ವೈರಲ್ ಆಯ್ತು, ಜಯಪ್ರಕಾಶ್ ಶೆಟ್ಟಿ ಅವರ ‘ಶೆಡ್ಡಿಗೆ ಬಾ’ ರೀಲ್.
ಬೆಂಗಳೂರು: ಖ್ಯಾತ ಸುದ್ದಿ ನಿರೂಪಕ ಜಯಪ್ರಕಾಶ್ ಶೆಟ್ಟಿ ಅವರ ರೀಲ್ ಈಗ ರಾಜ್ಯದಾದ್ಯಂತ ಈಗ ಫುಲ್ ವೈರಲ್ ಆಗಿದೆ. ರಾಜ್ಯದ ಹಲವಾರು ಜನರು, ಜಯಪ್ರಕಾಶ್ ಶೆಟ್ಟಿ ಅವರ ‘ಶೆಡ್ಡಿಗೆ ಬಾ’ ರೀಲ್‌ಗೆ ಬಾಯಿ ಕುಣಿಸಿದ್ದಾರೆ.
ಯಾವುದಿದು ‘ಶೆಡ್ಡಿಗೆ ಬಾ’ ರೀಲ್?
ಕಳೆದ ಕೆಲವು ದಿನಗಳಿಂದ ಶೆಡ್ ವಿಷಯ ರಾಜ್ಯದಲ್ಲಿ ಹಲವು ಕುತೂಹಲಕಾರಿ ಸಂಗತಿಗಳನ್ನು ಬೆಳಕಿಗೆ ತಂದಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಶೆಡ್ ಬಗ್ಗೆ ಭಾರೀ ಸುದ್ದಿ ಮಾಡಿತ್ತು. ರೇಣುಕಾ ಸ್ವಾಮಿ ಕೊಲೆಯಲ್ಲಿ ಎ1 ಆರೋಪಿ ಪವಿತ್ರಾ ಗೌಡ ತಮ್ಮ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಬಳಿ ಬಂದಾಗ ಮಾಧ್ಯಮದವರು ಅವರ ಚಿತ್ರ ಸೆರೆಹಿಡಿಯುತ್ತಿದ್ದರು. ಈ ಸಂದರ್ಭದಲ್ಲಿ ಕೋಪಗೊಂಡ ಅವರು, ಮಾಧ್ಯಮಗಳಿಗೆ “ಮಾಡಲು ಕೆಲಸ ಇಲ್ವಾ?” ಎಂದು ಕೇಳಿ ತನ್ನ ಅಹಂನ್ನು ತೋರಿಸಿದ್ದ. ಈ ಸಂದರ್ಭದಲ್ಲಿ ಜಯಪ್ರಕಾಶ್ ಶೆಟ್ಟಿ ಅವರು ಒಂದು ಟಿವಿ ಮಾಧ್ಯಮದಲ್ಲಿ ನಿರೂಪಣೆ ಮಾಡುತ್ತಾ, “ಬಾ, ಶೆಡ್ಡಿಗೆ ಹೋಗೋಣ ಬಾ” ಎಂದು ಟಾಂಗ್ ನೀಡಿದರು.
ಈಗ ಈ ವಾಕ್ಯವೇ ಇಂಟರ್ನೆಟ್ ನಲ್ಲಿ ಭಾರೀ ಹರಿದಾಡಿದೆ. ಆವೇಶದಲ್ಲಿ ಮಾತನಾಡಿದ ಈ ಸಾಲುಗಳು ಈಗ ರೀಲ್ಸ್ ಆಗಿ ಮನರಂಜನೆ ನೀಡುತ್ತಿದೆ.