BengaluruKarnataka

ಇನ್‌ಸ್ಟಾಗ್ರಾಂ ಪ್ರೀತಿ ಕೊಲೆಯಲ್ಲಿ ಅಂತ್ಯ: ಕಣ್ಣೆದುರೇ ಕೊಲೆಯಾದಳು ಹೆತ್ತ ತಾಯಿ…!

ಚಿಕ್ಕಮಗಳೂರು: ಜಿಲ್ಲೆಯ ಗ್ರಾಮವೊಂದರಲ್ಲಿ, 26 ವರ್ಷದ ಮಹಿಳೆ ತೃಪ್ತಿಯನ್ನು 28 ವರ್ಷದ ಚಿರಂಜೀವಿ ಎಂಬ ಯುವಕ ಹೊಡೆದು ಕೊಂದ ಘಟನೆ ರಾಜ್ಯವೇ ಬೆಚ್ಚಿ ಬೀಳುವಂತಾಗಿದೆ. ತೃಪ್ತಿ ತನ್ನ 2.5 ವರ್ಷದ ಮಗಳ ಜೊತೆ ಮನೆಯಲ್ಲಿದ್ದ ವೇಳೆ, ಚಿರಂಜೀವಿ ಬಂದು ಈ ಅಮಾನವೀಯ ಕೃತ್ಯ ನಡೆಸಿದ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಬಳಿಕ ತೃಪ್ತಿಯ ಶವವನ್ನು ಮನೆಯಲ್ಲಿಂದ ಕೇವಲ 500 ಮೀಟರ್ ದೂರದ ಕೆರೆಯಲ್ಲಿ ಹಾಕಿ ಓಡಿಹೋದ ಎಂದು ವರದಿಯಾಗಿದೆ.

ಎರಡು ಕುಟುಂಬಗಳ ಭವಿಷ್ಯವನ್ನೇ ಕಸಿದ ಪ್ರೇಮಸಂಬಂಧ:
ಮೂಲಗಳ ಪ್ರಕಾರ, ತೃಪ್ತಿ ಮತ್ತು ಚಿರಂಜೀವಿ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಬಳಿಕ ಪ್ರೇಮ ಸಂಬಂಧದಲ್ಲಿ ಇರಲಾರಂಭಿಸಿದ್ದರು. ಈ ನಡುವೆ ತೃಪ್ತಿ ತನ್ನ ಪತಿ ಮತ್ತು ಮಕ್ಕಳನ್ನು ತೊರೆದು ಚಿರಂಜೀವಿಯೊಂದಿಗೆ ತಲೆಮರೆಸಿಕೊಂಡಿದ್ದರು. ಆದರೆ, ಪತಿಯ ದೂರು ಮೇಲೆ ಪೊಲೀಸರು ಅವರನ್ನು ಹುಡುಕಿ ಮತ್ತೆ ಊರಿಗೆ ತರುವಂತೆ ಮಾಡಿದ್ದರು. ಈ ಸಂದರ್ಭ, ತೃಪ್ತಿ ತನ್ನ ಪತಿಯ ಜೊತೆ ಮರುಸಂದಧಾನ ಮಾಡುವ ನಿರ್ಧಾರ ಪ್ರಕಟಿಸಿದ್ದರು. ಆದರೆ, ಚಿರಂಜೀವಿ ತನ್ನ ಸಂಬಂಧವನ್ನು ಮುಗಿಸಲು ನಿರಾಕರಿಸಿದ್ದಾನೆ.

ಎಷ್ಟೇ ಎಚ್ಚರಿಕೆ ನೀಡಿದರೂ ಕೊನೆಗೆ ಕೊಲೆಯಲ್ಲಿಯೇ ಅಂತ್ಯ:
ಪೊಲೀಸರು ಚಿರಂಜೀವಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಆತ ನಿಲ್ಲದೆ ತೃಪ್ತಿಯನ್ನು ಸಂಪರ್ಕಿಸಲು ಯತ್ನಿಸಿದ್ದ. ತೃಪ್ತಿ ಎರಡು ತಿಂಗಳ ಕಾಲ ಚಿರಂಜೀವಿಯನ್ನು ದೂರವಿಟ್ಟಿದ್ದರು. ಆದರೆ, ಇದು ಚಿರಂಜೀವಿಯ ಕ್ರೋಧಕ್ಕೆ ಕಾರಣವಾಯಿತು ಮತ್ತು ಕೊನೆಗೆ ಈ ಕೊಲೆ ನಡೆದಿತು.

ಆರೋಪಿ ಬಂಧನ:
ಚಿರಂಜೀವಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸುತ್ತಿದ್ದಾರೆ.

Show More

Leave a Reply

Your email address will not be published. Required fields are marked *

Related Articles

Back to top button