ತಮಿಳರ ಶ್ರೇಯಾಭಿವೃದ್ದಿಗೆ ಜಯಲಲಿತಾ ಅವರ ಸಂಪತ್ತು..!

ತಮಿಳುನಾಡಿನ ರಾಜಕೀಯ ಅಂದ ತಕ್ಷಣ ನಮಗೆ ನೆನಪಾಗುವುದು ಜಯಲಲಿತ. ತಮಿಳ್ ಪುರುಚಿ ತಲೈವಿ, ತಂಗರಂಗೈ, ಅಮ್ಮ ಅಂತೆಲ್ಲ ಕರೆಸಿಕೊಳ್ಳುತ್ತಿದ್ದ ತಮಿಳರ ಪಾಲಿನ ಆರಾಧ್ಯ ದೈವವೇ ಆಗಿದ್ದಂತಹ ಜಯಲಲಿತ ತಮಿಳುನಾಡಿನ ರಾಜಕೀಯ ಕ್ಷೇತ್ರದಲ್ಲಿ ಒಂದು ಧೀಮಂತ ವ್ಯಕ್ತಿತ್ವ ಅಂತನೇ ಹೇಳಬಹುದು. ಜಯಲಲಿತಾ 24 ಫೆಬ್ರವರಿ 1948ರಲ್ಲಿ ಮೈಸೂರಿನ ಮೇಲುಕೋಟೆಯಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸ್ತಾರೆ. ಅಯ್ಯಂಗಾರ್ ಕುಟುಂಬದ ಹಿನ್ನೆಲೆಯನ್ನು ಹೊಂದಿದವರು ಇವರು. ತಂದೆ ಮೈಸೂರು ಸಂಸ್ಥಾನದಲ್ಲಿ ವೈದ್ಯರಾಗಿ ಕೆಲಸವನ್ನು ಮಾಡ್ತಾ ಇದ್ರು. ತಂದೆಯ ಮರಣದ ನಂತರ ತಾಯಿಯ ಜೊತೆಗೆ ತಮಿಳುನಾಡಿಗೆ ಹೋಗಿ ಜಯಲಲಿತ ನೆಲೆಸುತ್ತಾರೆ. 125ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಜೈಲಲಿತ ನಟಿಸಿದ್ದು .ಭಾರತ ದೇಶ ಕಂಡ ಪ್ರಭಾವ ರಾಜಕಾರಣಿ ಬಹುಶಃ ಇಂದಿರಾಗಾಂಧಿ ನಂತರ ಹೆಚ್ಚು ಜನ ಮನ್ನಣೆಯನ್ನ ಗಳಿಸಿದಂತಹ ಮಹಿಳಾ ರಾಜಕಾರಣಿ ಎಂದರೆ ಅದು ಜಯಲಲಿತ. ಕೇವಲ ರಾಜಕೀಯ ಮಾತ್ರವಲ್ಲ ಕ್ರೀಡೆ, ನಟನೆ, ಓದು, ಸಿನಿಮಾ ಹೀಗೆ ಎಲ್ಲಾ ರಂಗಗಳಲ್ಲಿ ತನ್ನ ಛಾಪನ್ನು ಮೂಡಿಸಿದವರು ಜಯಲಲಿಲತಾ.

ಇದು ಅವರ ವೈಯಕ್ತಿಕ ಜೀವನದ ಪರಿಚಯವಾದರೆ ಅವರ ರಾಜಕೀಯ ಜೀವನದ ಪರಿಚಯ ದೊಡ್ಡದೇ ಇದೆ. ದೇಶ ಕಂಡಂತಹ ಅಪ್ರತಿಮಾ ಮಹಿಳಾ ರಾಜಕಾರಣಿ ಅಂತಲೇ ಜೈಲಲಿತಾರ ಅವರನ್ನು ಕರೆಯಬಹುದು. ಒಬ್ಬ ಮಹಿಳೆ ಮನಸ್ಸು ಮಾಡಿದರೆ ಏನಾದರೂ ಮಾಡಬಹುದು ಅನ್ನುವುದಕ್ಕೆ ಜಯಲಲಿತಾ ಅವರೇ ಸಾಕ್ಷಿ. MG ರಾಮಚಂದ್ರ ಅವರ ಮೂಲಕ ರಾಜಕೀಯವನ್ನು ಪ್ರವೇಶಿಸುತ್ತಾರೆ. ಆ ಸಂದರ್ಭದಲ್ಲಿ ಕರುಣಾನಿಧಿಯವರು ಮುಖ್ಯಮಂತ್ರಿ ಆಗಿರುತ್ತಾರೆ. ಒಮ್ಮೆ ಕರುಣಾನಿಧಿ ಅವರ ಸರ್ಕಾರ ಬಜೆಟ್ಟನ್ನು ಮಂಡಿಸುವ ಸಂದರ್ಭದಲ್ಲಿ ಅಂಕಿ ಅಂಶಗಳನ್ನು ತಪ್ಪಾಗಿ ಹೇಳಿದ್ದಕ್ಕೆ ಜೈಲಲಿತಾರವರು ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಹೀಗೆ ವಿರೋಧವನ್ನು ವ್ಯಕ್ತಪಡಿಸ್ದಾಗ ಅವರ ಮೇಲೆ ಮಾರಣಾಂತಿಕ ಹಲ್ಲೆಗಳುಗಳು ಆಗುತ್ತೆ, ಅವರನ್ನು ಅವಮಾನ ಮಾಡಲಾಗುತ್ತೆ. ಅದೇ ಸಂದರ್ಭದಲ್ಲಿ ಜೈಲಲಿತಾರವರು ಕರುಣಾನಿಧಿ ಸರ್ಕಾರದ ವಿರುದ್ಧ ಪ್ರತಿಜ್ಞೆಯನ್ನ ಮಾಡ್ತಾರೆ. “ನಾನು ಇನ್ನು ಮುಂದೆ ಅಸೆಂಬ್ಲಿಗೆ ಬರುವುದಾದರೆ ಮುಖ್ಯಮಂತ್ರಿ ಆಗಿಯೇ ಬರುತ್ತೇನೆ” ಎಂದು ಪ್ರತಿಜ್ಞೆಯನ್ನು ಕೈಗೊಳ್ತಾರೆ. ಮುಂದೆ ನಡೆದಿದ್ದೆಲ್ಲಾ ರಾಜಕೀಯ ಮೈಲಿಗಳು ಅವರು ನಡೆದ ಹಾದಿಯಲ್ಲ ಬಂಗಾರವಾಗುತ್ತದೆ ಹೋಯ್ತು. 1991 ರಲ್ಲಿ ಕರುಣಾನಿಧಿ ಸರ್ಕಾರದ ವಿರುದ್ಧ ಜಯಭೇರಿಯನ್ನು ಸಾಧಿಸಿ ಅವರ ಪ್ರತಿಜ್ಞೆಯಂತೆ ಸಂಸತ್ತಿಗೆ ಕಾಲನಿಟ್ಟಿದ್ರು. ಸತತ 6 ಬಾರಿ 1991 ರಿಂದ 2016 ರವರೆಗೆ ಮುಖ್ಯಮಂತ್ರಿಗಳಾಗಿ ತಮಿಳುನಾಡಿನ್ನ 14 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಳ್ವಿಕೆಯನ್ನು ಮಾಡಿದ್ದರು. ಅವರ ಆಳ್ವಿಕೆಯ ಸಂದರ್ಭದಲ್ಲಿ ತಮಿಳುನಾಡಿನ ಜನರಿಗೆ ಅಕ್ಷರಶಃ ದೈವದ ಸ್ವರೂಪವೇ ಜಯಲಲಿತಾ ಆಗಿದ್ದರು. ಜೈಲಲಿತಾ ಮೂಲತಃ ಕರ್ನಾಟಕದ ಮೇಲ್ಕೋಟೆವರಾದ್ರೂ ಕಾವೇರಿ ವಿಷ್ಯದಲ್ಲಿ ಕರ್ನಾಟಕದವರಿಗೆ ಬಿಸಿ ತುಪ್ಪವಾಗಿದ್ದರು ಅಂದರೂ ತಪ್ಪಾಗಲಿಕ್ಕಿಲ್ಲ.
