Politics

ಬಲಿಜ ಸಮುದಾಯಕ್ಕೆ ಅನ್ಯಾಯ: ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ವಿರುದ್ಧ ಸುಳ್ಳು ಆರೋಪ..?!

ಬೆಂಗಳೂರು: ಬಲಿಜ ಸಮುದಾಯದ ಶಿಕ್ಷಣ ಅಭಿವೃದ್ಧಿಗೆ ಭದ್ರವಾದ ಹೆಜ್ಜೆಯಿಟ್ಟ ರಾಯಲ್ ಕಾನ್ ಕಾರ್ಡ್ ಎಜುಕೇಷನಲ್ ಟ್ರಸ್ಟ್‌ ಇದೀಗ ತೀವ್ರ ಸಂಕಷ್ಟವನ್ನು ಎದುರಿಸುತ್ತಿದೆ. 2003ರಲ್ಲಿ ಸ್ಥಾಪಿತಗೊಂಡ ಈ ಟ್ರಸ್ಟ್‌ 2016ರಲ್ಲಿ 6 ಶಾಲೆಗಳನ್ನು ನಡೆಸುವ ಮಟ್ಟಿಗೆ ಬೆಳೆದಿದೆ. ಆದರೆ, ಇಂದು ಆನೇಕಲ್ ತಿಮ್ಮಯ್ಯ ಚಾರಿಟೇಬಲ್ ಟ್ರಸ್ಟ್‌ ಇದರ ಅಸ್ಥಿತ್ವಕ್ಕೆ ಧಕ್ಕೆ ತರುತ್ತಿದ್ದು, ಈ ಘಟನೆಯ ಹಿಂದೆ ಸಮುದಾಯದ ಪಟ್ಟಭದ್ರ ಹಿತಾಸಕ್ತಿಗಳ ಹೆಸರಿನಲ್ಲಿ ನಡೆಯುತ್ತಿರುವ ದುರುದ್ದೇಶದ ಆಟ ಬಲಿಜ ಸಮುದಾಯದ ಮೇಲೆ ಅನ್ಯಾಯವನ್ನು ಮಾಡಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಆಸ್ತಿ ಉಳಿಸುವ ಹೊಣೆ ಹಾಗೂ ಭರವಸೆಯ ಕಥೆ:

ಆನೇಕಲ್ ತಿಮ್ಮಯ್ಯ ಚಾರಿಟೇಬಲ್ ಟ್ರಸ್ಟ್‌ನ ಆಸ್ತಿಯು ಅಪೆಕ್ಸ್ ಬ್ಯಾಂಕ್‌ಗೆ ಅಡಮಾನವಾಗಿದ್ದಾಗ, ಬೆಂಗಳೂರು ಚಾಮರಾಜಪೇಟೆಯಲ್ಲಿರುವ ನಂ.31, 1ನೇ ಮುಖ್ಯರಸ್ತೆಯ ಆಸ್ತಿಯನ್ನು ಹರಾಜಿನಿಂದ ತಪ್ಪಿಸಲು, ಅಂದಿನ ಅಧ್ಯಕ್ಷರಾದ ಶ್ರೀನಿವಾಸ ಮೂರ್ತಿ ಹಾಗೂ ಕಾರ್ಯದರ್ಶಿ ಲಕ್ಷ್ಮಯ್ಯ ಸೇರಿದಂತೆ ಇತರ ಪದಾಧಿಕಾರಿಗಳು, ಎಲ್.ಆರ್.ಶಿವರಾಮೇಗೌಡರನ್ನು ಸಂಪರ್ಕಿಸಿ ಹಣಕಾಸಿನ ನೆರವು ಕೋರಿದರು. ಅವರ ಮಾತನ್ನು ನಂಬಿ ಶಿವರಾಮೇಗೌಡ ಅವರು ನಿಗದಿತ ಮೊತ್ತವನ್ನು ಅನೇಕಲ್ ತಿಮ್ಮಯ್ಯ ಚಾರಿಟೇಬಲ್ ಟ್ರಸ್ಟ್‌ಗೆ ನೀಡಲು ಮುಂದಾದರು ಎನ್ನಲಾಗಿದೆ. ಅವರು ಹಣಕಾಸಿನ ನೆರವು ನೀಡಿದರೆ ಆಸ್ತಿಯನ್ನು 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಶಾಲೆ ನಡೆಸಲು ಅನುಮತಿ ನೀಡುವುದಾಗಿ ಹೇಳಿದ್ದರು. ಆ ಭರವಸೆಗಳನ್ನು ನಂಬಿ, ಶ್ರೀ ಶಿವರಾಮೇಗೌಡ ಅವರು 2 ಕೋಟಿ ರೂಪಾಯಿಗಳನ್ನು ನೇರವಾಗಿ ಆನೇಕಲ್ ತಿಮ್ಮಯ್ಯ ಚಾರಿಟೆಬಲ್ ಟ್ರಸ್ಟ್‌ಗೆ RTGS ಮೂಲಕ State Bank Of Travancore ಖಾತೆಗೆ ವರ್ಗಾವಣೆ ಮಾಡಿದ್ದಾಗಿ ಶಿವರಾಮೇಗೌಡ ಅವರು ತಿಳಿಸಿದ್ದಾರೆ.

