ಪಾಲೆಸ್ತೀನಿಗಳಿಗಿರುವ ಸಹಾನುಭೂತಿ..ಇಸ್ರೇಲಿಗರಿಗ್ಯಾಕಿಲ್ಲ…?

ಇತ್ತೀಚಿಗೆ ಹಮಾಸ್ ತನ್ನ ವಶದಲ್ಲಿರುವಂತಹ ಕೆಲವು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾದ ಸಂದರ್ಭದಲ್ಲೇ ಹಮಾಸ್ ಇಸ್ರೇಲಿ ಒತ್ತೆಯಾಗಳನ್ನು ನಡೆಸಿಕೊಂಡ ರೀತಿ ಅತೀ ಅಮಾನುಷವಾಗಿತ್ತು. ಇಸ್ರೇಲಿಗರ ಮುಖವನ್ನು ನೋಡೋದಕ್ಕೆ ಆಗದೆ ಇರುವಂತಹ ಪರಿಸ್ಥಿತಿಗೆ ಹಮಾಸ್ ತಂದಿತ್ತು. ಗುಳಿ ಬಿದ್ದ ಕೆನ್ನೆಗಳು, ಅಸ್ಥಿ ಪಂಜರದಂತಾದ ದೇಹಗಳಿಂದ ಅವರ ದೇಹ ಜರ್ಜರಿತವಾಗಿತ್ತು. ಈ ಒತ್ತೆಯಾಳುಗಳು 490 ದಿನಗಳ ಕಾಲ ಹಮಾಸ್‌ನ ಸೆರೆಯಲ್ಲಿದ್ರು. ಅವರು ಎಷ್ಟು ಕ್ಲೀಷ್ಟ ಪರಿಸ್ಥಿತಿಯಲ್ಲಿ ಬದುಕಿದ್ದರು ಎಂಬುದಕ್ಕೆ ಅವರ ಅಸ್ಥಿ ಪಂಜರದಂತಾದ ದೇಹಗಳೆ ಸಾಕ್ಷಿಯಾಗಿದ್ವು. ಹಮಾಸ್ ಬಡಪಾಯಿ ಒತ್ತೆ ಹಾಳುಗಳನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಜಗತ್ತು ಅಮಾಯಕ ನಾಗರಿಕರು ಎಂದು ಬಣ್ಣಿಸುವ ಗಾಜಾದ ಜನತೆ ಕೂಡ ಈ ಬಿಡುಗಡೆ ಪ್ರಸಂಗವನ್ನು ಉತ್ಸಾಹದಿಂದಲೇ ನೋಡುತ್ತಿದರು.

ಗಾಜಾದಲ್ಲಿ ಸಂಕಷ್ಟದಲ್ಲಿರುವಂಥ ಜನಗಳಿಗೆ ಮಾನವೀಯ ನೆಲೆಯಲ್ಲಿ ನೆರವು ನೀಡಬೇಕೆಂಬ ಕೂಗು ವಿಶ್ವದಾದ್ಯಂತ ಕೇಳಿ ಬರುತ್ತಿರುತ್ತದೆ. ವಿವಿಧ ಸಂಘಟನೆಗಳು, ವಿವಿಧ ಮುಖಂಡರು ಇಂತಹ ಒತ್ತಾಯವನ್ನ ಮಾಡುತ್ತಿರುತ್ತಾರೆ. ಆದರೆ ಹಮಾಸ್‌ನಿಂದ ಬಂಧಿಸಲ್ಪಟ್ಟಂತಹ ಒತ್ತೆಯಾಳುಗನ್ನ ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಅವರಿಗೆ ಆಹಾರ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂದು ಯಾಕೆ ಯಾರು ಒತ್ತಾಯಿಸುತ್ತಿಲ್ಲ ? ಇದೇ ವಿಷಯವಾಗಿ ಪ್ರತಿಕ್ರಯಿಸಿದಂತಹ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಿಡುಗಡೆಯಾದ ಪುರುಷ ಒತ್ತೆ ಆಳು ಎರಡನೇ ವಿಶ್ವ ಸಮರದಲ್ಲಿ ನಾಜಿ ಶಿಬಿರದಲ್ಲಿ ನರಕಾಯಾತನೇ ಅನುಭವಿಸಿದ ವ್ಯಕ್ತಿ ಹಾಗೆ ಇದ್ದಾನೆ ಎಂದು ಉಲ್ಲೇಖಿಸಿ, ಹಮಾಸ್ ಒತ್ತೆ ಆಳುಗಳನ್ನ ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುವುದನ್ನು ಖಂಡಿಸಿದ್ರು.
