Sports

ಟಿ20 ವಿಶ್ವಕಪ್- ಭಾರತಕ್ಕೆ ಶರಣಾದ ಐರ್ಲೆಂಡ್

ನ್ಯೂಯಾರ್ಕ್: ನಿನ್ನೆ ನಡೆದ ಟಿ20 ವಿಶ್ವಕಪ್ ಗ್ರೂಪ್ ಪಂದ್ಯದಲ್ಲಿ ಐರ್ಲೆಂಡ್ ತಂಡದ ವಿರುದ್ಧ ಭಾರತ 8 ವಿಕೆಟುಗಳ ಭರ್ಜರಿ ಗೆಲುವು ಸಾಧಿಸಿದೆ. ನ್ಯೂಯಾರ್ಕ್ ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಭಾರತ ಮೊದಲು ಬೌಲಿಂಗ್ ಆಯ್ಕೆಯನ್ನು ಮಾಡಿಕೊಂಡಿತು. ಆದರೆ ಮೊದಲ ಇನ್ನಿಂಗ್ಸ್ ನಲ್ಲಿ ಐರ್ಲೆಂಡ್ 16 ಓವರ್‌ಗಳನ್ನು ಆಡಿ, ತನ್ನ ಎಲ್ಲಾ ವಿಕೆಟುಗಳನ್ನು ಒಪ್ಪಿಸಿ ಕೇವಲ 96 ರನ್ನುಗಳನ್ನು ಗಳಿಸಲಷ್ಟೇ ಶಕ್ತವಾಯಿತು.

ಎರಡನೇ ಇವಿನಿಂಗ್ಸ್ ನಲ್ಲಿ ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ 12.2 ಓವರುಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ, 97 ರನ್ನುಗಳನ್ನು ಸಿಡಿಸಿ 8 ವಿಕೇಟುಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮ ಅವರು ಅರ್ಥಶತಕ ಸಿಡಿಸಿದರು. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕೇವಲ ಎರಡು ರನ್ನುಗಳನ್ನು ನೀಡಿ ಆರು ವಿಕೇಟುಗಳನ್ನು ಕಬಳಿಸಿದ ಜಸ್ಪ್ರೀತ್ ಬೂಮ್ರಾ ಅವರು ಪಡೆದರು.

Show More

Related Articles

Leave a Reply

Your email address will not be published. Required fields are marked *

Back to top button