Politics
‘ಗೆಟ್ ಔಟ್’ ಇಸ್ರೇಲ್.

ಮಾಲೆ: ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಪ್ಯಾಲೆಸ್ತೀನ್‌ಗಾಗಿ ನಿಧಿಸಂಗ್ರಹ ಅಭಿಯಾನವನ್ನು ಪ್ರಾರಂಭಿಸುತ್ತಿದ್ದಂತೆ ಇಸ್ರೇಲಿ ಪಾಸ್‌ಪೋರ್ಟ್ ಹೊಂದಿದ ಮಾಲ್ಡೀವ್ಸ್ ಪ್ರವಾಸಿಗರು ಹಾಗೂ ಸಂದರ್ಶಕರನ್ನು ತನ್ನ ದೇಶದಿಂದ ನಿಷೇಧಿಸಿದ್ದಾರೆ.
ಮಾಲ್ಡೀವ್ಸ್‌ನ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಇಸ್ರೇಲಿ ಪಾಸ್‌ಪೋರ್ಟ್ ಹೊಂದಿರುವ ವ್ಯಕ್ತಿಗಳ ಮೇಲೆ ನಿಷೇಧವನ್ನು ಘೋಷಿಸಿದ್ದಾರೆ. ರಾಜಕೀಯ ಒತ್ತಡ ಮತ್ತು ಗಾಜಾದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ ಈ ನಿರ್ಧಾರವು ಬಂದಿದೆ, ಇದು ಪ್ಯಾಲೆಸ್ಟೈನ್‌ನೊಂದಿಗೆ ಐಕಮತ್ಯದಲ್ಲಿ ಮಾಲ್ಡೀವಿಯನ್ ಸರ್ಕಾರದ ಬಲವಾದ ನಿಲುವನ್ನು ಸೂಚಿಸುತ್ತದೆ.
ಈಗಾಗಲೇ ಮಾಲ್ಡೀವ್ಸ್ ದೇಶಕ್ಕೆ ಭಾರತೀಯರು ಬಾಯ್ಕಾಟ್ ಮಾಡಿರುವುದರಿಂದ ಅಪಾರ ಪ್ರವಾಸೋದ್ಯಮ ಆದಾಯವನ್ನು ಈ ದೇಶ ಕಳೆದುಕೊಂಡು ಕಂಗಾಲಾಗಿದೆ. ಈ ಬಾರಿ ಮತ್ತೆ ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ ವಿಷಯದಲ್ಲಿ ಮೂಗು ತೂರಿಸಿ ಇನ್ನಷ್ಟು ತಳಕ್ಕೆ ಬಿಳುವ ಸಾಧ್ಯತೆ ಹೊಂದಿದೆ ಮಾಲ್ಡೀವ್ಸ್ ದೇಶ.