ತಮ್ಮ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಜನ ಮನ್ನಣೆಯನ್ನ ಗಳಿಸಿದಂತಹ ಜೈಲಲಿತಾ ಅವರ ಮೇಲೆ ಅಕ್ರಮ ಆಸ್ತಿ ಸಂಪಾದನೆಯ ಆರೋಪ ಕೇಳಿ ಬಂತು 1996ರಲ್ಲಿ ತಮ್ಮ ಅಧಿಕಾರವನ್ನು ಕಳೆದುಕೊಂಡ ನಂತರ 1997ರಲ್ಲಿ ಅಕ್ರಮ ಆಸ್ತಿ ಮಾಡಿದ್ದಾರೆ ಎನ್ನುವಂತಹ ಶಂಖೆ ಆಧಾರದ ಮೇಲೆ ಮನೆಯ ಮೇಲೆ ಹೇಡ್ ಆಗುತ್ತೆ ಈ ಸಂದರ್ಭದಲ್ಲಿ ಒಟ್ಟು 1606 ತರಹದ ಚಿನ್ನಾಭರಣಗಳನ್ನು ಸೀಸ್ ಮಾಡಿದ್ರು. ಅದ್ರಲ್ಲಿ ಸಾವಿರದ 16 ಕೆಜಿ ಬೆಳ್ಳಿ 2,20,834 ಹಳೆ ನೋಟುಗಳು ಜೈಲಲಿತರ ನಿಧಿಯಲ್ಲಿತ್ತು. 10 ಕೋಟಿ ಬ್ಯಾಂಕ್ ಡೆಪಾಸಿಟ್ ಇಟ್ಟಿದ್ರು ಹಾಗೆ ತಮಿಳುನಾಡಿನ ಚೆನ್ನೈ ತಿರುವರೂರು, ತಂಜಾವೂರು, ಜಂಗಲ್ಪಟ್ಟು, ಕಾಂಚಿಪುರಂ ತೂತುಕುಡಿ ಯಲ್ಲಿ 1526 ಎಕರೆ ಜಮೀನಿನನ್ನು ಅಕ್ರಮ ಆಸ್ತಿಯ ಪಟ್ಟಿಯಲ್ಲಿತ್ತು. ಜೊತೆಗೆ ಟೀ ಎಸ್ಟೇಟ್ ಫಾಮ್‌ಹೌಸ್ ಇದೆಲ್ಲವೂ ಇತ್ತು. 11,340 ರೇಷ್ಮೆ ಸೀರೆ, 27 ಗಡಿಯಾರ, 91 ವಾಚ್, 131 ಸೂಟ್ ಕೇಸ್, 86 ಫೋನ್, 44 ಅಕೌಂಟಗಳು, 34 ಟಿಪಾಯಿ, 9 ಡ್ರೆಸ್ಸಿಂಗ್ ಟೇಬಲ್, 250 ಶಾಲು 3 ಬೀಗ 12 ರೆಫ್ರಿಜರೇಟರ್, 750 ಚಪ್ಪಲಿಗಳನ್ನು ಸೀಸ್ ಮಾಡಲಾಗಿತ್ತು.

27 ಸೆಪ್ಟೆಂಬರ್ 2014ರಂದು ಜೈಲಲಿತ ತಪ್ಪು ಸಾಬಿತಾಗಿ ಬೆಂಗಳೂರಿನ ನ್ಯಾಯಾಲಯ ನಾಲ್ಕು ವರ್ಷ ಜೈಲು ಹಾಗೂ ನೂರು ಕೋಟಿ ತಂಡವನ್ನು ವಿಧಿಸಿತ್ತು. ಇದಾದ ಬಳಿಕ ಅಕ್ರಮದಿಂದ ಗಳಿಸಿದಂತಹ ಆಸ್ತಿಯನ್ನು ಏನು ಮಾಡಬೇಕು ಅನ್ನುವಂತ ಚರ್ಚೆ ಆಗ್ತಾನೆ ಇತ್ತು ಆದರೆ ಈಗ ತಮಿಳುನಾಡಿನ ಸರ್ಕಾರದ ಸುಪರ್ದಿಗೆ ಕೊಡೋಕೆ ಬೆಂಗಳೂರಿನ ವಿಶೇಷ ನ್ಯಾಯಾಲಯ ತೀರ್ಮಾನಿಸದೆ. ಜಪ್ತಿ ಮಾಡಲಾದ ಬೆಲೆಬಾಳು ವಸ್ತುಗಳನ್ನ ಆರ್‌ಬಿಐ ಎಸ್‌ಬಿಐ ಅಥವಾ ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಬೇಕು ಅದರಿಂದ ಬಂದ ಹಣವನ್ನು ದಂಡದ ಮೊತ್ತಕ್ಕೆ ಹೊಂದಾಣಿಕೆ ಮಾಡಬೇಕು ಎಂದು ನಿರ್ದೇಶಿಸಿತ್ತು. ಈ ನಡುವೆ ಜೈಲಲ್ಲಿ ಅಮೃತಪಟ್ಟಿದ್ದರು. ವಶಪಡಿಸಿಕೊಂಡಂತಹ ಆಸ್ತಿ ಈಗ ತಮಿಳುನಾಡಿನ ಆಸ್ತಿ ಆಗಲಿದೆ ಎಂದು ವಿಶೇಷ ಪೀಠ ತಿಳಿಸಿದೆ. ಜೈಲಲಿತ ಅವರ ಆಸ್ತಿಗಳು ಈಗ ತಮಿಳುನಾಡಿನ ಆಸ್ತಿ ಆಗಲಿದ್ದು ಅದು ಅಲ್ಲಿನ ಪ್ರಜೆಗಳ ಶ್ರೇಯಾಭಿವೃದ್ಧಿಗೆ ಬೆಳಸ್ಬೇಕೆಂದು ಪೀಠ ತೀರ್ಮಾನಿಸಿದೆ. ಅಕ್ರಮ ನಿವೇಶನಗಳನ್ನು ಬಡವರಿಗೆ ಹಂಚಬಹುದು ಅಥವಾ ಕೈಗಾರಿಕೋದ್ಯಮಕ್ಕೆ ಬಳಸಿಕೊಳ್ಳಬಹುದು ಉಳಿದ ಚಿನ್ನಾಭರಣಗಳನ್ನು RBI ಗೆ ಮಾರಾಟ ಮಾಡಿ ಬಂದ ಹಣದಲ್ಲಿ ಶಿಕ್ಷಣ ಆರೋಗ್ಯ ಮೂಲಸೌಕರ್ಯಕ್ಕೆ ಬಳಸಬಹುದು ಎಂದು ಪೀಠ ತಿಳಿಸದೆ
ಜಲಲಿತಾ ಅವರ ಈ ಸಂಪತ್ತಿನ ಪಟ್ಟಿಯನ್ನು ನೋಡಿದರೆ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ರಾಜ್ಯವನ್ನ ಎಷ್ಟು ಲೂಟಿ ಮಾಡಿರಬಹುದು ಎಂದು ತಿಳಿಯುತ್ತದೆ ತಂಗರಂಗೈ, ಅಮ್ಮ ಎಂದರೆ ತಮಿಳುನಾಡಿನ ಪ್ರಜೆಗಳು ಇವರನ್ನು ಕರಿತಾ ಇದ್ರು, ಆದರೆ ಅವರ ಆಸ್ತಿಯನ್ನೇ ಲೂಟಿ ಮಾಡಿದ್ರು.ಇವರು ಆಸ್ತಿಗಳಿಕೆ ಮಾಡುವುದಕ್ಕಿಂತ ಅದೇ ಹಣವನ್ನು ರಾಜ್ಯದ ಉದ್ಧಾರಕ್ಕೆ ಅಥವಾ ರಾಷ್ಟ್ರದ ಉದ್ಧಾರಕ್ಕೆ ಜಯಲಲಿತಾ ಅವರು ಬಳಸಿದ್ದರೆ ಬಹುಶಃ ಜನರ ಕಣ್ಣಿನಲ್ಲಿ ದೊಡ್ಡವರಾಗುತ್ತಿದ್ದರೇನೋ? ಇನ್ನೊಂದು ದೃಷ್ಟಿಕೋನದಲ್ಲಿ ಜಯಲಲಿತಾ ಅವರನ್ನ ನೋಡಿದ್ರೆ ಜಯಲಲಿತಾ ಒಬ್ಬರು ದಿಟ್ಟ ಮಹಿಳೆ. ಒಬ್ಬಮಹಿಳೆ ಮನಸ್ಸು ಮಾಡಿದರೆ ಯಾವ ಹಂತಕ್ಕಾದರು ಹೋಗಬಹುದ ಎಂಬುದಕ್ಕೆ ಜಯಲಲಿತಾಗಿಂತ ಇನ್ನೊಂದು ಉದಾಹರಣೆ ಬೇಕಿಲ್ಲ. ಕರುಣಾನಿಧಿಯವರ ಸರ್ಕಾರದ ವಿರುದ್ದ ಪ್ರತಿಜ್ಞೆಯನ್ನ ಮಾಡಿದ್ದಂತಹ ಜಯಲಲಿತಾ ಅದನ್ನ ಮುಖ್ಯಮಂತ್ರಿಯಾಗಿ ಸಾಧಿಸಿದ್ದರು. ಜಯಲಲಿತಾ ಮುಖ್ಯಮಂತ್ರಿಯಾದ ನಂತರ ಕರುಣಾ ನಿಧಿಯವರು ಜಯಲಲಿತಾ ಎದುರಿಗೆ ನಿಲ್ಲುವುದಕ್ಕೂ ಭಯ ಪಡುತ್ತಿದ್ದರು. ಈಗ ಅವರ ಆಸ್ತಿ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ಜನರಿಂದ ಪಡೆದಂತಹ ಲೂಟಿ ಮಾಡಿದಂತಹ ಆಸ್ತಿ ಸಂಪತ್ತು ಈಗ ಜನರಿಗೆ ತಲುಪುತ್ತಿದೆ. ಇನ್ನಾದರೂ ಪೈಪ್‌ಗಳಲ್ಲಿ ಬಾತ್ರೂಮ್ ಗಳಲ್ಲಿ ಅಕ್ರಮ ಹಣವನ್ನು ಇಡುವಂತಹ ನಮ್ಮ ಎಲ್ಲ ರಾಜಕಾರಣಿಗಳಿಗೂ ಜೈಲಲಿತಾರವರ ಕಥೆ ಮಾದರಿಯಾಗಬಹುದೇನೋ ?
ಮೇಘಾ ಜಗದೀಶ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