Sports
ಭಾರತಕ್ಕೆ 47 ರನ್‌ಗಳ ಗೆಲುವು
ಬಾರ್ಬಡೋಸ್: ಟಿ-20 ವಿಶ್ವಕಪ್ ಕ್ರಿಕೆಟ್ 2024ರಲ್ಲಿ, ಎರಡನೇ ಗ್ರೂಪ್ ಸ್ಟೇಜ್‌ನ ಮೊದಲ ಪಂದ್ಯದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ತಂಡ ಎದುರಾಗಿದ್ದವು. ನಿನ್ನ ನಡೆದ ಈ ಪಂದ್ಯದಲ್ಲಿ ಅಪಘಾನಿಸ್ತಾನವನ್ನು ಭಾರತ 47 ರನ್ನುಗಳಿಂದ ಸೋಲಿಸಿ ಎರಡನೇ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ತನ್ನ ಮೊದಲ ಜಯವನ್ನು ಕಂಡಿತು.
ಟಾಪ್ ಗೆದ್ದಿದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆಯನ್ನು ಮಾಡಿಕೊಂಡಿತು. ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 20 ಓವರ್ ಗಳನ್ನು ಆಡಿ, 8 ವಿಕೆಟ್ಗಳನ್ನು ಕಳೆದುಕೊಂಡು, 181 ರನ್ಗಳನ್ನು ಕಲೆ ಹಾಕಿತು. ಈ ಮೊತ್ತವನ್ನು ಬೆನ್ನಟ್ಟಿಗೆ ಅಫ್ಘಾನಿಸ್ತಾನ ತಂಡವು, ತನ್ನ ಒಟ್ಟು ವಿಕೆಟ್ಗಳನ್ನು ಕಳೆದುಕೊಂಡು 134 ರನ್ಗಳನ್ನು ಗಳಿಸಲು ಅಷ್ಟೇ ಶಕ್ತವಾಯಿತು.
ಈ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು, ಭಾರತದ ಮಧ್ಯಮ ಕ್ರಮಾಂಕದ ಆಟಗಾರ, ಸೂರ್ಯ ಕುಮಾರ್ ಯಾದವ್ ಅವರು ಪಡೆದುಕೊಂಡರು. ಇವರು 28 ಬೌಲ್ಗಳಲ್ಲಿ 53 ರನ್ನುಗಳನ್ನು ಸಿಡಿಸಿದ್ದರು.