ಫೈನಲ್‌ಗೆ ಭಾರತ; ಸೆಮಿಫೈನಲ್ ಪಂದ್ಯದಲ್ಲಿ ಎಡವಿದ ಇಂಗ್ಲೇಂಡ್.
ವೆಸ್ಟ್ ಇಂಡೀಸ್: ನಿನ್ನೆ ಜೂನ್, 27ರಂದು ನಡೆದಿದ್ದ, ಟಿ-20 ವಿಶ್ವಕಪ್‌ನ ಸೆಮಿ ಫೈನಲ್ ಪಂದ್ಯ ರೋಚಕ ಅಂತ್ಯ ಕಂಡಿದೆ. ಸೆಮಿ ಅಲ್ಲಿ ಎದುರಾಗಿದ್ದ ಭಾರತ ಮತ್ತು ಇಂಗ್ಲೆಂಡ್, ಫೈನಲ್ ಪ್ರವೇಶ ಮಾಡಲು ಎಲ್ಲಾ ಅಸ್ತ್ರಗಳನ್ನು ಬಳಸಿದರು. ಆದರೆ ಭಾರತ ತಂಡ ಇಂಗ್ಲೆಂಡ್ ತಂಡವನ್ನು 68 ರನ್ನುಗಳಿಂದ ಸೋಲಿಸಿ, ಫೈನಲ್‌ಗೆ ಲಗ್ಗೆ ಇಟ್ಟಿದೆ.
ಪ್ರೋವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೊದಲು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಸವಾಲನ್ನು ಸ್ವೀಕರಿಸಿ ಕಣಕ್ಕೆ ಇಳಿದ ಭಾರತ ತಂಡ 20 ಓವರ್‌ಗಳನ್ನು ಆಡಿ, 7 ವಿಕೆಟ್ ಗಳ ನಷ್ಟಕ್ಕೆ 171 ರನ್ನುಗಳನ್ನು ಗಳಿಸಿತು.
172 ರನ್ನುಗಳ ಗುರಿ ಮುಟ್ಟಲು ಬಂದ ಇಂಗ್ಲೇಂಡ್ ತಂಡಕ್ಕೆ ಭಾರತೀಯ ಬೌಲರ್ ಗಳು ತಡೆ ಒಡ್ಡಿದರು. 16.4 ಓವರುಗಳಲ್ಲಿ ತನ್ನ ಎಲ್ಲಾ ವಿಕೆಟುಗಳನ್ನು ಒಪ್ಪಿಸಿ, ಕೇವಲ 103 ರನ್ನುಗಳನ್ನು ಗಳಿಸಲಷ್ಟೇ ಇಂಗ್ಲೆಂಡ್ ತಂಡಕ್ಕೆ ಸಾದ್ಯವಾಯಿತು.
ಭಾರತದ ಪರವಾಗಿ 19 ರನ್ನುಗಳನ್ನು ನೀಡಿ 3 ವಿಕೆಟುಗಳನ್ನು ಕಬಳಿಸಿದ ಅಕ್ಸರ್ ಪಟೇಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಈ ಮೂಲಕ ಫೈನಲ್ ಪಂದ್ಯಕ್ಕೆ ರೆಡಿ ಆಗಿದೆ ಭಾರತ.