Sports
ತವರಿಗೆ ಮರಳಿದ ಭಾರತದ ಕ್ರಿಕೆಟ್ ಆಟಗಾರರು.
ನವದೆಹಲಿ: ಟಿ-20 ವಿಶ್ವಕಪ್ ಗೆದ್ದು ಭಾರತದ ಕೀರ್ತಿಯನ್ನು ಜಗತ್ತಿನಲ್ಲಿ ಪಸರಿಸಿದ ಭಾರತದ ಕ್ರಿಕೆಟ್ ಆಟಗಾರರು ಇಂದು ತಾಯ್ನುಡಿಗೆ ಮರಳಿದ್ದಾರೆ. ಬಾರ್ಬಡೋಸ್ ನಲ್ಲಿ ಸಂಭವಿಸಿದ ಚಂಡಮಾರುತದ ತೀವ್ರತೆಯ ಕಾರಣ, ಭಾರತ ತಂಡ ಅಲ್ಲಿಯೇ ಇರಬೇಕಾದ ಪರಿಸ್ಥಿತಿ ಒದಗಿಬಂತು.
ಅಂತಾರಾಷ್ಟ್ರೀಯ ವಿಮಾನಯಾನವನನ್ನು ಕೆಲ ಸಮಯಕ್ಕೆ ಸ್ಥಗಿತ ಮಾಡಿದ್ದ ಬಾರ್ಬಡೋಸ್ ದೇಶ, ಈ ಸೇವೆಯನ್ನು ಪುನಃ ಮರುಪ್ರಾರಂಭಿಸಿದೆ. ದೇಶದಲ್ಲಿ ವಿಶ್ವಕಪ್ ಸಂಭ್ರಮ ಬಾರಿ ಜೋರಾಗಿತ್ತು. ವಿಮಾನ ನಿಲ್ದಾಣದ ಸುತ್ತ ಅಭಿಮಾನಿಗಳ ದಂಡು ಸುತ್ತುವರೆದು, ಕ್ರಿಕೆಟಿಗರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದರು.