Sports
ಇಂದು ಸಿಎಸ್‌ಕೆ ವಿರುದ್ಧ ಗುಜರಾತ್ ಟೈಟಾನ್ಸ್ ಹಣಾಹಣಿ.

ಚೆನ್ನೈ: ಎಮ್‌ಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂದು ಎದುರಾಗಲಿದ್ದಾರೆ, ಸಿಎಸ್‌ಕೆ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು. ಈ ಪಂದ್ಯ ಈ ಬಾರಿಯ ಐಪಿಎಲ್ ನ 7ನೇ ಪಂದ್ಯವಾಗಿದ್ದು ಚೆನ್ನೈ ಹಾಗೂ ಗುಜರಾತ್ ತಂಡಗಳು ಆಡುತ್ತಿರುವ ಎರಡನೇ ಪಂದ್ಯವಾಗಿದೆ.
ಪಾಯಿಂಟ್ಸ್ ಟೇಬಲ್ ನಲ್ಲಿ ತಲಾ ಎರಡು ಹಾಗೂ ಮೂರನೇ ಸ್ಥಾನದಲ್ಲಿ ಇರುವ ಉಭಯ ತಂಡಗಳು, ತಮ್ಮ ಸ್ಥಾನಗಳನ್ನು ಇನ್ನಷ್ಟು ಗಟ್ಟಿಗೊಳಿಸಲು ಇಂದಿನ ಪಂದ್ಯವನ್ನು ಆಡಲಿದ್ದಾರೆ. ಸಿಎಸ್‌ಕೆ ತಂಡ ತನ್ನ ಹಿಂದಿನ ಪಂದ್ಯದಲ್ಲಿ ಆರ್‌ಸಿಬಿ ತಂಡದ ವಿರುದ್ಧ ಜಯಗಳಿಸಿತ್ತು. ಗುಜರಾತ್ ಟೈಟಾನ್ಸ್ ತಂಡ ತನ್ನ ಮೊದಲ ಜಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಗಳಿಸಿತ್ತು.
ಎರಡು ಬಲಿಷ್ಠ ತಂಡಗಳ ಸೆಣಸಾಟ ಇಂದು ಕ್ರಿಕೆಟ್ ಪ್ರಿಯರಿಗೆ ಮನರಂಜನೆ ನೀಡುವುದಂತೂ ನಿಜ.