Bengaluru

Invest Karnataka 2025: 10 ಲಕ್ಷ ಕೋಟಿ ಹೂಡಿಕೆ ನಿರೀಕ್ಷೆ, ಕನ್ನಡಿಗರಿಗೆ ಲಾಭವೇ?!

ಬೆಂಗಳೂರು: ದೇಶ ಮತ್ತು ವಿದೇಶಗಳ ಪ್ರಮುಖ ಹೂಡಿಕೆದಾರರ ಗಮನ ಸೆಳೆದಿರುವ ಇನ್ವೆಸ್ಟ್ ಕರ್ನಾಟಕ (Invest Karnataka) 2025 ಸಮಾವೇಶ ಇಂದು ಅದ್ಧೂರಿಯಾಗಿ ಪ್ರಾರಂಭಗೊಂಡಿದೆ. ರಾಜ್ಯ ಸರ್ಕಾರ 10 ಲಕ್ಷ ಕೋಟಿ ಹೂಡಿಕೆಯ ನಿರೀಕ್ಷೆ ಇಟ್ಟುಕೊಂಡಿದ್ದು, ಇದರಿಂದ ರಾಜ್ಯದ ಆರ್ಥಿಕ ಬೆಳವಣಿಗೆಗೆ ಹೊಸ ತಿರುವು ಸೃಷ್ಟಿಯಾಗಬಹುದು. ಆದರೆ ಈ ಹೂಡಿಕೆಯಿಂದ ಕನ್ನಡಿಗರಿಗೆ ಎಷ್ಟು ಲಾಭವಾಗಲಿದೆ? ಉದ್ಯೋಗ ಸೃಷ್ಟಿ, ಸ್ಥಳೀಯರಿಗೆ ಆದ್ಯತೆ, ಪರಿಸರ ಸಂರಕ್ಷಣೆಯಂತಹ ಪ್ರಮುಖ ವಿಷಯಗಳು ಈ ಸಮಾವೇಶದಲ್ಲಿ ಎತ್ತಿ ಹಿಡಿಯಬೇಕಾಗಿದೆಯೇ?

ಇನ್ವೆಸ್ಟ್ ಕರ್ನಾಟಕ (Invest Karnataka) 2025 – ದೊಡ್ಡ ಪ್ರಮಾಣದ ಹೂಡಿಕೆ ಪ್ರಸ್ತಾವನೆ:

ರಾಜ್ಯದ ಬಹುಕೋಟಿ ಹೂಡಿಕೆ ಆಕರ್ಷಿಸಲು ಇನ್ವೆಸ್ಟ್ ಕರ್ನಾಟಕ (Invest Karnataka) ಸಮಾವೇಶವನ್ನು ರಾಜ್ಯ ಸರ್ಕಾರ ಆಯೋಜಿಸಿದ್ದು, ದೇಶ-ವಿದೇಶದ ಪ್ರಮುಖ ಉದ್ಯಮಿಗಳು, ಹೂಡಿಕೆದಾರರು ಭಾಗವಹಿಸುತ್ತಿದ್ದಾರೆ. ಈ ಹೂಡಿಕೆ ರಾಜ್ಯದ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಸಹಾಯ ಮಾಡಬಹುದು. ಆದರೆ ಈ ಹೂಡಿಕೆಯ ಬಹುಪಾಲು ಲಾಭ ಕನ್ನಡಿಗರಿಗೆ ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (KRV) ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಒತ್ತಿ ಹೇಳಿದ್ದಾರೆ.

ಹೊಸ ಹೂಡಿಕೆಗೆ ಅನುವು ಮಾಡಿಕೊಟ್ಟ “Invest Karnataka”– ಕನ್ನಡಿಗರಿಗೆ ಉದ್ಯೋಗದ ಖಾತರಿ ಇದೆಯೇ?

ಕಳೆದ ಹಲವು ವರ್ಷಗಳಲ್ಲಿ, ಕರ್ನಾಟಕದಲ್ಲಿ ಬಂಡವಾಳ ಹೂಡಿದ ಉದ್ಯಮಿಗಳು ಸರ್ಕಾರದಿಂದ ಬಹಳಷ್ಟು ಸವಲತ್ತುಗಳನ್ನು ಪಡೆದರೂ, ಕನ್ನಡಿಗರಿಗೆ ಉದ್ಯೋಗ ನೀಡಲು ನಿರಾಸಕ್ತತೆ ತೋರುವ ವೃತ್ತಿ ಹೊಂದಿದ್ದಾರೆ. ಸರ್ಕಾರ ನೀಡುವ ಭೂಮಿ, ತೆರಿಗೆ ರಜೆ, ವಿದ್ಯುತ್-ನೀರು ರಿಯಾಯಿತಿ ಸೌಲಭ್ಯಗಳನ್ನು ಪಡೆಯುವಂತೆಯೇ, ಕನ್ನಡಿಗರಿಗೆ ಉದ್ಯೋಗ ನೀಡುವುದನ್ನೂ ಲಿಖಿತ ಒಪ್ಪಂದದ ಮೂಲಕ ಕಡ್ಡಾಯಗೊಳಿಸಬೇಕೆಂದು ಕನ್ನಡ ಪರ ಸಂಘಟನೆಗಳು ಒತ್ತಾಯಿಸುತ್ತಿವೆ.

