Sports
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್: ಬೌಲಿಂಗ್ ಆಯ್ಕೆ.

ಹೈದರಾಬಾದ್: ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಎದುರಾಗುತ್ತಿರುವ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಪಂದ್ಯ ಇನ್ನೇನು ಪ್ರಾರಂಭವಾಗಲಿದೆ.
ಈಗಾಗಲೇ ಟಾಸ್ ಆಗಿದ್ದು, ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಕಳೆದ ಪದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಗೆಲುವನ್ನು ಸಾಧಿಸುವ ಹಂಬಲ ಹೊಂದಿದೆ.
ಮಾರ್ಚ್ 23ರಂದು ನಡೆದಂತಹ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 4 ರನ್ನುಗಳ ಸೋಲನ್ನು ಕಂಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಪಾಯಿಂಟ್ಸ್ ಟೇಬಲ್‌ನ ಮೆಟ್ಟಿಲನ್ನು ಹತ್ತಲು ರಣತಂತ್ರ ರೂಪಿಸಿದೆ.
ಪಾಯಿಂಟ್ ಟೇಬಲ್ ನಲ್ಲಿ ತಲಾ ಏಳು ಹಾಗೂ ಎಂಟನೇ ಸ್ಥಾನದಲ್ಲಿ ಉಭಯ ತಂಡಗಳು ಸ್ಥಾಪಿತವಾಗಿವೆ. ತಮ್ಮ ಮೊದಲನೇ ಪಂದ್ಯಗಳನ್ನು ಸೋತಿರುವ ಎರಡು ತಂಡಗಳು ಈ ಪಂದ್ಯದಲ್ಲಿ ಯಾವ ರೀತಿಯಾಗಿ ಪ್ರದರ್ಶನ ನೀಡಲಿವೆ ಎಂದು ಕಾದು ನೋಡಬೇಕಾಗಿದೆ.