Sports
ಇಂದು ಸೆಣಸಾಡಲಿವೆ ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು.
ಬೆಂಗಳೂರು: ಇಂದು ಸೋಮವಾರ ಮಾರ್ಚ್ 25ರಂದು, ಬೆಂಗಳೂರಿನಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನ 6 ನೇ ಪಂದ್ಯದಲ್ಲಿ ಎದುರಾಗಲಿದ್ದಾರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಪಂಜಾಬ್ ಕಿಂಗ್ಸ್ ತಂಡ.
ಪಾಯಿಂಟ್ಸ್ ಟೇಬಲ್ ನಲ್ಲಿ ಆರ್‌ಸಿಬಿ ತಂಡ 9ನೇ ಸ್ಥಾನದಲ್ಲಿದ್ದು, ಪಂಜಾಬ್ ಕಿಂಗ್ಸ್ ತಂಡ 3ನೇ ಸ್ಥಾನದಲ್ಲಿದೆ. ಮಾರ್ಚ್ 22ಕ್ಕೆ ನಡೆದ ಮೊದಲ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಸೋಲನ್ನು ಅನುಭವಿಸಿತ್ತು. ತನ್ನ ಹೋಂ ಗ್ರೌಂಡಲ್ಲಿ ಚೊಚ್ಚಲ ಪಂದ್ಯ ಆಡುತ್ತಿರುವ ಆರ್‌ಸಿಬಿಯು ತನ್ನ ಮೊದಲ ಗೆಲುವಿಗಾಗಿ ಕಾಯುತ್ತಿದೆ.
ಹೊಸ ಅಧ್ಯಾಯವನ್ನು ಬರೆಯಲು ಹೊರಟಿರುವ ಆರ್‌ಸಿಬಿ ತಂಡ ತನ್ನ ಎರಡನೇ ಪಂದ್ಯದಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂದು ಕಾದು ನೋಡಬೇಕಾಗಿದೆ.