Sports
ಜಿಂಬಾಬ್ವೆ ವಿರುದ್ಧ ಭಾರತಕ್ಕೆ 23 ರನ್ನುಗಳ ಜಯ.
ಜಿಂಬಾಬ್ವೆ: ಭಾರತ ಹಾಗೂ ಜಿಂಬಾಬ್ವೆ ನಡುವಿನ ಟಿ-20 ಸರಣಿಯಲ್ಲಿ ಇಂದು ಜಿಂಬಾಬ್ವೆಯನ್ನು ಭಾರತ ಕ್ರಿಕೆಟ್ ತಂಡ 23 ರನ್ನುಗಳಿಂದ ಮಣಿಸಿದೆ. ಈ ಮೂಲಕ ಸರಣಿಯಲ್ಲಿ ಭಾರತ ಎರಡು ಗೆಲುವನ್ನು ಕಂಡಿದೆ. ಒಟ್ಟು ಐದು ಪಂದ್ಯದಲ್ಲಿ ಎರಡು ಪಂದ್ಯವನ್ನು ಭಾರತ ಗೆದ್ದಿದ್ದರೆ, ಒಂದು ಪಂದ್ಯವನ್ನು ಜಿಂಬಾಬ್ವೆ ಗೆದ್ದಿದೆ.
ಈ ಪಂದ್ಯದ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಣಯಿಸಿತು. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು, ಒಟ್ಟು 182 ರನ್ನುಗಳನ್ನು ಗಳಿಸಿತು. ಇದನ್ನು ಬೆನ್ನಟ್ಟಿದ ಜಿಂಬಾಬ್ವೆ ತಂಡ, ಕೇವಲ 159 ರನ್ನುಗಳನ್ನು ಗಳಿಸಲಷ್ಟೇ ಶಕ್ತವಾಯಿತು.
ಭಾರತದ ಪರವಾಗಿ ಶುಭಮನ್ ಗಿಲ್ 49 ಬೌಲ್ ಗಳಿಗೆ 66 ರನ್ನ್ , ರುತುರಾಜ್ ಗಾಯಕ್ವಾಡ್ 28 ಬೌಲ್ ಗಳಿಗೆ 65 ರನ್ನ್, ಗಳಿಸಿದರು. ಬೌಲಿಂಗ್ ವಿಭಾಗದಲ್ಲಿ ವಾಶಿಂಗ್ಟನ್ ಸುಂದರ್ 15 ರನ್ನುಗಳನ್ನು ನೀಡಿ 3 ವಿಕೆಟ್ ಕಬಳಿಸಿದರು.