ಅನುದಾನದಿಂದ ವಂಚಿತವಾದ ಜಾನಪದ ಲೋಕ..!

ಜಾನಪದ ಕಲೆಗಳ ಸಾಂಸ್ಕೃತಿಕ ಕೇಂದ್ರ ಹಾಗೂ ವಸ್ತು ಸಂಗ್ರಹಾಲಯದ ಜಾನಪದ ಲೋಕಕ್ಕೆ ಸರ್ಕಾರ ನೀಡಿದಂತಹ ಅನುದಾನ ಪೂರ್ಣ ಪ್ರಮಾಣದಲ್ಲಿ ಕೈ ಸೇರುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಬಜೆಟ್ ನಲ್ಲಿ ಜಾನಪದ ಕಲೆ ಸಾಂಸ್ಕೃತಿಕ ಕೇಂದ್ರ ಹಾಗೂ ವಸ್ತು ಸಂಗ್ರಹಾಲಯಕ್ಕೆ ಎರಡು ಕೋಟಿ ವಿಶೇಷ ಅನುದಾನವನ್ನ ನೀಡಲಾಗಿತ್ತು. ಆದರೆ ಅದರಲ್ಲಿ ಒಂದು ಕೋಟಿ ಮಾತ್ರ ಬಿಡುಗಡೆಯಾಗಿದೆ. ಇನ್ನುಳಿದ ಒಂದು ಕೋಟಿ ಬಿಡುಗಡೆಯಾಗಿಲ್ಲ ಇದೀಗ ಮತ್ತೊಂದು ಬಜೆಟ್ ಮಂಡಿಸುವ ಸಮಯ ಬಂದರು ಸಹ ರಾಜ್ಯ ಸರ್ಕಾರ ಬಾಕಿ ಇರುವ ಇನ್ನೊಂದು ಕೋಟಿಯನ್ನು ಬಿಡುಗಡೆ ಮಾಡಿಲ್ಲ. ಇದರಿಂದ ಎಲ್ಲಿ ಅನುದಾನ ತಪ್ಪುವುದು ಎಂದು ಜಾನಪದ ಪರಿಷತ್ತಿಗೆ ಆತಂಕ ಶುರುವಾಗಿದೆ. ಬಾಕಿ ಇರುವ ಅನುದಾನಕ್ಕೆ ಪರಿಷತ್ತಿನ ಅಧಿಕಾರಿಗಳು ಹಾಗೂ ಅಧ್ಯಕ್ಷರು ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಗೆ ಅಲೆದು ಅಲೆದು ಹೈರಾಣಾಗಿ ಹೋಗಿದ್ದಾರೆ.

ಸಾಂಸ್ಕೃತಿಕ ಪರಂಪರೆ ಸಂರಕ್ಷಣೆಯ ಉದ್ದೇಶಕ್ಕಾಗಿ ಪರಿಷತ್ತು ಯುನೆಸ್ಕೋ ಮಾನ್ಯತೆ ಪಡೆದಿದೆ. ಆದರೆ ಕರ್ನಾಟಕದ ಜಾನಪದ ಪರಿಷತ್ತಿನ ಭಾಗವಾಗಿರುವಂತಹ ಜಾನಪದ ಲೋಕ ಆರ್ಥಿಕ ಬಲವಿಲ್ಲದೆ ಸಂಕಷ್ಟದಲ್ಲಿದೆ ಇದರಿಂದ ಜಾನಪದ ಲೋಕದ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಕಳೆದ ಬಜೆಟ್‌ನಲ್ಲಿ ಘೋಷಿಸಿದ ವಿಶೇಷ ಅನುದಾನ ಎರಡು ಕೋಟಿ ಪೈಕಿ ಒಂದು ಕೋಟಿ ಮಾತ್ರ ಬಿಡುಗಡೆಯಾಗಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಷ್ಟೇ ಮನವಿ ಮಾಡಿಕೊಂಡರು ಪ್ರಯೋಜನವಾಗುತ್ತಿಲ್ಲ ಎಂದು ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊಫೆಸರ್ ಬೋರಲಿಂಗಯ್ಯ ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಬೋರಲಿಂಗಯ್ಯ ಜಾನಪದ ಲೋಕಕ್ಕೆ ಬರಬೇಕಾದ ಬಾಕಿ ಒಂದು ಕೋಟಿ ವಿಶೇಷ ಅನುದಾನ ಜೊತೆಗೆ ಇಲ್ಲಿನ ಕಾರ್ಯ ಚಟುವಟಿಕೆಗೆ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಈ ಸಲದ ಬಜೆಟ್ ನಲ್ಲಿ 5 ಕೋಟಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಎಂದರು ಇದರ ಜೊತೆಗೆ ಮುಂಚೆ ಸರ್ಕಾರದಿಂದ ಪರಿಷತ್ತಿಗೆ 11 ಹುದ್ದೆ ಮಂಜೂರಾಗಿದ್ದವು. ಆ ಪೈಕಿ 9 ಮಂದಿ ಈಗಾಗಲೇ ನಿವೃತ್ತಿಯನ್ನು ಹೊಂದಿದ್ದಾರೆ. ಈಗ ಇಬ್ಬರಷ್ಟೇ ಉಳಿದಿದ್ದಾರೆ ಆ ಹುದ್ದೆಗಳ ಮರುಬರ್ತಿಗೆ ಸರ್ಕಾರ ಮುಂದಾಗುತ್ತಿಲ್ಲ. ಇದರಿಂದ ಲೋಕದ ಕಾರ್ಯ ಚಟುವಟಿಕೆಗಳಿಗೆ ಮಾನವ ಸಂಪನ್ಮೂಲದ ಕೊರತೆ ಎದುರಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಮೇಘಾ ಜಗದೀಶ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