Sports
ಇಂದು ಆರ್‌ಸಿಬಿಗೆ ಎದುರಾಗಲಿದೆ ಮುಂಬೈ ಇಂಡಿಯನ್ಸ್.
ಮುಂಬೈ: ಐಪಿಎಲ್ 17ನೇ ಆವೃತ್ತಿಯ, 25ನೇ ಪಂದ್ಯದಲ್ಲಿ ಎದುರಾಗಲಿದ್ದಾರೆ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು. ಇಂದಿನ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ಸತತ ಸೋಲಿನಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ತನ್ನ ಆಟದ ವೈಖರಿ ಹಾಗೂ ಆಲ್ ರೌಂಡರ್ ಆಟ ಪ್ರದರ್ಶಿಸಲಿದೆಯೇ? ಎಂದು ಕಾದು ನೋಡಬೇಕಾಗಿದೆ. ಪ್ರಸ್ತುತ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ.
ಮುಂಬೈ ತಂಡವು ಸಹ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಹೇಳುವಷ್ಟು ಒಳ್ಳೆಯ ಪ್ರದರ್ಶನವನ್ನು ನೀಡಿಲ್ಲ. ಒಂದರ ನಂತರ ಒಂದು ಸೋಲಿನ ನಂತರ, ಹಿಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 234 ರನ್ನುಗಳ ಬೃಹತ್ ಮೊತ್ತವನ್ನು ಕಲೆಹಾಕಿ, 29 ರನ್ನುಗಳ ಗೆಲುವನ್ನು ಸಾಧಿಸಿತ್ತು. ಇವತ್ತಿನ ಪಂದ್ಯದಲ್ಲಿ ಪಾಂಡ್ಯ ಮತ್ತೆ ಚಮತ್ಕಾರ ಮಾಡಲಿದ್ದಾರೆಯೇ? ಎಂದು ನೋಡೋಣ.
ನಿಮ್ಮ ಪ್ರಕಾರ ಇಂದಿನ ಪಂದ್ಯ ಯಾರು ಮಡಿಲಿಗೆ ಬೀಳುತ್ತದೆ ಎಂದು ತಿಳಿಸಿ.