-ಸಬಾಹ ಅವರು ಸ್ವಾಗತ ಕೋರಿದರು. ಭಾರತದ ಪ್ರಧಾನಿಯೊಬ್ಬರು ಸುಮಾರು 43 ವರ್ಷಗಳ ನಂತರ ಕುವೈತ್‌ಗೆ ಭೇಟಿ ನೀಡಿರುವುದು ಇದೇ ಮೊದಲು. ಇದೇ ವೇಳೆ ಪ್ರಧಾನಿ ಮೋದಿ ಕೂಡ ಅಮೀರ್‌ ಶೇಖ್‌ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು.
ಉಭಯ ದೇಶಗಳ ನಡುವೆ ಉತ್ತಮು ಸಂಬಂಧ ಬಲಪಡಿಸುವಲ್ಲಿ ಮೋದಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆಂದು ಅವರಿಗೆ ಕುವೈತ್‌ನ ಉನ್ನತ ಗೌರವ ʼದಿ ಆರ್ಡರ್‌ ಅಫ್‌ ಮುಬಾರಕ್‌ ಅಲ್‌-ಕಬೀರ್‌ʼ ಪ್ರಶಸ್ತಿ ನೀಡಿದ್ದಾರೆ. ಮೋದಿಯವರಿಗೆ ದೊರೆತ 20ನೇ ಅಂತರಾಷ್ಟ್ರಿಯ ಗೌರವ ಆಗಿದೆ. ಈ ಗೌರವವನ್ನು ಬಿಲ್‌ ಕ್ಲಿಂಟನ್‌, ಜಾರ್ಜ್‌ ಬುಷ್‌ ಅವರು ಸಹ ಪಡೆದಿದ್ದಾರೆ. ಮೋದಿ ಅವರು ಕೂಡ ಇವರ ಸಾಲಿಗೆ ಸೇರಿದ್ದಾರೆ.


ಕುವೈತ್‌ ತನ್ನ “ಮಿಷನ್‌ 2035” ಸಾಕಾರಕ್ಕೆ ಕೈಗೊಂಡಿರುವ ಹೊಸ ಉಪಕ್ರಮಗಳಿಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ಈ ತಿಂಗಳ ಆರಂಭದಲ್ಲಿ ಗಲ್ಫ ಸಹಕಾರಿ ಮಂಡಳಿಯ (gulf cooperation council) ಶೃಂಗ ಸಭೆಯನ್ನು ಯಶಸ್ವಿಯಾಗಿ ಸಂಘಟಿಸಿದಕ್ಕೆ ಅಮೀರ್‌ ಅವರನ್ನು ಮೋದಿ ಅಭಿನಂದಿಸಿದರು. ʼಮಿಷನ್‌ 2035ʼ ಸಾಕಾರಕ್ಕೆ ಭಾರತವು ಹೆಚ್ಚಿನ ಪಾತ್ರ ವಹಿಸುವುದನ್ನು ಕುವೈತ್ ಅಮೀರ್‌ ಎದುರು ನೋಡುತ್ತಿದ್ದಾರೆಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಧನ್ಯಾ ರೆಡ್ಡಿ ಎಸ್‌

ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿನಿ

Show More

Related Articles

Leave a Reply

Your email address will not be published. Required fields are marked *

Back to top button