ಹಣಕಾಸಿನ ಸಹಾಯದ ವಿವರ:

  • RTGS ಮುಖಾಂತರ ರೂ. 1,00,00,000/-(ಒಂದು ಕೋಟಿ ರೂಪಾಯಿ) ದಿನಾಂಕ: 18/04/2016
  • RTGS ಮುಖಾಂತರ ರೂ. 50,00,000/-(ಐವತ್ತು ಲಕ್ಷ ರೂಪಾಯಿ) ದಿನಾಂಕ: 07/06/2016
  • RTGS ಮುಖಾಂತರ ರೂ. 50,00,000/-(ಐವತ್ತು ಲಕ್ಷ ರೂಪಾಯಿ) ದಿನಾಂಕ: 09/06/2016

ಆನೇಕಲ್ ತಿಮ್ಮಯ್ಯ ಚಾರಿಟೆಬಲ್ ಟ್ರಸ್ಟ್‌ ನ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಇತರ ಪದಾಧಿಕಾರಿಗಳು ತಕ್ಷಣವೇ ಲೀಸ್ ಡೀಡ್‌ ಮಾಡಿಕೊಡದೆ ಆಗಿಂದಾಗ್ಗೆ ಹೂಡಿಕೆ ಮಾಡಬೇಕಾದುದಾಗಿ ಮನವಿ ಮಾಡಿದರು. ಶಿವರಾಮೇಗೌಡ ಅವರು 2017 ರಲ್ಲಿ ಲೀಸ್ ಡೀಡ್‌ ನ್ನು ಪಡೆದು, ಸುಮಾರು 20 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿ ಶಾಲೆಯನ್ನು ಯಶಸ್ವಿಯಾಗಿ ನಡೆಸಿ ಬರುತ್ತಿದ್ದಾರೆ ಎನ್ನಲಾಗಿದೆ.

ಅನ್ಯಾಯ ಮತ್ತು ಸುಳ್ಳು ಆರೋಪ:

ಆನೇಕಲ್ ತಿಮ್ಮಯ್ಯ ಚಾರಿಟೇಬಲ್ ಟ್ರಸ್ಟ್‌ನ ಕೆಲವು ಹಿತಾಸಕ್ತಿಗಳು, ಬಾಡಿಗೆಯನ್ನು ಸ್ವೀಕರಿಸದೆ, ಆಸ್ತಿ ಕಬಳಿಸಲು ಉದ್ದೇಶಿಸಿದ್ದಾರೆ ಎಂದು ಶಿವರಾಮೇಗೌಡ ಅವರು ಹೇಳಿದ್ದಾರೆ. ಇದರಿಂದ ಬಲಿಜ ಸಮುದಾಯಕ್ಕೆ ಕಂಟಕ ಒದಗಿ ಬಂದು, ಶಿಕ್ಷಣ ಕ್ಷೇತ್ರದಲ್ಲಿ ಸಮುದಾಯದ ಅಭಿವೃದ್ಧಿಗೆ ಇರುವಂತಹ ಮಾರ್ಗವೇ ನಿಂತುಹೋಗುತ್ತದೆ ಎಂಬ ಆತಂಕ ವ್ಯಕ್ತವಾಗಿದೆ. ಶಿವರಾಮೇಗೌಡ ಅವರ ಈ ಹೋರಾಟ, ಟ್ರಸ್ಟ್‌ ವಿರುದ್ಧ ನ್ಯಾಯಾಲಯದಲ್ಲಿ ಬಲವಾಗಿ ನಿಂತಿದೆ. ಟ್ರಸ್ಟ್‌ ವಿರುದ್ಧ ನ್ಯಾಯಾಲಯದಲ್ಲಿ Stay Order ನೀಡಲಾಗಿದ್ದು, ಈ ಹೋರಾಟವು ಭಾರಿ ವಿವಾದಕ್ಕೆ ಕಾರಣವಾಗಿದೆ.

ನ್ಯಾಯಾಲಯದ ಆದೇಶ‌ ಹಾಗೂ ಶಿವರಾಮೇಗೌಡರ ನಿಲುವು:

ಎಲ್.ಆರ್.ಶಿವರಾಮೇಗೌಡ ಅವರು ನ್ಯಾಯಾಲಯದ ಆದೇಶಗಳನ್ನು ಗೌರವಿಸಿ, ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶವನ್ನು ತೋರಿಸಿದ್ದಾರೆ.

Show More

Leave a Reply

Your email address will not be published. Required fields are marked *

Related Articles

Back to top button