Politics
ಇಂದು ಜವಾಹರ್ ಲಾಲ್ ನೆಹರು ಪುಣ್ಯತಿಥಿ.
ನವದೆಹಲಿ: ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿ, ಭಾರತರತ್ನ ಶ್ರೀ. ಜವಾಹರಲಾಲ್ ನೆಹರು ಅವರು ಇಹಲೋಕ ತ್ಯಜಿಸಿ ಇಂದಿಗೆ 60 ವರ್ಷಗಳು ಸಂದಿವೆ. ಬ್ರಿಟಿಷರ ಅಧಿಪತ್ಯದ ಅಂತ್ಯ ಕಂಡಾಗ, ಭಾರತ ಧರ್ಮ, ಜಾತಿ ಎಂದು ಬಿರುಕು ಬಿಟ್ಟಿತ್ತು. ಆದರೆ ಆ ಸಂದರ್ಭದಲ್ಲಿ ಸಮಾಜವಾದಿ ಕಲ್ಪನೆಗಳನ್ನು ಹೊಂದಿದ್ದ ನೆಹರೂ ಅವರು ನಮ್ಮ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.
ಅಂದು ಭಾರತದಲ್ಲಿ ಇದ್ದಂತಹ ಅಲ್ಪ ಆದಾಯದಲ್ಲಿಯೇ, ದೂರದೃಷ್ಟಿ ಯೋಜನೆಗಳನ್ನು ಜಾರಿಗೆ ತಂದು, ಭಾರತವನ್ನು ಸದೃಢ ಮಾಡುವತ್ತ ಮೊದಲ ಅಡಿಗಲ್ಲು ಹಾಕಿದ ಮುತ್ಸದ್ಧಿ ಜವಾಹರ್ ಲಾಲ್ ನೆಹರು. ಅವರ ಆಡಳಿತದಲ್ಲಿ ನಿರ್ಮಾಣಗೊಂಡ ಸಂಸ್ಥೆಗಳೇ ಇಂದು ಬೃಹದಾಕಾರದಲ್ಲಿ ಬೆಳೆದು ನಿಂತಿದೆ.
ಅವರ ಪುಣ್ಯತಿಥಿಯಂದು ದೇಶದ ಸಾವಿರಾರು ಗಣ್ಯರು ಅವರ ಆಡಳಿತದ ವೈಖರಿ ಹಾಗೂ ಸಾಧನೆಗಳನ್ನು ಮೆಲುಕು ಹಾಕಿದ್ದಾರೆ.