ಜಗನ್ ಮೋಹನ್ ರೆಡ್ಡಿ ತಿರುಮಲ ಭೇಟಿ ರದ್ದು: ಯು ಟರ್ನ್ ಹೊಡೆದರೇ ವೈಎಸ್ಆರ್ ಪುತ್ರ..?!
ವಿಜಯವಾಡ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಮ್ಮ ತಿರುಮಲ ದೇವಾಲಯದ ಭೇಟಿಯನ್ನು ರದ್ದು ಮಾಡಿಕೊಂಡಿದ್ದಾರೆ. ಇದು ತಿರುಮಲ ತಿರುಪತಿ ದೇವಸ್ಥಾನದಲ್ಲಿ (TTD) ಲಡ್ಡುಗಳ ತಯಾರಿಯಲ್ಲಿ ಪ್ರಾಣಿಗಳ ಕೊಬ್ಬಿನ ಬಳಕೆ ವಿಚಾರದ ವಿರುದ್ಧ ಸೃಷ್ಠಿಯಾದ ವಿವಾದದ ಹಿನ್ನೆಲೆಯಲ್ಲಿ ನಡೆದಿದೆ.
ಶುಕ್ರವಾರ ನಡೆದ ಸುದ್ದಿಗೋಷ್ಟಿಯಲ್ಲಿ, ಜಗನ್ ಮೋಹನ್ ರೆಡ್ಡಿ ಪ್ರಸ್ತುತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಅವರ ತೆಲುಗು ದೇಶಂ ಪಕ್ಷದ (TDP) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “ಹಿಂದುತ್ವವನ್ನು ರಾಜಕೀಯ ಲಾಭಕ್ಕಾಗಿ ಬಳಸಲಾಗುತ್ತಿದೆ,” ಎಂದು ಆರೋಪಿಸಿದ ಜಗನ್, ಬಿಜೆಪಿ ನಾಯ್ಡು ಅವರಿಗೆ ಬೆಂಬಲ ನೀಡುತ್ತಿದ್ದು, ಇದು “ಕಳಂಕಿತ ರಾಜಕೀಯ” ತಡೆಗಟ್ಟುವುದಿಲ್ಲ ಎಂದು ಆರೋಪಿಸಿದರು.
ಲಡ್ಡುಗಳ ತಯಾರಿಕೆಯಲ್ಲಿ ಕೊಬ್ಬಿನ ವಿವಾದ:
ಜಗನ್ ಸ್ಪಷ್ಟಪಡಿಸಿದಂತೆ, ತಿರುಮಲ ಲಡ್ಡುಗಳ ತಯಾರಿಯಲ್ಲಿ ಅನುಮಾನಿಸಬೇಕಾದಂತಹ ಯಾವುದೇ ಕಾರಣವಿಲ್ಲ. ಏನಾದರೂ ಸಮಸ್ಯೆಯಿದ್ದರೆ, ಟ್ಯಾಂಕರ್‌ಗಳನ್ನು ತಿರಸ್ಕರಿಸಲಾಗುತ್ತಿತ್ತು ಮತ್ತು ಕಂಪನಿಗೆ ಶೋ-ಕಾಸ್ ನೋಟಿಸ್ ನೀಡಲಾಗುತ್ತಿತ್ತು.
ತಿರುಮಲ ಪ್ರವೇಶದ ನಿರಾಕರಣೆ:
ಜಗನ್, “ದೇವಾಲಯ ಪ್ರವೇಶಕ್ಕೆ ನಿಷೇಧ ವಿಧಿಸಿರುವುದು ಮೊದಲ ಬಾರಿಗೆ!” ಎಂದು ಹೇಳಿದರು. ತಿರುಮಲದಲ್ಲಿ ತಮ್ಮ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ ಎಂದು ಪೊಲೀಸರು ನೀಡಿದ ನೋಟಿಸ್‌ಗಳನ್ನು ತೋರಿಸಿದರು.
ಚಂದ್ರಬಾಬು ನಾಯಕತ್ವದ ಕುರಿತು ಟಿಪ್ಪಣಿ:
2014-2019 ವರ್ಷದ ಅವಧಿಯಲ್ಲಿ ನಾಯ್ಡು ಆಡಳಿತದಲ್ಲಿದ್ದಾಗಲೂ 14-15 ತುಪ್ಪದ ಟ್ಯಾಂಕರ್‌ಗಳು ತಿರಸ್ಕರಿಸಲ್ಪಟ್ಟವು. 2019-2024 ರಲ್ಲಿ 18 ತುಪ್ಪದ ಟ್ಯಾಂಕರ್‌ಗಳು ತಿರಸ್ಕಾರಕ್ಕೊಳಗಾದವು. ಇದನ್ನು ದಾಖಲಾತಿಗಳ ಮೂಲಕ ದೃಢಪಡಿಸಿದ ಜಗನ್, ಸತ್ಯವೇ ಆಧಾರ ಎಂದು ಹೇಳಿದರು.
ಜ್ಯಾತ್ಯಾತೀತ ಮತ್ತು ಮಾನವೀಯತೆ:
ಜಗನ್, ತಮ್ಮ ಧರ್ಮವೇ ಮಾನವೀಯತೆ ಎಂದು ಹೇಳಿದರು ಮತ್ತು ಹಿಂದುತ್ವವೆಂದರೆ ಮಾನವೀಯತೆಯ ಪ್ರದರ್ಶನ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.