ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜಯಮಾಲಾ ಮಗಳು ಸೌಂದರ್ಯ: ಅರಮನೆ ಮೈದಾನದಲ್ಲಿ ಅದ್ದೂರಿ ವಿವಾಹ ಮಹೋತ್ಸವ!

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಅದ್ದೂರಿ ಮದುವೆ ಸಂಭ್ರಮ! ಹಿರಿಯ ನಟಿ ಜಯಮಾಲಾ ಅವರ ಮಗಳು ಸೌಂದರ್ಯ ಹೊಸ ಬದುಕಿಗೆ ಕಾಲಿಡಲು ಸಜ್ಜಾಗಿದ್ದಾರೆ. ಪೊಲೀಸ್ ಮಹಾ ನಿರ್ದೇಶಕ ಕೆ. ರಾಮಚಂದ್ರ ರಾವ್ ಮತ್ತು ರೋಹಿಣಿ ಪುತ್ರ ರುಷಬ್ ಕೆ. ಅವರೊಂದಿಗೆ ಸೌಂದರ್ಯ ದಾಂಪತ್ಯ ಜೀವನಕ್ಕೆ ಪ್ರವೇಶಿಸುತ್ತಿದ್ದಾರೆ.

ಅರಮನೆ ಮೈದಾನದಲ್ಲಿ ರಾಜಮನೆತನದ ಛಾಪು!
ಮದುವೆ ಫೆಬ್ರವರಿ 9 ಮತ್ತು 10 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಲಿದೆ. ಇಡೀ ಸ್ಥಳವನ್ನು ಭವ್ಯವಾಗಿ ಅಲಂಕರಿಸಲಾಗಿದ್ದು, ದಕ್ಷಿಣ ಭಾರತದ ಸಿನಿಮಾ ತಾರೆಯರು, ರಾಜಕೀಯ ಗಣ್ಯರು ಹಾಗೂ ಉದ್ಯಮಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಹಳದಿ ಶಾಸ್ತ್ರ – ತಾರೆಯರ ಹಬ್ಬ!
ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್ ಆಲ್ಲಿ ನಡೆದ ಹಳದಿ ಶಾಸ್ತ್ರ ವಿಶೇಷ ಆಕರ್ಷಣೆಯಾಗಿತ್ತು. ಸುಧಾರಾಣಿ, ಮಾಳವಿಕಾ ಅವಿನಾಶ್, ಶ್ರುತಿ, ಪ್ರಿಯಾಂಕ ಉಪೇಂದ್ರ, ಅನು ಪ್ರಭಾಕರ್, ಭಾರತಿ ವಿಷ್ಣುವರ್ಧನ್ ಸೇರಿದಂತೆ ಹಲವಾರು ತಾರೆಯರು ಸಂಭ್ರಮದಲ್ಲಿ ಭಾಗವಹಿಸಿ ಹೊಸ ಜೋಡಿಗೆ ಶುಭಕೋರಿದರು.

ಮದುವೆ ಸಮಾರಂಭಕ್ಕೆ ರಾಜಕೀಯ, ಚಿತ್ರರಂಗ, ಕ್ರೀಡೆ, ಉದ್ಯಮ ಕ್ಷೇತ್ರದ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಅಪ್ಪು (ಪುನೀತ್ ರಾಜ್ ಕುಮಾರ್) ಇಲ್ಲದ ದುಃಖದ ಮಧ್ಯೆಯೂ ಶಿವಣ್ಣ, ಕಿಚ್ಚ ಸುದೀಪ್, ರಕ್ಷಿತಾ ಪ್ರೇಮ್, ರಮ್ಯಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಆಗಮನ ನಿರೀಕ್ಷಿಸಲಾಗಿದೆ.