ಭಾರತದ ಮುಂದೆ ಮಂಡಿಯೂರಿದ ಪಾಕಿಸ್ತಾನ.
ನ್ಯೂಯಾರ್ಕ್: ಯುಎಸ್ಎದ ನ್ಯೂಯಾರ್ಕ್ ನಗರದಲ್ಲಿ ಇರುವ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಬಹುಶಃ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟು ಜನಸಂಖ್ಯೆಯಲ್ಲಿ ಕ್ರಿಕೆಟ್ ಕ್ರೀಡಾಭಿಮಾನಿಗಳನ್ನು ಕಂಡಿರಬಹುದು. ಯಾಕಂದ್ರೆ ನಿನ್ನೆ ನಡೆದಿದ್ದು ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವಿನ ಟಿ-20 ಕ್ರಿಕೆಟ್ ಪಂದ್ಯಾವಳಿ.
ಈ ಪಂದ್ಯದಲ್ಲಿ ಟಾಸ್ ಅನ್ನು ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಮಾಡಲು ಇಚ್ಚಿಸಿತು. ತನ್ನ ಬೌಲಿಂಗ್ ದಾಳಿಯಿಂದ ಭಾರತವನ್ನು 19 ಓವರ್ ಗಳಷ್ಟೇ ಆಡಲು ಬಿಟ್ಟ ಪಾಕಿಸ್ತಾನ, ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ಒಟ್ಟು ವಿಕೇಟುಗಳನ್ನು ಪಡೆದು, 120ರ ರನ್ನುಗಳ ಸವಾಲನ್ನು ಸ್ವೀಕರಿಸಿತು.
ಎರಡನೇ ನಿಮಿಷದಲ್ಲಿ ದಾಳಿಗೆ ಬಂದ ಭಾರತದ ಬೌಲರ್ ಗಳು ತಮ್ಮ ಚಾಣಾಕ್ಷ ಬೌಲಿಂಗ್ ಪ್ರದರ್ಶನದಿಂದ, ಪಾಕಿಸ್ತಾನ ತಂಡದತ್ತ ಸಾಗುತ್ತಿದ್ದ ಗೆಲುವನ್ನು ಕಸಿದು, 6 ರನ್ನುಗಳ ವಿಜಯವನ್ನು ತಂದುಕೊಟ್ಟರು. ಈ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಭಾರತದ ವೇಗ ಜಸ್ಪ್ರೀತ್ ಬೂಮ್ರಾ ಅವರು ಪಡೆದರು. ಭೂಮ್ರವರು ನಾಲ್ಕು ಓವರ್ ಗಳಲ್ಲಿ 14 ರನ್ನುಗಳನ್ನು ನೀಡಿ ಮೂರು ವಿಕೆಟ್ಗಳನ್ನು ಕಬಳಿಸಿದರು.