India
ಕುಂಕುಮ ಧರಿಸುವುದು ವಿವಾಹಿತ ಮಹಿಳೆಯ ‘ಧಾರ್ಮಿಕ ಕರ್ತವ್ಯ’ – ಇಂದೋರ್ ನ್ಯಾಯಾಲಯ.
ಇಂದೋರ್: ಮಧ್ಯಪ್ರದೇಶದ ಇಂದೋರ್ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆಯುತ್ತಿರುವಂತಹ ವಿಚ್ಛೇದನ ಪ್ರಕರಣದ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯ, ‘ಸಿಂಧೂರ’ ಧರಿಸುವುದು ವಿವಾಹಿತ ಮಹಿಳೆಯ ಧಾರ್ಮಿಕ ಕರ್ತವ್ಯವಾಗಿದೆ ಎಂದು ಹೇಳಿದೆ.
2017ರಲ್ಲಿ ಮದುವೆಯಾದ ಈ ಜೋಡಿಯು ಐದು ವರ್ಷದ ಒಂದು ಮಗುವನ್ನು ಹೊಂದಿದ್ದಾರೆ. ಆದರೆ ಪತ್ನಿಯು ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಮೇಲೆ ಗಂಡನ ವಿರುದ್ಧ ವಿಚ್ಛೇದನ ಪ್ರಕರಣವನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು. ಆದರೆ ಪತಿ ಹಿಂದೂ ವಿವಾಹ ಕಾಯ್ದೆ ಅಡಿ ತನ್ನ ಹಕ್ಕನ್ನು ಮರಳಿ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು.
ಮಾರ್ಚ್ 1ರಂದು ನ್ಯಾಯಾಲಯ ಪತ್ನಿಗೆ ತನ್ನ ಗಂಡನ ಬಳಿ ಹಿಂದಿರುವಂತೆ ತೀರ್ಪನ್ನು ನೀಡಿತ್ತು. ಇಂದೋರ್ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ಗೌಹಾತಿ ಉಚ್ಛ ನ್ಯಾಯಾಲಯದ ‘ಪತ್ನಿಯಾದವಳು ಸಿಂಧೂರವನ್ನು ಧರಿಸದೇ ಇರುವುದು ಕ್ರೌರ್ಯಕ್ಕೆ ಸಮಾನ’ ಎಂಬ ತೀರ್ಪನ್ನು ಆಧರಿಸಿ ಈ ಹೇಳಿಕೆಯನ್ನು ನೀಡಿದ್ದಾರೆ.