ಮನೆಯ ಶೃಂಗಾರಕ್ಕೂ…ಆರೋಗ್ಯಕರ ಜೀವನಕ್ಕೂ…ಒಳಾಂಗಣ ಸಸ್ಯಗಳು…!

ನಗರಗಳಲ್ಲಿ ಗೃಹ ಅಲಂಕಾರಕ್ಕಾಗಿ ಬಳಸುವ ಒಳಾಂಗಣ ಸಸ್ಯಗಳು ಮನೆಗೆ ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸುತ್ತವೆ ಮತ್ತು ಆರೋಗ್ಯದ ದೃಷ್ಟಿಯಿಂದಲೂ ಸಹ ತುಂಬಾ ಒಳ್ಳೆಯದಾಗಿದೆ. ಹಸಿರು ಸಸ್ಯಗಳು ಮನೆಗೆ ಒಂದು ಶಾಂತಿಯುತ ಮತ್ತು ತಾಜಾ ವಾತಾವರಣವನ್ನು ಒದಗಿಸುತ್ತವೆ. ಮನೆಗಳಲ್ಲಿ ಅಲಂಕಾರಕ್ಕಾಗಿ ಬಳಸುವ ಪ್ರಮುಖ ಸಸ್ಯಗಳು, ಅವುಗಳ ಪಾಲನೆ-ಪೋಷಣೆ ಮತ್ತು ಸಸ್ಯಗಳ ಆಯ್ಕೆ ಪ್ರಕ್ರಿಯೆ ಕುರಿತು ತಿಳಿಯೋಣ.
ಗೃಹ ಅಲಂಕಾರಕ್ಕಾಗಿ ಸೂಕ್ತ ಸಸ್ಯಗಳು:
ಗೃಹ ಅಲಂಕಾರಕ್ಕೆ ಸರಿಯಾದ ಸಸ್ಯಗಳನ್ನು ಆಯ್ಕೆ ಮಾಡಬೇಕು. ಒಳಾಂಗಣ ವಾತಾವರಣಕ್ಕೆ ಹೊಂದುವ ಕೆಲವು ಅತ್ಯುತ್ತಮ ಸಸ್ಯಗಳು ಇವಾಗಿವೆ.
1. ಮಣಿ ಮಂತ್ರ (Lucky Bamboo):
ಮಣಿ ಮಂತ್ರ ಸಸ್ಯವು ಶ್ರೇಯಸ್ಕರ ಮತ್ತು ಶಾಂತಿದಾಯಕ ವಾತಾವರಣವನ್ನು ನಿರ್ಮಿಸುವಲ್ಲಿ ಸಹಾಯಕಾರಿಯಾಗಿದೆ. ಇದನ್ನು ಗಾಜಿನ ಬಾಟಲಿಯಲ್ಲಿ ನೀರಿನ್ನು ಹಾಕಿ ಬೆಳೆಸಬಹುದು.

2. ಸರ್ಪದ ಸಸ್ಯ (Snake Plant):
ಸರ್ಪದ ಸಸ್ಯವು ಕಡಿಮೆ ಬೆಳಕು ಮತ್ತು ಕಡಿಮೆ ನೀರಿನ ಲಭ್ಯತೆಯಲ್ಲಿಯೂ ಸಹ ಬೆಳೆಯುತ್ತದೆ. ಇದು ಗಾಳಿಯ ಗುಣಮಟ್ಟವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ.

3. ಲೋಳೆಸರ ಗಿಡ (Aloe Vera):
ಲೋಳೆಸರ ಸಸ್ಯಗಳು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಲಾಭಗಳನ್ನು ಹೊಂದಿದೆ. ಇದರ ಎಲೆಗಳಿಂದ ಸೌಂದರ್ಯವರ್ಧಕ ಉತ್ಪನ್ನಗಳನ್ನು ಸಹ ತಯಾರಿಸಬಹುದು ಮತ್ತು ಕೂದಲಿನ ಬೆಳವಣಿಗೆಗೂ ಸಹಕಾರಿಯಾಗಿದೆ.

