CinemaEntertainment

ಅಂತಾರಾಷ್ಟ್ರೀಯ ಗೋವಾ ಫಿಲ್ಮ್ ಫೆಸ್ಟಿವಲ್‌: ಪ್ರದರ್ಶನಗೊಳ್ಳಲಿದೆ ಉತ್ತರ ಕರ್ನಾಟಕದ ಕೆಥೆ ‘ವೆಂಕ್ಯಾ’!

ಪಣಜಿ: ಮಹತ್ವದ ಹೆಜ್ಜೆ ಹಾಕಿದ ಕನ್ನಡ ಚಿತ್ರರಂಗ. 55ನೇ ಅಂತಾರಾಷ್ಟ್ರೀಯ ಗೋವಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕನ್ನಡದ ‘ವೆಂಕ್ಯಾ’ ಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿದ್ದು, ‘ಭಾರತೀಯ ಪನೋರಮಾ’ ವಿಭಾಗದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿದೆ. ನವೆಂಬರ್ 20 ರಿಂದ 28ರವರೆಗೆ ನಡೆಯಲಿರುವ ಈ ಸಿನಿಮೋತ್ಸವದಲ್ಲಿ ದೇಶದ ಹಲವು ಭಾಷೆಗಳ ಮತ್ತು ವಿದೇಶದ ಶ್ರೇಷ್ಠ ಸಿನಿಮಾಗಳು ಪ್ರದರ್ಶನಕ್ಕಿಳಿಯಲಿವೆ. ಪಣಜಿಯ ಗೋವಾ ದಲ್ಲಿ ಈ ಅಂತರಾಷ್ಟ್ರೀಯ ಚಲನಚಿತ್ರೋತ್ಸವವು ದೇಶದಾದ್ಯಂತ ಆಕರ್ಷಣೆಯ ಕೇಂದ್ರವಾಗಿದ್ದು, ‘ವೆಂಕ್ಯಾ’ ಚಿತ್ರದ ಆಯ್ಕೆಯಿಂದ ಕನ್ನಡಿಗರಲ್ಲಿ ಹೆಮ್ಮೆ ಮೂಡಿಸಿದೆ.

ವೆಂಕ್ಯಾ – ಪ್ರಖ್ಯಾತ ನಿರ್ಮಾಪಕ ಪವನ್ ಒಡೆಯರ್ ಅವರ ಮತ್ತೊಂದು ಪ್ರಯತ್ನ:

‘ಡೊಳ್ಳು’ ಚಿತ್ರಕ್ಕಾಗಿ ರಾಷ್ಟ್ರಮಟ್ಟದ ಪ್ರಶಸ್ತಿಗಳು ಬಾಚಿಕೊಂಡಿದ್ದ ಪವನ್ ಒಡೆಯರ್ ಮತ್ತು ಸಾಗರ್ ಪುರಾಣಿಕ್ ಅವರ ಒಂದಾಗಿದ್ದರಿಂದ ‘ವೆಂಕ್ಯಾ’ ಚಿತ್ರ ನಿರ್ಮಾಣಗೊಂಡಿದೆ. ನಿರ್ದೇಶಕನಾಗಿ ಸಾಗರ್ ಪುರಾಣಿಕ್ ಈ ಚಿತ್ರಕ್ಕೆ ಜೀವ ತುಂಬಿದರೆ, ನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ. ಶಿಮ್ಲಾದ ರೂಪಾಲಿ ಸೂದ್ ಅವರೊಂದಿಗೆ ನಟಿಸಿದ ಸಾಗರ್ ಪುರಾಣಿಕ್, ಉತ್ತರ ಕರ್ನಾಟಕದ ಭಾವನೆ ಮತ್ತು ಸವಾಲುಗಳನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆರೆಯಲು ‘ವೆಂಕ್ಯಾ’ ಸಜ್ಜು:

ಅಂದಹಾಗೆ, ಇಂಡಿಯನ್ ಪನೋರಮಾ ವಿಭಾಗದಲ್ಲಿ ‘ಸ್ವಾತಂತ್ರ್ಯ ವೀರ್ ಸಾವರ್ಕರ್’, ‘ಕೆರೆಬೇಟೆ’ ಸೇರಿದಂತೆ ಹಲವು ಭಾರತೀಯ ಚಿತ್ರಗಳು ತೆರೆ ಕಾಣಲಿದ್ದು, ‘ವೆಂಕ್ಯಾ’ ಆಯ್ಕೆಯಾದ ಮೂರನೇ ಕನ್ನಡ ಚಿತ್ರವಾಗಿದೆ. ಇತರ ಭಾಷೆಗಳಲ್ಲೂ ತಮಿಳು, ಮರಾಠಿ, ಬೆಂಗಾಲಿ, ಮಲಯಾಳಂ, ತೆಲುಗು ಚಿತ್ರಗಳು ಭಾಗಿಯಾಗಿದ್ದು, ಕನ್ನಡದ ‘ವೆಂಕ್ಯಾ’ ಈ ಪಟ್ಟಿಯ ಮೂರನೇ ಚಿತ್ರವಾಗಿ ಗಮನ ಸೆಳೆಯುತ್ತಿದೆ.

ಕನ್ನಡ ಚಿತ್ರರಂಗದ ಹೆಮ್ಮೆ:

ವೆಂಕ್ಯಾ ಚಿತ್ರದ ಪ್ರಾಥಮಿಕ ಕಥಾಹಂದರವು ಉತ್ತರ ಕರ್ನಾಟಕದ ನೆಲ ಮತ್ತು ಜೀವನವನ್ನು ಆಧರಿಸಿಕೊಂಡಿದ್ದು, ನೈಸರ್ಗಿಕ, ಸಾಮಾಜಿಕ ಸಂಕೀರ್ಣತೆಗಳ ಸುಂದರ ಚಿತ್ರೀಕರಣವು ಈ ಸಿನಿಮಾವನ್ನು ವಿಶೇಷವಾಗಿಸಿದೆ. ಈ ಆಯ್ಕೆ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೆಮ್ಮೆ ತರುತ್ತಿದ್ದು, ಜಾಗತಿಕ ಮಟ್ಟದಲ್ಲಿ ಕನ್ನಡದ ಶಕ್ತಿ ಮತ್ತೊಮ್ಮೆ ಪ್ರಪಂಚದ ಗಮನ ಸೆಳೆಯಲಿದೆ.

Show More

Leave a Reply

Your email address will not be published. Required fields are marked *

Related Articles

Back to top button