Sports
ಐಪಿಎಲ್‌ನಲ್ಲಿ ಇಂದು ಎದುರಾಗಲಿವೆ, ಆರ್‌ಆರ್ ಮತ್ತು ಡಿಸಿ.
ಜೈಪುರ್ – 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ 9ನೇ ಮ್ಯಾಚ್ ಇಂದು ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇಂದು ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಒಬ್ಬರೊನ್ನೊಬ್ಬರು ಎದುರಿಸಲಿದ್ದಾರೆ.
ಹಿಂದಿನ ಪಂದ್ಯದಲ್ಲಿ ರಾಜಸ್ಥಾನ ರಾಜಸ್ಥಾನ ಲಕ್ನೋ ಸೂಪರ್ ಜಾಯಿಂಟ್ಸ್ ವಿರುದ್ಧ 20 ರನ್ಗಳ ಗೆಲುವನ್ನು ಸಾಧಿಸಿತ್ತು. ಸಂಜು ಸ್ಯಾಂಸಂಗ್ ಅವರ ಸಾರಥ್ಯದ ರಾಜಸ್ಥಾನ ರಾಯಲ್ಸ್ ಕಳೆದ ಐಪಿಎಲ್ ಆವೃತ್ತಿಯಲ್ಲಿ 5ನೇ ಸ್ಥಾನಕ್ಕೆ ಜಾರಿ ಸೆಮಿ ಫೈನಲ್ ಕನಸನ್ನು ಕೈ ಚೆಲ್ಲಿತ್ತು.
ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಮಾರ್ಚ್ 23ರಂದು ನಡೆದಂತಹ ಪಂಜಾಬ್ ಕಿಂಗ್ಸ್ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಸೋಲನ್ನು ಕಂಡಿತ್ತು. ರಿಷಬ್ ಪಂತ್ ನಾಯಕತ್ವದ ಈ ತಂಡ ಇವತ್ತಿನ ಪಂದ್ಯದಲ್ಲಿ ಯಾವ ರೀತಿಯಾದ ಪ್ರದರ್ಶನ ನೀಡಲಿದೆ ಎಂದು ಕಾದು ನೋಡಬೇಕಾಗಿದೆ.