4. ಪೀಲೋಡೆಂಡ್ರನ್ (Philodendron):
ಈ ಸಸ್ಯವು ಮನೆಯ ವಾತಾವರಣವನ್ನು ತಾಜಾವಾಗಿರುಸುತ್ತದೆ ಮತ್ತು ಗಾಳಿಯನ್ನು ಶುದ್ಧೀಕರಿಸುತ್ತದೆ.

5. ಗೋಲ್ಡನ್ ಪೋಟೋಸ್ (Money Plant):
ಗೋಲ್ಡನ್ ಪೋಟೋಸ್ ಅಲಂಕಾರಕ್ಕೂ ಹಾಗೂ ಗಾಳಿಯ ಗುಣಮಟ್ಟವನ್ನು ಕಾಪಾಡಲು ಸಹಕಾರಿ ಸಸ್ಯವಾಗಿದೆ.

ಸಸ್ಯಗಳನ್ನು ಬೆಳೆಸುವ ಸಲಹೆಗಳು:
1. ಬೆಳಕು:
ಒಳಾಂಗಣ ಸಸ್ಯಗಳ ಬೆಳವಣಿಗೆಗೆ ಸಾಮಾನ್ಯವಾಗಿ ಸೂರ್ಯನ ಬೆಳಕು ಬೇಕಾಗುತ್ತದೆ. ಅದಕ್ಕಾಗಿ ಮನೆಯಲ್ಲಿ ಸೂಕ್ತ ಜಾಗವನ್ನು ಆಯ್ಕೆ ಮಾಡಿ ಒಳಾಂಗಣ ಸಸ್ಯಗಳನ್ನು ಬೆಳೆಸಬೇಕು.
2. ನೀರು:
ಸಸ್ಯಗಳಿಗೆ ನೀರುಣಿಸುವಾಗ ನಿಗದಿತ ಪ್ರಮಾಣವನ್ನು ಪಾಲಿಸಬೇಕು. ಗಿಡಕ್ಕೆ ಹೆಚ್ಚು ನೀರು ಹಾಕಿದರೆ ಕೊಳೆತು ಹೋಗುತ್ತವೆ ಅಥವಾ ಕಡಿಮೆ ನೀರು ಒದಗಿಸುವುದರಿಂದ ಸಸ್ಯಗಳು ಒಣಗಿ ಹೋಗುತ್ತವೆ.
3. ಮಣ್ಣಿನ ಗುಣಮಟ್ಟ:
ಉತ್ತಮ ಡ್ರೈನೇಜ್ ಹೊಂದಿದ ಮಣ್ಣು ಸಸ್ಯಗಳ ಬೆಳವಣಿಗೆಗೆ ಅತ್ಯುತ್ತಮ. ಈ ರೀತಿಯ ಮಣ್ಣನ್ನು ಗಿಡಗಳಿಗೆ ಹಾಕುವುದರಿಂದ ಸಸ್ಯಗಳು ಚೆನ್ನಾಗಿ ಬೆಳವಣಿಗೆ ಹೊಂದುತ್ತವೆ.
ಮನೆಯ ಅಲಂಕಾರಿಕ ಸಸ್ಯಗಳ ಲಾಭಗಳು:
1. ಆರೋಗ್ಯಕರ ವಾತಾವರಣ:
ಸಸ್ಯಗಳು ಕಾರ್ಬನ್ ಡೈ ಆಕ್ಸೈಡ್ ಅನ್ನು ಹೀರಿಕೊಂಡು ಆಮ್ಲಜನಕವನ್ನು ನೀಡುತ್ತವೆ ಇದರಿಂದ ಉಸಿರಾಡಲು ಒಳ್ಳೆಯ ಗಾಳಿಯ ಪೂರೈಕೆಯಾಗುತ್ತದೆ ಮತ್ತು ಮನೆಯನ್ನು ಆರೋಗ್ಯಕರವಾಗಿಡುತ್ತವೆ.
2. ಒತ್ತಡ ಕಡಿಮೆ:
ಮನೆಯಲ್ಲಿ ಸಸ್ಯಗಳಿರುವುದರಿಂದ ಮನಸ್ಸು ಶಾಂತಿಯುತವಾಗಿರುತ್ತದೆ ಮತ್ತು ಒತ್ತಡ ಕಡಿಮೆಯಾಗುವ ಸಾಧ್ಯತೆ ಹೆಚ್ಚು.
3. ಅಲಂಕಾರಿಕ ಶೈಲಿ:
ಸಸ್ಯಗಳಿಂದ ಮನೆಯನ್ನು ಅಲಂಕರಿಸುವುದರಿಂದ ಮನೆಯ ಅಂದವು ಹೆಚ್ಚುತ್ತದೆ.
ಒಳಾಂಗಣ ಸಸ್ಯಗಳಿಂದ ಗೃಹ ಅಲಂಕಾರ:
1. ಲಿವಿಂಗ್ ರೂಮ್‌ನಲ್ಲಿ:
ದೊಡ್ಡ ಮಣೆಗಳಲ್ಲಿ ಪೀಲೋಡೆಂಡ್ರನ್ ಅಥವಾ ಮಣಿಮಂತ್ರವನ್ನು ಇಡುವುದರಿಂದ ಲಿವಿಂಗ್‌ರೂಂನ ಅಂದ ಹೆಚ್ಚುತ್ತದೆ.
2. ಕೋಣೆಗಳಲ್ಲಿ:
ಸರ್ಪದ ಸಸ್ಯ ಅಥವಾ ಅಲೋವೇರಾ ಇಡುವುದು ಹೆಚ್ಚು ಉಪಯುಕ್ತವಾಗಿದೆ.
3. ಅಡುಗೆ ಕೋಣೆಯಲ್ಲಿ:
ತಾಜಾವಾಗಿ ಅಡುಗೆಗೆ ಬಳಸುವ ಸಸ್ಯಗಳನ್ನು ಬೆಳೆಸಬಹುದು.
4. ಬಾಲ್ಕನಿಯಲ್ಲಿ:
ಹ್ಯಾಂಗಿಂಗ್ ಬಾಸ್ಕೆಟ್‌ಗಳಲ್ಲಿ ಗೋಲ್ಡನ್ ಪೋಟೋಸ್ ಅಥವಾ ಪುಟ್ಟ ಹೂಗಿಡಗಳನ್ನು ಇಡುವುದರಿಂದ, ಬಾಲ್ಕನಿಯು ನೈಸರ್ಗಿಕವಾಗಿ ಕಾಣುತ್ತದೆ.
ಸಸ್ಯಗಳು ಗೃಹ ಅಲಂಕಾರದ ಮುಖ್ಯ ಭಾಗವಾಗಿವೆ, ಸಸ್ಯಗಳು ಕೇವಲ ಮನೆಗಳ ಸೌದರ್ಯವನ್ನು ಹೆಚ್ಚಿಸಲು ಮಾತ್ರವಲ್ಲ, ಆರೋಗ್ಯ ವೃದ್ಧಿಗೂ ಸಹ ಸಹಕಾರಿ ಆಗಿವೆ. ಒಳಾಂಗಣ ಸಸ್ಯಗಳನ್ನು ಮನೆಗಳಲ್ಲಿ ಬೆಳೆಸುವುದರಿಂದ ಮನೆಯಲ್ಲಿ ನೆಮ್ಮದಿ, ಆನಂದ ಹೆಚ್ಚುತ್ತದೆ ಮತ್ತು ಆರೋಗ್ಯಯುತ ವಾತಾವರಣ ನಿರ್ಮಾಣವಾಗುತ್ತದೆ.
ಹೇಮ ಎನ್.ಜೆ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