ಭಾರತದ ಕಡೆ ಬರುತ್ತಿದ್ದ ಹಡಗಿನ ಮೇಲೆ ಹೌತಿ ದಾಳಿ.
“ಫೆ. 6 ರಂದು ಸರಿಸುಮಾರು ಬೆಳಿಗ್ಗೆ 1:45 ನಿಂದ ಸಂಜೆ 4:30 ರ ( ಅರೇಬಿಯನ್ ಸ್ಟಾಂಡರ್ಡ್ ಟೈಮ್) ಮಧ್ಯೆ, ಇರಾನ್ ಬೆಂಬಲಿತ ಹೌತಿ ಉಗ್ರಗಾಮಿಗಳು, ಯೆಮೆನ್ ನಲ್ಲಿ ಇರುವ ಅವರ ನಿಯಂತ್ರಿತ ಪ್ರದೇಶದಿಂದ ದಕ್ಷಿಣ ಕೆಂಪು ಸಮುದ್ರ ಹಾಗೂ ಅಡೆನ್ ಕೊಲ್ಲಿಯ ಕಡೆಗೆ ಆರು ಹಡಗು ವಿರೋಧಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ್ದಾರೆ “. ಎಂದು ಅಮೇರಿಕಾ ಸೈನ್ಯ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದೆ.
ಅವುಗಳಲ್ಲಿ ಮೂರು ಕ್ಷಿಪಣಿಗಳು ಅಮೇರಿಕಾ ಸ್ವಾಮ್ಯದ ‘ಸ್ಟಾರ್ ನಸಿಯಾ’ ಗೆ ತಗುಲಿ ಅಲ್ಪ ಪ್ರಮಾಣದ ನಷ್ಟ ಸಂಭವಿಸಿದೆ, ಹಾಗೂ ಇನ್ನೂ ಮೂರು ಕ್ಷಿಪಣಿಗಳು ಯುಕೆ ಸ್ವಾಮ್ಯದ ‘ಮೋರ್ನಿಂಗ್ ಟೈಡ್’ ಹಡಗಿಗೆ ತಗುಲಿದೆ ಎಂದು ಯುಸ್ ಮಿಲಿಟರಿ ತಿಳಿಸಿದೆ.
ಇವುಗಳಲ್ಲಿ ಭಾರತದ ಕಡೆ ತೆರಳುತ್ತಿದ್ದ ಹಡಗು ಕೂಡ ಒಂದಾಗಿತ್ತು. ಅದೇ ಯುಎಸ್ ನಿಂದ ಭಾರತಕ್ಕೆ ಬರುತ್ತಿದ್ದ ಮಾರ್ಷಲ್ ಐಲ್ಯಾಂಡ್ ಪ್ಲಾಗ್ಡ್, ಗ್ರೀಕ್ ಒಡೆತನದ ಹಡಗಾಗಿದೆ. ಇತ್ತ ಕೆಂಪು ಸಮುದ್ರದ ಯುದ್ಧ ದಿನದಿಂದ ದಿನಕ್ಕೆ ತನ್ನ ಪ್ರಭಾವವನ್ನು ಜಗತ್ತಿನೆಲ್ಲೆಡೆ ಹರಡುತ್ತಿದೆ. ಇದರಿಂದ ಜಾಗತಿಕ ಆರ್ಥಿಕತೆ ಮೇಲೆ ಅಪಾರ ಪ್ರಮಾಣದ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತಿದೆ.