ಭಾರತೀಯ ಶೇರು ಮಾರುಕಟ್ಟೆಯಲ್ಲಿ ಜಿಗಿತ.
ಮುಂಬೈ: ಇಂದು ಶುಕ್ರವಾರ ಭಾರತೀಯ ಶೇರು ಮಾರುಕಟ್ಟೆಯಲ್ಲಿ ಬಾರಿ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದೆ. ಚುನಾವಣಾ ಫಲಿತಾಂಶ ಬಂದ ನಂತರ ಶೇರು ಬಜಾರ್ ಎಲ್ಲರ ಗಮನವನ್ನು ಸೆಳೆದಿತ್ತು. ಈಗ ಮತ್ತೊಂದು ಜಿಗಿತದಿಂದ ಹೂಡಿಕೆದಾರರಿಗೆ ಭಾರೀ ಲಾಭ ತಂದುಕೊಟ್ಟಿದೆ.
ಆರ್ಬಿಐ ಇಂದು ತನ್ ಮಾನಿಟರಿ ಪಾಲಿಸಿ ಸಭೆಯನ್ನು ನಡೆಸಿದೆ. ಹಾಗೆಯೇ ತನ್ನ ರೆಪೋ ದರವನ್ನು ಸ್ಥಿರವಾಗಿ ಇಟ್ಟುಕೊಂಡಿದೆ. ಕಳೆದ ಕೆಲವು ಕ್ವಾರ್ಟರ್ಗಳಂತೆ ಈ ಬಾರಿಯೂ ಕೂಡ 6.5% ನಲ್ಲಿ ರೆಪೋ ದರ ನಿಂತಿದೆ. ಹಾಗೆಯೇ ಭಾರತದ ಜಿಡಿಪಿ ದರದಲ್ಲಿ ಬದಲಾವಣೆ ಆಗಲಿದೆ ಎಂದು ಕೂಡ ಆರ್ಬಿಐ ತಿಳಿಸಿದೆ. 2023-24ರಲ್ಲಿ 7% ದರದಲ್ಲಿ ಜಿಡಿಪಿ ಬೆಳವಣಿಗೆ ಕಂಡುಬರಲಿದೆ ಎಂದಿದ್ದ ರಿಸರ್ವ್ ಬ್ಯಾಂಕ್, ಈ ಬಾರಿ 7.2% ದರದಲ್ಲಿ ಭಾರತದ ಜಿಡಿಪಿ ಮುಂದುವರಿಯುತ್ತದೆ ಎಂದು ಭವಿಷ್ಯ ನುಡಿದಿದೆ.
ಈ ಹಿನ್ನೆಲೆಯಲ್ಲಿ ಶೇರು ಮಾರುಕಟ್ಟೆ ಚುರುಕಾಗಿದ್ದು, ಹೂಡಿದಾರರ ಕೊಳ್ಳುವಿಕೆ ಬಹಳ ಜೋರಾಗಿತ್ತು. ಇಂದು ಸೆನ್ಸೆಕ್ಸ್ 1532.05 ಅಂಕ ಏರಿಕೆ ಹೊಂದಿದೆ, ಮತ್ತು ನಿಫ್ಟಿ 446.35 ಅಂಕ ಏರಿಕೆ ಹೊಂದಿದೆ.