GalleryPolitics

“ಭಾರತ 2011ರಲ್ಲೇ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿತ್ತು.”- ಖರ್ಗೆ.

ಕೇವಲ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಪ್ರಧಾನಿಯವರಿಗೆ, ನಿರುದ್ಯೋಗ, ಜಿಡಿಪಿ ದರ ಇಳಿಕೆಯ ಬಗ್ಗೆಯೂ ಕೂಡ ಮಾತನಾಡಿ ಎಂದು ಸವಾಲು ಎಸೆದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ.

“ಸಂವಿಧಾನದಲ್ಲಿ ನಂಬಿಕೆ ಇಲ್ಲದವರು ಕಾಂಗ್ರೆಸಿಗೆ ದೇಶಭಕ್ತಿಯ ಬಗ್ಗೆ ಉಪದೇಶ ಮಾಡುತ್ತಿದ್ದಾರೆ. ಎರಡೂ ಸದನಗಳಲ್ಲಿ ಮಾತನಾಡಿದ ಮೋದಿಜಿ ಕೇವಲ ಕಾಂಗ್ರೆಸನ್ನು ಶಪಿಸಿದ್ದಾರೆ ಹೊರತು, ಮೂಲ ಸಮಸ್ಯೆಗಳಾದ ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಅಸಮಾನತೆಗಳ ಕುರಿತು ಮಾತನಾಡಿಲ್ಲ.” ಎಂದರು.

2021ರ ಜನಗಣತಿ, ಉದ್ಯೋಗ ದತ್ತಾಂಶ, ಆರೋಗ್ಯ ಸಮೀಕ್ಷೆಗಳಂತಹ ಪ್ರಮುಖ ಮಾಹಿತಿಗಳನ್ನು ಸರ್ಕಾರ ಮರೆಮಾಚುತ್ತಿದೆ ಎಂದು ಆರೋಪಿಸಿದರು. “ಮೋದಿ ಕಿ ಗ್ಯಾರಂಟಿ ಕೇವಲ ಸುಳ್ಳುಗಳನ್ನು ಹರಡುವುದು.” ಎಂದು ಹೇಳಿದರು.

ಯುಪಿಎ ಅವಧಿಯಲ್ಲಿ ಶೇ.2.2ರಷ್ಟಿದ್ದ ನಿರುದ್ಯೋಗ ದರ ಈಗಿನ ಸರ್ಕಾರದ ಅವಧಿಯಲ್ಲಿ 45 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿದೆ, ನಮ್ಮ ಆಡಳಿತದ 10 ವರ್ಷಗಳ ಅವಧಿಯಲ್ಲಿ, ಸರಾಸರಿ ಜಿಡಿಪಿ ಬೆಳವಣಿಗೆ ದರವು 8.13 ಪ್ರತಿಶತದಷ್ಟಿತ್ತು ಆದರೆ ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಇದು ಕೇವಲ 5.6 ಪ್ರತಿಶತ ಏಕಿದೆ ಎಂದು ಪ್ರಶ್ನಿಸಿದರು. ವಿಶ್ವ ಬ್ಯಾಂಕ್ ಪ್ರಕಾರ, ಭಾರತವು 2011 ರಲ್ಲಿಯೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಮೋದಿಯವರು ಕೇವಲ ಸುಳ್ಳುಗಳನ್ನು ಬಿತ್ತರಿಸುತ್ತಿದ್ದಾರೆ ಎಂದು ಹೇಳಿದರು.

Show More

Leave a Reply

Your email address will not be published. Required fields are marked *

Related Articles

Back to top button