LifestyleTechnology
ಇನ್ನೊಬ್ಬ ಭಾರತೀಯ ಈಗ ಮೈಕ್ರೋಸಾಫ್ಟ್ ವಿಂಡೋಸ್ ಹಾಗೂ ಸರ್ಫೇಸ್‌ನ ನೂತನ ಮುಖ್ಯಸ್ಥ.
ಐಐಟಿ ಮದ್ರಾಸ್ ನಲ್ಲಿ ಪದವಿಯನ್ನು ಪಡೆದ ಭಾರತೀಯ ಮೂಲದ ಪವನ್ ದಾವುಲೂರಿ, ಈಗ ಮೈಕ್ರೋಸಾಫ್ಟ್ ವಿಂಡೋಸ್ ಹಾಗೂ ಸರ್ಫೇಸ್‌ನ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
ಇವರ ಲಿಂಕಡ್ಇನ್ ಪ್ರೊಫೈಲ್ ಪ್ರಕಾರ, ಇವರು ಐಐಟಿ ಮದ್ರಾಸ್ ನಲ್ಲಿ ಪದವಿಯನ್ನು ಮುಗಿಸಿ, ತಮ್ಮ ಮುಂದಿನ ಶಿಕ್ಷಣವನ್ನು ಮೇರಿಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಮುಗಿಸಿದರು. 2001ರಲ್ಲಿ ದಾವುಲೂರಿಯವರು ಮೈಕ್ರೋಸಾಫ್ಟ್‌ನಲ್ಲಿ ರಿಲೈಬಿಲಿಟಿ ಕಂಪೋನೆಂಟ್ ಮ್ಯಾನೇಜರ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.
ಇವರು ಮೈಕ್ರೋಸಾಫ್ಟ್ ನಲ್ಲಿ 23 ವರ್ಷಗಳ ಸೇವೆಯನ್ನು ಸಲ್ಲಿಸಿದ್ದಾರೆ. 2021 ರಲ್ಲಿ ದಾವುಲೂರಿಯವರು ವಿಂಡೋಸ್ ಮತ್ತು ಸಿಲಿಕಾನ್ ಮತ್ತು ಸಿಸ್ಟಮ್ಸ್ ಇಂಟಿಗ್ರೇಷನ್‌ನ ಕಾರ್ಪೊರೇಟ್ ಉಪಾಧ್ಯಕ್ಷರಾಗಿ ತಮ್ಮ ನಾಯಕತ್ವದ ಗುಣವನ್ನು ಪ್ರದರ್ಶಿಸಿದ್ದಾರೆ.
ಭಾರತೀಯ ಮೂಲದ ಪವನ್ ದಾವುಲೂರಿ ಅವರು ಸಾಫ್ಟ್ವೇರ್ ಜಗತ್ತಿನ ದೈತ್ಯ ಕಂಪನಿ ಆದ ಮೈಕ್ರೋಸಾಫ್ಟ್ ನ ಮುಖ್ಯಸ್ಥರ ಸ್ಥಾನವನ್ನು ಅಲಂಕರಿಸಿರುವುದು ಇಡೀ ದೇಶವೇ ಹೆಮ್ಮೆ ಪಡುವಂತಹ ವಿಷಯವಾಗಿದೆ.