Sports
ಸತತ ಎರಡನೇ ಗೆಲುವು ಸಾಧಿಸಿದ ರಾಜಸ್ಥಾನ ರಾಯಲ್ಸ್.
ಜೈಪುರ್: ನಿನ್ನೆ ಮಾರ್ಚ್ 28 ರಂದು ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದಂತಹ ಇಂಡಿಯನ್ ಪ್ರೀಮಿಯರ್ ಲೀಗ್‌ನ ಒಂಬತ್ತನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಮ್ಮ ಮನೆ ಅಂಗಳದಲ್ಲಿ ಬಗ್ಗು ಬಡಿದಿದೆ.
ಮೊದಲು ಟಾಸ್ ಗೆದ್ದ ರಿಷಬ್ ಪಂತ್, ತಮ್ಮ ತಂಡ ಡೆಲ್ಲಿ ಕ್ಯಾಪಿಟಲ್ಸನ್ನು ಬೌಲಿಂಗ್ ಮಾಡಲು ಅಂಕಣಕ್ಕೆ ಇಳಿಸಿದರು. ಮೊದಲ ಇನ್ನಿಂಗ್ಸ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 5 ವಿಕೆಟ್ ನಷ್ಟಕ್ಕೆ 185 ರನ್ನುಗಳನ್ನು ಕಲೆ ಹಾಕಿತು.
186 ರನ್ನುಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್, 20 ಓವರ್ ಗಳಲ್ಲಿ ಕೇವಲ 173 ರನ್ನುಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ರಾಜಸ್ಥಾನ್ ರಾಯಲ್ಸ್ 12ರ ರನ್ನುಗಳ ಗೆಲುವನ್ನು ಸಾಧಿಸಿತು.
ಈ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ರಿಯಾನ್ ಪರಾಗ್, 45 ಬಾಲುಗಳಲ್ಲಿ 84 ರನ್ನುಗಳನ್ನು ಗಳಿಸಿ ಅಜಯರಾಗಿದ್ದರು. ಇವರು ಈ ಪಂದ್ಯದ ‘ಮ್ಯಾನ್ ಆಫ್ ದಿ ಮ್ಯಾಚ್’ ಗೌರವಕ್ಕೆ ಪಾತ್ರರಾದರು.