CinemaEntertainment

Investor Pitch Event: 30 ಕಥೆ, 6 ನಿರ್ಮಾಪಕರು, ಕನ್ನಡ ಚಿತ್ರರಂಗದಲ್ಲಿದು ಹೊಸ ಅಧ್ಯಾಯ..!

ಬೆಂಗಳೂರು: ಕನ್ನಡ ಚಿತ್ರರಂಗದ ವಿನೂತನ ಪ್ರಯತ್ನಗಳಲ್ಲಿ DEES Films ಹೊಸ ಮೆಟ್ಟಿಲು ಏರುತ್ತಿದೆ. ಗಂಗಾಧರ ಸಾಲಿಮಠ ಅವರ ನೇತೃತ್ವದಲ್ಲಿ ಈ ಸಂಸ್ಥೆ ಆರು ಚಿತ್ರಗಳನ್ನು ನಿರ್ಮಾಣ ಮಾಡುವ ಮಹತ್ವಾಕಾಂಕ್ಷಿ ಯೋಜನೆಯೊಂದಿಗೆ ಮುಂದಾಗಿದೆ. “ಇನ್ವೆಸ್ಟರ್ ಪಿಚ್ ಇವೆಂಟ್” ಎಂಬ ನೂತನ ಕಾರ್ಯಕ್ರಮ ಡಿಸೆಂಬರ್ 8ರಂದು ಬೆಂಗಳೂರಿನ ಸುಚಿತ್ರ ಅಕಾಡೆಮಿಯಲ್ಲಿ ನಡೆಯಲಿದೆ.

ಆರು ಚಿತ್ರಗಳ ಮಹತ್ವಾಕಾಂಕ್ಷೆ:
DEES Films ಈಗಾಗಲೇ ಮೂರು ಯಶಸ್ವಿ ಸಿನಿಮಾಗಳನ್ನು ಪ್ರೊಡ್ಯೂಸ್ ಮಾಡಿದ್ದು, ಹೊಸ ಆರು ಪ್ರಾಜೆಕ್ಟ್‌ಗಳೊಂದಿಗೆ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಈ ಬಾರಿ ಹೊಸ ನಿರ್ದೇಶಕರು ಮತ್ತು ಬರಹಗಾರರಿಗೆ ಅವಕಾಶ ನೀಡುವ ಉದ್ದೇಶವನ್ನು ಹೊಂದಿದೆ.

ಬಂದಿದ್ದು ಸುಮಾರು 100 ಕಥೆ, ಆಯ್ಕೆ ಆಗಿದ್ದು ಕೇವಲ 30 ಕಥೆಗಾರರು:
ಈ ಇವೆಂಟ್‌ಗೂ ಮುಂಚೆಯೇ 100+ ಕಥೆಗಾರರು ತಮ್ಮ ಕಥೆ-ಚಿತ್ರಕಥೆಗಳನ್ನು ಸಲ್ಲಿಸಿದ್ದು, 60 ಕಥೆಗಳನ್ನು ಪ್ರಾಥಮಿಕವಾಗಿ ಆಯ್ಕೆ ಮಾಡಲಾಗಿದೆ. 60 ಜನರಲ್ಲಿ 30 ಪ್ರತಿಭಾವಂತರನ್ನು ಫೈನಲ್ ಮಾಡಿ, ಪ್ರತಿಯೊಬ್ಬರ ಕಥೆಯನ್ನು ನಿರ್ಮಾಪಕರ ಮುಂದೆ ಇಡಲು ವೇದಿಕೆ ಸೃಷ್ಟಿ ಮಾಡಲಾಗಿದೆ.

ನಿರ್ಮಾಪಕರಿಗಿದೆ ಆಯ್ಕೆ ಮಾಡುವ ಅವಕಾಶ:
ಈ ಇವೆಂಟ್‌ನಲ್ಲಿ 30-40 ನಿರ್ಮಾಪಕರಿಗೆ ನೇರವಾಗಿ ಕಥೆಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಪ್ರತಿಯೊಬ್ಬ ಕಥೆಗಾರರಿಗೂ 10-15 ನಿಮಿಷ ಸಮಯ ನೀಡಲಾಗುತ್ತಿದ್ದು, ಉತ್ತಮ ಕಥೆಗಳನ್ನು ಇಲ್ಲಿ ಫೈನಲ್ ಮಾಡಲಾಗುತ್ತದೆ.

ಹಿಟ್ ಅಥವಾ ಫ್ಲಾಪ್: ಲಾಭ ಮಾತ್ರ ಗ್ಯಾರಂಟಿ:
ಈ ಆರು ಚಿತ್ರಗಳು ವಿವಿಧ ನಿರ್ಮಾಪಕರುಗಳ ಹೂಡಿಕೆಯಿಂದ ತಯಾರಾಗಲಿದ್ದು, ಇಲ್ಲಿ ಹೂಡಿಕೆಗಾರರು ಒಂದಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಹೀಗಾಗಿ ಚಿತ್ರ ಹಿಟ್ ಅಥವಾ ಫ್ಲಾಪ್ ಆದರೂ ಯಾವಾಗಲೂ ಲಾಭದ ವಿಶ್ವಾಸವಿರುತ್ತದೆ.

DEES Films ತಂಡ:
ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ಗಂಗಾಧರ ಸಾಲಿಮಠ ಅವರಿಗೆ ಗೊಮ್ಮಟೇಶ್ ಉಪಾಧ್ಯಾಯ, ರಾಜಶೇಖರ್ ಖೇಡದ್, ಮತ್ತು‌ ಖ್ಯಾತ ಸುದ್ದಿ ನಿರೂಪಕ, ನಿರ್ದೇಶಕ ಹಾಗೂ ನಿರ್ಮಾಪಕ ಗೌರೀಶ್ ಅಕ್ಕಿಯವರನ್ನು ಸೇರಿದಂತೆ ದಕ್ಷ ತಂಡದ ಬೆಂಬಲವಿದೆ.

ಈ ಆರು ಸಿನಿಮಾಗಳನ್ನು ಸಮಯದ ಅಂತರವನ್ನು ಗಮನದಲ್ಲಿಟ್ಟುಕೊಂಡು ಲಾಂಚ್ ಮಾಡಲು ಉದ್ದೇಶಿಸಿರುವ DEES Films, ಈ ಹೊಸ ಯೋಜನೆ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿದೆ.

Show More

Leave a Reply

Your email address will not be published. Required fields are marked *

Related Articles

Back to top button