Invest Karnataka ದಿಂದ ಕನ್ನಡಿಗರಿಗೆ ಉದ್ಯೋಗ – ಕಾನೂನು ಬದ್ಧ ಮಾಡಬೇಕಾ?

ಹೊಸ ಉದ್ಯಮಗಳು ಕರ್ನಾಟಕಕ್ಕೆ ಬಂದಾಗ, ಅದರಲ್ಲಿ ಶೇ.60ರಷ್ಟು ಹುದ್ದೆಗಳು ಕನ್ನಡಿಗರಿಗೆ ಮೀಸಲಿರಬೇಕೆಂದು ಹೋರಾಟಗಾರರು ಒತ್ತಿ ಹೇಳುತ್ತಿದ್ದಾರೆ. ಇತ್ತೀಚೆಗೆ ಕನ್ನಡಿಗರಿಗೆ ಉದ್ಯೋಗ ನೀಡುವ ಬಗ್ಗೆ ಉದ್ಯಮಿಗಳು ತೋರುತ್ತಿರುವ ನಿರ್ಲಕ್ಷ್ಯ ತೀವ್ರ ಚರ್ಚೆಗೆ ಕಾರಣವಾಗಿದೆ. “ನಾವು ಅರ್ಹತೆ ಆಧಾರದ ಮೇಲೆ ನೇಮಕಾತಿ ಮಾಡುತ್ತೇವೆ” ಎಂಬ ಕಂಪನಿಗಳ ಹೇಳಿಕೆ, ಸ್ಥಳೀಯರಿಗೆ ಅನ್ಯಾಯ ಮಾಡುತ್ತಿರುವುದಾಗಿ ವಾದಿಸುತ್ತಿದ್ದಾರೆ.

ಹೊಸ ಉದ್ಯಮಗಳೊಂದಿಗೆ ಹೊಸ ವಲಸಿಗರ ಸಮಸ್ಯೆ:

ಈಗಾಗಲೇ ಬೆಂಗಳೂರಿನಲ್ಲಿ ಹೊರರಾಜ್ಯಗಳ ಜನಸಂಖ್ಯೆ ಹೆಚ್ಚುತ್ತಿದೆ. ಹೊಸ ಉದ್ಯಮಗಳು ಕನ್ನಡಿಗರಿಗೆ ಉದ್ಯೋಗ ನೀಡದಿದ್ದರೆ, ಹೊಸ ವಲಸಿಗರ ಬೃಹತ್ ಪ್ರಮಾಣದ ಪ್ರವಾಹದಿಂದ ರಾಜ್ಯದ ಚಹರೆಯೇ ಬದಲಾಗುವ ಅಪಾಯವಿದೆ. ಹೀಗಾಗಿ ಹೊಸ ಹೂಡಿಕೆಗಳನ್ನು ಪರಿಗಣಿಸುವಾಗ, ಸರ್ಕಾರ ಸ್ಥಳೀಯರ ಹಿತಾಸಕ್ತಿಯನ್ನು ಮರೆಯಬಾರದು.

ಕನ್ನಡಿಗರಿಗೆ ಉದ್ಯೋಗದ ಭರವಸೆ ಇಲ್ಲದೆ ಹೂಡಿಕೆ ಉತ್ಸಾಹ ಹೀನವೇ?!

ಒಂದು ಹೂಡಿಕೆ ರಾಜ್ಯಕ್ಕೆ ಬರುವುದರಿಂದ ಅಲ್ಲಿನ ಜನರ ಜೀವನಮಟ್ಟ ಏರಬೇಕು. ಆದರೆ ಕನ್ನಡಿಗರಿಗೆ ಉದ್ಯೋಗದ ಖಾತರಿ ಇಲ್ಲದೆ “Invest Karnataka” ಅರ್ಥಹೀನ ಚಟುವಟಿಕೆಯಾಗಿ ಪರಿವರ್ತನೆಯಾಗುವ ಭೀತಿ ಇದೆ.