ಹಮಾಸ್ ನಿಜವಾಗಿ ಎಷ್ಟು ಮಂದಿ ಇಸ್ರೇಲಿಗಳನ್ನು ಅಪಹರಿಸಿದೆ ಅವರಲ್ಲಿ ಎಷ್ಟು ಮಂದಿ ಸಾವಗೀಡಾಗಿದ್ದಾರೆ, ಎಂಬುದರ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ನೀಡುತ್ತಿಲ್ಲ. ಕೆಲವು ದಿನಗಳ ಹಿಂದೆ ಮುಖವಾಡ ಧರಿಸಿದ ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕರು ಏಕೈಕ ಇಸ್ರೇಲ್ ಮಹಿಳಾ ಒತ್ತೆಯಾಳು ಮೇಲೆ ಹೇಗೆ ದೌರ್ಜನ್ಯ ಎಸಗುತ್ತಾ ಇದ್ದರು ಎಂಬ ವಿಡಿಯೋ ವೈರಲ್ ಆಗಿತ್ತು. ಇದೆಲ್ಲವನ್ನು ನೋಡಿದ್ರೆ ನಿಜವಾಗಿಯೂ ಶೋಷಿತರು ಯಾರು? ಶೋಷಕರು ಯಾರು? ಎಂಬುವ ಅನುಮಾನ ಹುಟ್ಟಿಸುತ್ತದೆ.
ಜಗತ್ತು ಮತ್ತು ಮಾಧ್ಯಮಗಳೆಲ್ಲ ಈ ಇಸ್ರೇಲ್‌ಗಳ ಒತ್ತೆಯಾಳುಗಳ ಸ್ಥಿತಿಯ ಬಗ್ಗೆ ಗಮನಹರಿಸುತ್ತಲೇ ಇಲ್ಲ. ಎಲ್ಲರೂ ಸಹ ಇಸ್ರೇಲ್‌ನಿಂದ ದಾಳಿಗೊಳಗಾದಂತಹ ಗಾಝಾದ ಅಸಹಾಯಕ ಪ್ರಜೆಗಳ ಕುರಿತಂತೆ ಮಾತ್ರ ಬೇಸರ ವ್ಯಕ್ತಪಡಿಸುತ್ತಾರೆ. ಆದರೆ ಇಲ್ಲಿಯವರೆಗೆ ಇಸ್ರೇಲ್ ಪ್ರಜೆಗಳ ಬಗ್ಗೆ ಯಾಕೆ ಯಾರು ಪ್ರಶ್ನೆ ಮಾಡಿಲ್ಲ ಆಘಾತಕಾರಿ ವಿಷಯ ಎಂದರೆ ಇಸ್ರೇಲ್ ಮಹಿಳಾ ಒತ್ತೆಯಾಳುಗಳನ್ನ ಗಾಝಾದ ನಾಗರಿಕರ ಮಧ್ಯೆಯೆ ಬಂಧನದಲ್ಲಿ ಇರಿಸಿದ್ದು ಎಂದು ತಿಳಿದುಬಂದಿದೆ. ಆದರೆ ಯಾವೊಬ್ಬ ಗಾಜಾದ ನಾಗರಿಕನೂ ಒತ್ತೆಯಾಳುಗಳು ಪಾರಾಗಲು ನೆರವು ನೀಡಲಿಲ್ಲ ಎನ್ನುವಂತಹ ಪ್ರಶ್ನೆ ಉದ್ಭವವಾಗಿದೆ.
UNRWA ನಿಂದಲೂ ಭಯೋತ್ಪಾದಕರಿಗೆ ಬೆಂಬಲವನ್ನ ನೀಡುತ್ತಾ ಬರ್ತಾ ಇದೆ ಎಂದು ಆರೋಪಿಸಲಾಗಿತ್ತು. ಆದರೆ ಈಗ ಅದು ನಿಜವಾಗಿದೆ ಬ್ರಿಟಿಷ್ ಇಸ್ರೇಲಿ ಒತ್ತೆಹಾಳು ಎಮಿಲಿ ದಮಾರಿಯನ್ನು UNRWA ಕಚೇರಿಯಲ್ಲಿ ಕೂಡಿ ಹಾಕಲಾಗಿತ್ತು. ಮೊದಲಿನಿಂದಲೂ ಹಮಾಸ್ ಜೊತೆಗೆ ಕೈ ಜೋಡಿಸಿದೆ ಎಂದು ಆರೋಪ ಮಾಡಿದ್ದರು ಸಹ ಯಾವುದೇ ಕ್ರಮವನ್ನು ಅದರ ವಿರುದ್ಧ ತೆಗೆದುಕೊಂಡಿರಲಿಲ್ಲ. ಬಿಡುಗಡೆಯಾದಂತಹ ಒತ್ತೆಯಾಳುಗಳ ಪರಿಸ್ಥಿತಿಯಂತು, ಅವರೇ ಹೆಳಿಕೊಂಡಿರುವ ಹಾಗೇ ಸಾರಿಯಾಗಿ ಯಾರನ್ನು ನಡೆಸಿಕೊಳ್ಳುತ್ತಿರಲಿಲ್ಲ ಮತ್ತು ಸರಿಯಾಗಿ ಯಾವುದೇ ಮೂಲಸೌಕರ್ಯಗಳನ್ನ ನೀಡುತ್ತಿರಲಿಲ್ಲ. ನಾವು ಅಕ್ಷರಶಃ ನಾವು ಅಸ್ತಿಪಂಜರದಂತಾದ್ವಿ ಅಂತ ಅವರೇ ಹೇಳಿಕೊಂಡಿದ್ದರು.

