ಲೆಬನಾನ್ ಮೇಲೆ ಭಯಾನಕ ದಾಳಿ ನಡೆಸಿದ ಇಸ್ರೇಲ್!!

ಮಧ್ಯಪ್ರಾಚ್ಯದಲ್ಲಿ ದಿನ ದಿನಕ್ಕೂ ಪರಿಸ್ಥಿತಿ ಕೈ ಮೀರುತ್ತಿದ್ದು, ಕದನ ವಿರಾಮ ಒಪ್ಪಂದವನ್ನು ಲೆಬನಾನ್ ಉಲ್ಲಂಘಿಸಿದೆ ಎಂದು ಆರೋಪಿಸಿ, ಬುಧವಾರ ಲೆಬನಾನ್ ಮೇಲೆ ಇಸ್ರೇಲ್ ಭಯಾನಕ ವಾಯುದಾಳಿ ನಡೆಸಿದೆ. ಈ ದಾಳಿಯಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ. ಇಸ್ರೇಲ್- ಹೆಜ್ಬುಲ್ಲಾ ನಡುವೆ ಕದನ ವಿರಾಮದ ಒಪ್ಪಂದದ ಬಳಿಕ, ಇಸ್ರೇಲ್ ಲೆಬನಾನ್ ಮೇಲೆ ನಡೆಸಿದ ಅತಿ ಭಯಾನಕ ದಾಳಿ ಇದಾಗಿದೆ. ಕಳೆದ ಬುಧವಾರವಷ್ಟೇ ಅಮೆರಿಕದ ಮಧ್ಯಸ್ಥಿಕೆಯಲ್ಲಿ, ಇಸ್ರೇಲ್ ಮತ್ತು ಹೆಜ್ಬುಲ್ಲಾ ನಡುವೆ ಕದನ ವಿರಾಮ ಒಪ್ಪಂದ ಘೋಷಣೆಯಾಗಿತ್ತು. ಈ ಒಪ್ಪಂದಕ್ಕೆ ಇಸ್ರೇಲ್ ಮತ್ತು ಲೆಬನಾನ್ ಎರಡೂ ದೇಶಗಳು ಒಪ್ಪಿಗೆ ಸೂಚಿಸಿದ್ದವು. ಆದರೆ ಈ ಮಧ್ಯ ಹೆಜ್ಬುಲ್ಲಾ ಕದನ ವಿರಾಮ ಉಲ್ಲಂಘಿಸಿದೆ ಎಂದು ಆರೋಪಿಸಿರುವ ಇಸ್ರೇಲ್, ಲೆಬನಾನ್ʼನಲ್ಲಿರುವ ಹೆಜ್ಬುಲ್ಲಾ ನೆಲೆಗಳ ಮೇಲೆ ಭಯಾನಕ ದಾಳಿ ನಡೆಸಿದೆ. ಎರಡೂ ದೇಶಗಳು, ಕದನ ವಿರಾಮ ಉಲ್ಲಂಘನೆಯಾಗಿದೆ ಎಂದು ಪರಸ್ಪರ ಆರೋಪ ಮಾಡಿಕೊಂಡಿವೆ.

ಲೆಬನಾನ್ʼನ ಶೆಬಾ ಪಟ್ಟಣದ ಮೇಲೆ ಇಸ್ರೇಲ್ ನಡೆಸಿದ ಡ್ರೋಣ್ ದಾಳಿಯಲ್ಲಿ, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಲೆಬನಾನ್ ಸಚಿವಾಲಯ ಹೇಳಿದೆ. ನಾವು ಲೆಬನಾನ್ʼನಾದ್ಯಂತ ಹರಡಿಕೊಂಡಿರುವ ಹೆಜ್ಬುಲ್ಲಾ ನೆಲೆಗಳ ಮೇಲೆ, ವ್ಯವಸ್ಥಿತ ದಾಳಿ ನಡೆಸಿ ಅವುಗಳನ್ನು ನಾಶಪಡಿಸಿದ್ದೇವೆ ಎಂದು ಇಸ್ರೇಲ್ ಹೇಳಿದೆ. ಇದಕ್ಕೆ ಪ್ರತಿಯಾಗಿ, ಕದನ ವಿರಾಮದ ನಂತರ ಇಸ್ರೇಲ್ ನೆಲೆಗಳ ಮೇಲೆ ಇದು ನಮ್ಮ ಮೊದಲ ದಾಳಿ ಎಂದು ಹೆಜ್ಬುಲ್ಲಾ ಹೇಳಿಕೊಂಡಿದೆ. ಇಸ್ರೇಲ್ ರಕ್ಷಣಾ ಸಚಿವಾಲಯ ʼIsrael KATZ’ ́ಲೆಬನಾನ್ʼಗೆ ಎಚ್ಚರಿಕೆ ನೀಡಿದ್ದು, ಒಂದು ವೇಳೆ ನಾವು ಪೂರ್ಣ ಪ್ರಮಾಣದ ಯುದ್ಧಕ್ಕಿಳಿದರೆ, ಇನ್ನೂ ಹೆಚ್ಚಿನ ಬಲ ಪ್ರಯೋಗಿಸಿ ಲೆಬನಾನ್ ಮೇಲೆ ದಾಳಿ ಮಾಡುತ್ತೇವೆ. ಲೆಬನಾನ್ʼನ ಮೇಲೆ ನಾವು ಯಾವುದೇ ಕರುಣೆ ತೋರುವುದಿಲ್ಲ ಎಂದು ಎಚ್ಚರಿಸಿದೆ. ಇಲ್ಲಿಯವರೆಗೆ ಇಸ್ರೇಲ್, ಹೆಜ್ಬುಲ್ಲಾ ಮತ್ತು ಲೆಬನಾನ್ ಇವೆರಡನ್ನೂ ಪ್ರತ್ಯೇಕವಾಗಿ ನೋಡುತ್ತಿತ್ತು, ಆದರೆ ಇನ್ನು ಮುಂದೆ ಆ ನೀತಿಯನ್ನು ಪಾಲಿಸುವುದಿಲ್ಲ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯ ಹೇಳಿದೆ.
ಲೆಬನಾನ್ ಸೈನ್ಯ ತನ್ನ ದಕ್ಷಿಣ ಗಡಿಯಲ್ಲಿ ಹೆಚ್ಚಿನ ಸೈನ್ಯವನ್ನು ನಿಯೋಜಿಸಲು, ಸೇನಾ ನೇಮಕಾತಿಯನ್ನು ಆರಂಭಿಸಿದೆ. ಈ ನೇಮಕಾತಿಯು, ಕದನ ವಿರಾಮ ಒಪ್ಪಂದವನ್ನು ಯಶಸ್ವಿಯಾಗಿ ಜಾರಿಗೊಳಿಸಲು ಮತ್ತು ಲೆಬನೀಸ್ ಭೂಭಾಗಗಳಿಂದ ಇಸ್ರೇಲ್‌ಸೈನ್ಯ ಸಂಪೂರ್ಣವಾಗಿ ಹಿಂದೆ ಸರಿಯುವಂತೆ ನೋಡಿಕೊಳ್ಳುವುದು ಇದರ ಉದ್ದೇಶವಾಗಿದೆ ಎಂದು, ಲೆಬನಾನ್ ಪ್ರಧಾನಿ ʼನಜೀಬ್ ಮಿಕಾತಿʼ ತಿಳಿಸಿದ್ದಾರೆ.
ಗಜಾನನ ಭಟ್
ಆಲ್ಮಾ ಮೀಡಿಯಾ ಸ್ಕೂಲ್‌ವಿದ್ಯಾರ್ಥಿ