Alma Corner

ಶೀತಗಾಳಿಗೆ ತತ್ತರಿಸಿದ ಜಮ್ಮು ಮತ್ತು ಕಾಶ್ಮೀರ!!

                  ಜಮ್ಮು ಕಾಶ್ಮೀರ ಹಾಗೂ ಲಡಾಖ್‌ ಭಾಗಗಳು ತೀವ್ರವಾದ ಶೀತಗಾಳಿಗೆ ತತ್ತರಿಸಿವೆ. ಕಣಿವೆ ರಾಜ್ಯದಾದ್ಯಂತ ಉಷ್ಣಾಂಶ ಶೂನ್ಯ ಡಿಗ್ರಿಗಿಂತಲೂ ಕೆಳಕ್ಕೆ ಕುಸಿದಿದೆ. ಲಡಾಖ್‌ ಭಾಗದ ʼನ್ಯುಮಾʼ ಹಳ್ಳಿಯಲ್ಲಿ, ಈ ಭಾಗದ ಕನಿಷ್ಠ ತಾಮಪಾನ, -18.3 ಡಿಗ್ರಿ ಸೆಲ್ಸಿಯಸ್‌ʼನಷ್ಟು ದಾಖಲಾಗಿದ್ದರೆ, ದ್ರಾಸ್‌ ಪ್ರದೇಶದಲ್ಲಿ -14 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಲೇಹ್‌ ಪಟ್ಟಣದಲ್ಲಿ, ಈ ಋತುವಿನಲ್ಲೇ ಅತ್ಯಂತ ಕನಿಷ್ಠ -9.6 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಲಡಾಖ್‌ ಭಾಗವನ್ನು ಜಮ್ಮು ಮತ್ತು ಕಾಶ್ಮೀರದೊಂದಿಗೆ ಸಂಪರ್ಕಿಸುವ ಜೊ-ಜಿಲಾ ಪಾಸ್‌ʼನಲ್ಲಿ, -18 ಡಿಗ್ರಿ ಸೆಲ್ಸಿಯಸ್‌ʼನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ.

ಬಾರಾಮುಲ್ಲಾ :ಭಾನುವಾರ ಬಾರಾಮುಲ್ಲಾದ ತಂಗ್‌ಮಾರ್ಗ್‌ನಲ್ಲಿ ಹಿಮಪಾತ ಆದ ನಂತರ ಹಿಮದಿಂದ ಆವೃತವಾದ ವಾಹನಗಳು. (ANI Photo)

                  ಇನ್ನು ಕಾಶ್ಮೀರ ಭಾಗದಲ್ಲೂ ತಾಪಮಾನ ತೀವ್ರ ಕುಸಿತ ಕಂಡಿದ್ದು, ಶ್ರೀನಗರದಲ್ಲಿ -2.1 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ. ದಕ್ಷಿಣ ಕಾಶ್ಮೀರ, ಅತ್ಯಂತ ಚಳಿಯಿರುವ ಪ್ರದೇಶಗಳಲ್ಲೊಂದು ಎಂದು ಗುರುತಿಸಿಕೊಂಡಿದ್ದು, ಪಾಲಮ್‌ ಪ್ರದೇಶದಲ್ಲಿರುವ ಪ್ರವಾಸೀ ರೆಸಾರ್ಟ್‌ʼನಲ್ಲಿ -5.3 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ. ಶೋಪಿಯಾನ್‌ ಜಿಲ್ಲೆ, ಕಾಶ್ಮೀರ ಭಾಗದಲ್ಲೇ ತೀವ್ರ ಚಳಿಯಿರುವ ಜಿಲ್ಲೆ ಎಂದು ಗುರುತಿಸಿಕೊಂಡಿದ್ದು, ಅಲ್ಲಿ -5.5 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ. “ಈ ವರ್ಷದ ಚಳಿಗಾಲ ದೀರ್ಘವಾಗಿರಲಿದ್ದು, ಉಷ್ಣಾಂಶ, ಮಳೆ ಮತ್ತು ಹಿಮಪಾತಗಳು ತೀವೃವಾಗಿರಲಿವೆ” ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

                  ತೀವ್ರ ಚಳಿಯಿಂದ ಕೂಡಿರಲಿರುವ, ʼಚಿಲಾಯ್‌ ಕಲಾನ್‌ʼ ಎಂದು ಕರೆಯಲ್ಪಡುವ 40 ದಿನಗಳ ಅವಧಿಯು, ಈ ವರ್ಷದ ಡಿ.21 ರಿಂದ ಆರಂಭಗೊಳ್ಳಲಿದ್ದು, ʼಲಾ-ನಿನಾʼದ ಪರಿಣಾಮವು, ಚಳಿ ಮತ್ತು ಮಳೆಯ ಪ್ರಮಾಣವನ್ನು ಹಲವು ಪಟ್ಟು ಹೆಚ್ಚಿಸಲಿದೆ ಎಂದು ಅಂದಾಜಿಸಲಾಗಿದೆ.  

ಗಜಾನನ ಭಟ್‌

ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿ

Show More

Leave a Reply

Your email address will not be published. Required fields are marked *

Related Articles

Back to top button