ಪ್ಯಾಲೇಸ್ತೀನ್ ಮತ್ತು ಗಾಝಾದ ಜನರ ಬಗ್ಗೆ ಅನುಕಂಪ ತೋರಿಸುವಂತಹ ಜನ ಇಸ್ರೇಲ್ ಒತ್ತೆಹಾಳುಗಳ ಬಗ್ಗೆ ಯಾಕೆ ಅನುಕಂಪ ತೋರಿಸುತ್ತಿಲ್ಲ? ಇಸ್ರೇಲ್ ಒತ್ತೆಯಾಳುಗಳು ಮನುಷ್ಯರಲ್ಲವಾ ಅವರಿಗೆ ಜೀವವಿಲ್ವ? ಹಮಾಸ್ ತನ್ನಲ್ಲಿಯ ಒತ್ತೆಯಾಳುಗಳನ್ನ ಬಿಡುಗಡೆ ಮಾಡಬೇಕು ಎಂದು ಎಲ್ಲರೂ ಒತ್ತಾಯಿಸುತ್ತಾರೆ ನಿಜ. ಆದರೆ ಅವರನ್ನು ಉತ್ತಮ ರೀತಿಯಲ್ಲಿ ಬಿಡುಗಡೆ ಮಾಡಬೇಕೆಂಬುದು ಒತ್ತಾಯಿಸುತ್ತಿಲ್ಲ ಯಾಕೇ? ರೆಡ್ ಕ್ರಾಸ್ ಕೂಡ ಈ ನಿಟ್ಟಿನಲ್ಲಿ ಪ್ರತಿಕ್ರಯಿಸಿದ್ದು, ಗೌರವದಿಂದ ಹಾಗೂ ಆರೋಗ್ಯ ಪೂರ್ಣವಾಗಿ ಕಳುಹಿಸಬೇಕು ಎಂದು ಹೇಳಿದೆ.
ಹಮಾಸ್‌ನ ಈ ಕ್ರೌರ್ಯಗಳು ಯಾವಾಗ ನಿಲ್ಲುವುದೋ? ವಿನಿಮಯ ಮಾಡುವ ಸಂದರ್ಭದಲ್ಲಿ ಹಮಾಸ್ ಉಗ್ರರನ್ನ ನೋಡಿದರೆ ಇನ್ನೂ ಹಿಂಸಾಚಾರದ ದಾರಿಯಲ್ಲಿ ನಡೆಯುವ ಹಾಗೆ ಕಾಣಿಸುತ್ತಿತ್ತು. ಮಾನವೀಯತೆ, ಶಾಂತಿ ಎಂಬುದು ಅವರಿಂದ ಬಹು ದೂರವೇ ಹೋಗಿದೆ ಎಂಬುದು ಕಾಣ್ತಾ ಇತ್ತು. ಇಂತ ನರಭಕ್ಷಕರು ಅಮಾಯಕ ಪ್ಯಾಲಸ್ತೀನ್ ನಾಗರಿಕರನ್ನ ರಕ್ಷಿಸ್ತಾರ ಅನ್ನುವಂತಹ ವಿಶ್ವಾಸವಾದರೂ ಎಲ್ಲಿದೆ? ಮುಂದಿನ ದಿನಗಳಲ್ಲಿ ಬಿಡುಗಡೆಯಾಗುವಂತಹ ಇಸ್ರೇಲ್ ಒತ್ತೆಯಾಳುಗಳು ಇದೇ ರೀತಿ ಶೋಷಣೆಯ ಪರಿಸ್ಥಿತಿಯಲ್ಲಿ ಹಮಾಸ್ ಕಳುಹಿಸಿಕೊಟ್ಟರೆ ಡೊನಾಲ್ಡ ಟ್ರಂಪ್‌ನ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಈ ಮೊದಲೇ ಟ್ರಂಪ್ ಹಮಾಸ್‌ಗೆ ಎಚ್ಚರಿಕೆ ನೀಡಿದ್ದಾರೆ. ಇಂತಹ ವಿಷಯದಲ್ಲಿ ಯಾವುದೇ ರಾಜತಾಂತ್ರಿಕ ನಯನಾಜುಕುಗಳ ಅರ್ಥವಿಲ್ಲ. ಇಂತಹ ಹಿಂಸಾತ್ಮಕ ಭಯೋತ್ಪಾದಕ ಸಂಘಟನೆಯೊಂದಿಗೆ ಅದೇ ರೀತಿಯಲ್ಲಿ ವರ್ತಿಸುವುದೇ ನ್ಯಾಯ.
ಮೇಘಾ ಜಗದೀಶ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