ಸಿದ್ದರಾಮಯ್ಯನವರ ಸರಕಾರದ ಸವಾಲು:

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕನ್ನಡಿಗರ ಹಿತ ಕಾಯುತ್ತಾರೆ ಎಂಬ ನಂಬಿಕೆ ಇದೆ. ಆದರೆ, ಈ Invest Karnataka ಹೂಡಿಕೆಗಳು ಕನ್ನಡಿಗರಿಗೆ ನಿಜವಾದ ಲಾಭ ತರುವಂತೆ, ಕಾನೂನು ರೂಪಿಸುವ ಮೂಲಕ ಉದ್ಯಮಿಗಳಿಗೆ ಸ್ಪಷ್ಟ ಮಾರ್ಗಸೂಚಿ ಜಾರಿಗೆ ತರುವ ಅಗತ್ಯ ಇದೆ. ಕನ್ನಡಿಗರಿಗೆ ಉದ್ಯೋಗ ಗ್ಯಾರಂಟಿ ನೀಡದ ಹೂಡಿಕೆ, ಕರ್ನಾಟಕದ ಜನರ ಪರವಾಗಿ ಸೇವೆ ಮಾಡುವುದಿಲ್ಲ ಎಂಬ ಪರಾಮರ್ಶೆಗಳು ಈಗಾಗಲೇ ಕೇಳಿ ಬರುತ್ತಿವೆ.

Invest Karnataka 2025 ಕನ್ನಡಿಗರಿಗೆ ಬಾಗ್ಯದ ಬಾಗಿಲು ತೆರೆಯುತ್ತದೋ ಅಥವಾ ಮತ್ತಷ್ಟು ವಲಸಿಗರ ಭೀತಿ ತರುತ್ತದೋ? ಈ ವಿಚಾರದಲ್ಲಿ ಸರ್ಕಾರದ ಮುಂದಿನ ನೀತಿಗಳನ್ನು ಗಮನಿಸಬೇಕು!

Invest Karnataka 2025ರ ಕುರಿತ ಇನ್ನಷ್ಟು ಮಾಹಿತಿಗಾಗಿ https://investkarnataka.co.in/gim2025/ ಕ್ಲಿಕ್ ಮಾಡಿ

Que Prachara

🚀 ನಿಮ್ಮ ಬ್ರ್ಯಾಂಡ್ ಗೆ ಡಿಜಿಟಲ್ ಬೂಸ್ಟ್ ನೀಡಿ! Que Prachara ಜೊತೆ ನಿಮ್ಮ ವ್ಯವಹಾರವನ್ನು ಮತ್ತಷ್ಟು ಬೆಳೆಸಿಕೊಳ್ಳಿ. ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ! 👉 Que Prachara

Gaurish Akki Studio

🎥 ಅಪ್ರತಿಮ ಕಥೆಗಳ ಮಂತ್ರ! ವೈಶಿಷ್ಟ್ಯಪೂರ್ಣ ಸಂದರ್ಶನಗಳು, ಆಕರ್ಷಕ ಡಾಕ್ಯುಮೆಂಟರಿಗಳು, ಮತ್ತು ಆಳವಾದ ಚರ್ಚೆಗಳಿಗೆ Gaurish Akki Studio ಗೆ ಭೇಟಿ ನೀಡಿ. ಸಬ್ ಸ್ಕ್ರೈಬ್ ಮಾಡಿ! 👉 Gaurish Akki Studio

Alma Media School

📢 ನಿಮ್ಮ ಮಾಧ್ಯಮ ಆಸಕ್ತಿಯನ್ನು ವೃತ್ತಿಯಾಗಿ ಮಾರ್ಪಡಿಸಿ! ಪ್ರಾಯೋಗಿಕ ಪತ್ರಿಕೋದ್ಯಮ ಮತ್ತು ಮಾಧ್ಯಮ ತರಬೇತಿಗಾಗಿ Alma Media School ಗೆ ಸೇರಿ. ಇಂದುಲೇ ನೋಂದಾಯಿಸಿ! 👉 Alma Media School

Akey News

📰 ನಿಖರ ಮತ್ತು ನಿಷ್ಪಕ್ಷಪಾತ ಸುದ್ದಿಗಳು! ವಿಶ್ವಾಸಾರ್ಹ ಹಾಗೂ ಆಳವಾದ ಸುದ್ದಿಗಾಗಿ Akey News ನೋಡಿ. ಇನ್ನೂ ಹೆಚ್ಚು ಓದಿ! 👉 Akey News

Show More

Related Articles

Leave a Reply

Your email address will not be published. Required fields are marked *

Back to top button